ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ : ಸಮಸ್ಯೆಗೆ ಹೆದರದೆ ಎದುರಿಸಬೇಕು

Must Read

ಸಿಂದಗಿ: ದೇಶದಲ್ಲಿ ಪ್ರತಿ ಒಂದು ಘಂಟೆಗೆ ಹದಿನೆಂಟರಿಂದ ಇಪ್ಪತ್ತು ಆತ್ಮಹತ್ಯೆಗಳು  ಆಗುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವವರು ಹೆಚ್ಚಾಗಿ ಮಹಿಳೆಯರು ಇರುತ್ತಾರೆ. ಯಾಕೆಂದರೆ  ಹೆಣ್ಣು ಮಕ್ಕಳಲ್ಲಿ ಆತ್ಮಹತ್ಯೆ ಆಲೋಚನೆಗಳು ಬರುವುದು ತುಂಬಾ ಜಾಸ್ತಿ ಹಾಗೂ ಹೆಚ್ಚು ಪ್ರಯತ್ನ ಮಾಡುತ್ತಾರೆ. ಆತ್ಮಹತ್ಯೆಗೆ ಮಾನಸಿಕ ಖಿನ್ನತೆ ಮತ್ತು ಒತ್ತಡ ಕಾರಣವಾಗಿದೆ ಎಂದು  ಜಿಲ್ಲಾ ಮನೋರೋಗ ತಜ್ಞ ಡಾ. ಮಂಜುನಾಥ ಮಸಳಿ ಹೇಳಿದರು.

ಪಟ್ಟಣದ ಸಂಗಮ ಸಂಸ್ಥೆಯಲ್ಲಿ ನಡೆದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಮಾನಸಿಕ ಒತ್ತಡದಿಂದ ದುಃಖಕ್ಕೆ ಒಳಗಾಗಿ ಜೀವನದಲ್ಲಿ ಬೇಜಾರಾಗಿ ಊಟ ಮಾಡಲು ಆಗುವುದಿಲ್ಲ, ರಾತ್ರಿ ನಿದ್ರೆ ಬರೊದಿಲ್ಲ, ಚಿಂತೆಯಿಂದ ಅಳು ಬರುವುದು ಈ ರೀತಿ ಮಾನಸಿಕ ಖಾಯಿಲೆಗೆ ತುತ್ತಾಗಿ ಏಕಾಂತತೆ ಅನುಭವಿಸುತ್ತಾರೆ. ಇಂತಹ ಸಮಸ್ಯೆ ಇದ್ದಂತಹ ವ್ಯಕ್ತಿಗಳು ಮಾನಸಿಕ ತಜ್ಞರ ಸಲಹೆಯನ್ನು ಪಡೆದುಕೊಂಡು  ಅವಶ್ಯಕವೆನಿಸಿದರೆ ಚಿಕಿತ್ಸೆ ಪಡೆದುಕೊಂಡು ಅವರ ಆರೋಗ್ಯ ಕಾಪಾಡಬೇಕು. ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಒಂದು ಮನೆಯ ಸುತ್ತ ಮುತ್ತಲು ವಾಸಿಸುವ ಕನಿಷ್ಠ 130 ಜನರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಒತ್ತಡದಿಂದ ಹೊರ ಬರಲು ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದರಿಂದ ಮನಸ್ಸಿನ ಭಾರ ಕಡಿಮೆ ಆಗುತ್ತದೆ ಎಂದರು.

ಸಂಗಮ ಸಂಸ್ಥೆ ನಿರ್ದೇಶಕ ಫಾದರ್ ಆಲ್ವೀನ್ ಡಿಸೋಜರವರು ಮಾತನಾಡಿ, ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಸಮಸ್ಯೆಗಳು ಇರುತ್ತವೆ ಸಮಸ್ಯೆ ಇಲ್ಲದ ವ್ಯಕ್ತಿ ಇಲ್ಲ ಸಮಸ್ಯೆಗಳನ್ನು ಕಡೆಗಣಿಸಿ ಅದರಿಂದ ಹೊರಗೆ ಬಾರದೇ ಇದ್ದಲ್ಲಿ ಮಾನಸಿಕ ಖಾಯಿಲೆಯಾಗಿ ಪರಿವರ್ತನೆ  ಅಗುತ್ತದೆ. ಇದರಿಂದ ನಾವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ತಡೆಯಬೇಕಾದರೆ ನಾವು ಸಮಸ್ಯೆಗಳನ್ನು ಹಂಚಿಕೊಳ್ಳಬೇಕು ಈ ರೀತಿ ಮಾಡುವುದರಿಂದ ನಿಮ್ಮಲ್ಲಿ ಮಾನಸಿಕ ಭಾರ ಕಡಿಮೆ ಆಗುತ್ತದೆ ಹಾಗೂ ಯಾವುದೇ ಸಂಕೋಚ ಇಲ್ಲದೆ ವೈದ್ಯರ ಹತ್ತಿರ ಚಿಕಿತ್ಸೆ ಪಡೆದುಕೊಳ್ಳಿ. ತಾಯಂದಿರು ಆರೋಗ್ಯವಾಗಿರಬೇಕು ತಾಯಂದಿರು ಆರೋಗ್ಯವಂತರಿದ್ದರೆ ಎಲ್ಲರೂ ಆರೋಗ್ಯವಾಗಿರುತ್ತಾರೆ ಎಂದು ತಿಳಿಸಿದರು.

ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಡಾ. ಎಸ್ ಡಿ ಕುಲಕರ್ಣಿ ಇವರು ಮಾತನಾಡಿ, ಮದುವೆಯಾದ ಪ್ರತಿಯೊಂದು ಹೆಣ್ಣು ಮಕ್ಕಳು ಸಂಸಾರದ ಒತ್ತಡದಲ್ಲಿ ಆರೋಗ್ಯದ ಕಾಳಜಿಯನ್ನು ಮರೆತು ಬಿಡುತ್ತೀರಿ ಕುಟುಂಬದ ಸದಸ್ಯರು ಆರೋಗ್ಯ ದಿಂದ ಇರಬೇಕಾದರೆ ಮೊದಲು ತಾಯಿ ಆರೋಗ್ಯದಿಂದ ಇರಬೇಕು ಎಂದು ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಮನೋರೋಗ ಆಪ್ತ ಸಮಾಲೋಚಕಿ ಕುಮಾರಿ ಭಾಗ್ಯಶ್ರೀ ಹಾಗೂ ಸಂಗಮ ಸಂಸ್ಥೆಯ ಸಹ ನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿಮೆಲ್ಲೊ ಸೇರಿದಂತೆ ಸ್ವ-ಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.

ಶ್ರೀಮತಿ ತೇಜಸ್ವಿನಿ ಹಳ್ಳದಕೇರಿ ನಿರೂಪಿಸಿದರು. ರಾಜೀವ ಕುರಿಮನಿ ಸ್ವಾಗತಿಸಿದರು. ವಿಜಯ ವಿ ಬಂಟನೂರ ವಂದಿಸಿದರು.

Latest News

ಡಿ.೨೪ರಂದು ಡಾ.ಅನೀಲ ಕಾಕೋಡ್ಕರ್ ಅವರಿಗೆ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಸಿಂದಗಿ: ಪೂಜ್ಯಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನದಿಂದ ಕೊಡ ಮಾಡುವ ರಾಷ್ಟ್ರೀಯ ಭಾಸ್ಕರ ಪ್ರಶಸ್ತಿಯನ್ನು ಈ ಬಾರಿ ಪದ್ಮವಿಭೂಷಣ ಭಾರತೀಯ ಪರಮಾಣು ವಿಜ್ಞಾನಿ ಡಾ.ಅನೀಲ ಕಾಕೋಡ್ಕರ್ ಅವರಿಗೆ...

More Articles Like This

error: Content is protected !!
Join WhatsApp Group