ಸಿಂದಗಿ: ನವೆಂಬರ್ 12ರಂದು ಸಿಂದಗಿ ನ್ಯಾಯಾಲಯದಲ್ಲಿ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ನಾಗೇಶ ಕೆ ಮೊಗೇರ ಕರೆ ನೀಡಿದರು.
ಪಟ್ಟಣದ ಕೋರ್ಟ ಹಾಲ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಇ- ಲೋಕ್ ಮೆಗಾ ಅದಾಲತ್ ಆಯೋಜಿಸಲಾಗುತ್ತಿದೆ. ಸಿಂದಗಿ ತಾಲೂಕಿನ ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತಕ್ಷಣ ಪರಿಹಾರ ಪಡೆದುಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಲು ಅಂದು ಅದಾಲತ್ ಕೋರ್ಟ ಆವರಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಬೃಹತ್ ಲೋಕ ಅದಾಲತ್ ಪ್ರಾರಂಭವಾಗುವುದು. ಈ ಬೃಹತ್ ಲೋಕ್ ಅದಾಲತ್ ದಲ್ಲಿ ವಿವಿಧ ವ್ಯಾಜ್ಯಗಳ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಮೂರು ನ್ಯಾಯಾಧೀಶರ ಸಮ್ಮುಖದಲ್ಲಿ ಎರಡು ಕಕ್ಷಿದಾರರನ್ನು ರಾಜಿ ಮೂಲಕ ಮನವೊಲಿಸಿ ಇತ್ಯರ್ಥ ಗೊಳಿಸಲಾಗುವುದು ಎಂದರು.
ಜೆ.ಎಮ್.ಎಫ್.ಸಿ ಸಿವಿಲ್ ನ್ಯಾಯಾಧೀಶ ಮಹಾಂತೇಶ್ ಭೂಸಗೋಳ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆ.ಎಮ್.ಎಫ್.ಸಿ ಹರೀಶ್ ಜಾಧವ್ ಮಾತನಾಡಿ, ಪಕ್ಷಗಳಿಂದ ರಾಜಿ ಸೌಹಾರ್ದ ಮುಖಾಂತರ ಬಗೆಹರಿಸಲಾಗುವುದು. ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗದಿದ್ದರೂ ತಕ್ಷಣ ತಾಲೂಕು ಸೇವಾ ಸಮಿತಿಯು ಕಾನೂನು ಸಹಾಯಕ ಆಡಳಿತಾತ್ಮಕ ಸಂತೋಷಕುಮಾರ ಬಡಿಗೇರ ಅವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.