spot_img
spot_img

ಜಾಗತೀಕರಣದಿಂದ ಜನಪದ ಸಂಸ್ಕೃತಿ ನಾಶವಾಗುತ್ತಿದೆ – ಗೀತಯೋಗಿ

Must Read

- Advertisement -

ಸಿಂದಗಿ: ಜನಪದ ಸಾಹಿತಿಗಳು ಅನಕ್ಷರಸ್ಥರು ಕಾವ್ಯದ ಮೂಲಕ ಹಾಡುಗಳನ್ನು ಕಟ್ಟಿ ಹಾಡಿದ್ದಾರೆ ಅವರಿಗೆ ಯಾವುದೇ ಭಾಷೆಯ ಗಂಧ ಗೊತ್ತಿಲ್ಲ ಆದಾಗ್ಯೂ ಬರಹದ ಸಾಲುಗಳು ಹೂಮಾಲೆ ಇದ್ದ ಹಾಗೆ, ಈ ಪದಗಳು ಹೂ ಇದ್ದಂತೆ,  ವಿಷಯ ದಾರವಿದ್ದಂತೆ ಈ ಪದಗಳ ಜೋಡಣೆಯಿಂದ ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸಿದ್ದಾರೆ ಈ ಜಾಗತೀಕರಣ ಪ್ರಭಾವದಿಂದ ಜನಪದ ಸಂಸ್ಕೃತಿ ಕೊಂಡಿ ಕಳಚಿ ಹೋಗುತ್ತಿದೆ ಎಂದು ಸಾಲೋಟಗಿಯ ಸಾಹಿತಿ ಗೀತಯೋಗಿ ಶಿಕ್ಷಕರು ಕಳವಳ  ವ್ಯಕ್ತಪಡಿಸಿದರು.

ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಸಭಾ ಭವನದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು  ಸಹಯೋಗದಲ್ಲಿ  ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಜನಪದ ಸೊಗಡು ಕುರಿತು ಉಪನ್ಯಾಸ ನೀಡಿ, ಅನಕ್ಷರಸ್ಥರ ಹೆಣ್ಣು ಮಕ್ಕಳ ಮನೆಗಳಿಂದ ಹುಟ್ಟಿಕೊಂಡ ಜನಪದ ಸಾಹಿತ್ಯ ಹಳ್ಳಿಗಳಲ್ಲಿ ಅದು ಜೀವಂತವಾಗಿ ಉಳಿದುಕೊಂಡಿದೆ. ಜಗತ್ತಿನಲ್ಲಿ ಅನವಶ್ಯಕ ಪದಗಳು, ವಾಕ್ಯಗಳು ತುಂಬಿವೆ. ಆದರೆ ನಾವು ನಮ್ಮ ಬದುಕಿಗೆ ಸುಂದರ ಬರಹವನ್ನು ಕಟ್ಟಿಕೊಳ್ಳಬೇಕಾಗಿದೆ. ಕಾರಣ ನಾವೆಲ್ಲ ಶಹರ ಜೀವನದ ಕಡೆ ವಾಲುವದನ್ನು ಬಿಟ್ಟು ಹಳ್ಳಿಯ ಸೊಗಡನ್ನು ಉಳಿಸುವ ಕೆಲಸ ನಡೆಸಬೇಕಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪರಿಷತ್ತಿನ ದತ್ತಿದಾನಿ ಅಶೋಕ ಗಾಯಕವಾಡ ಮಾತನಾಡಿ, ಜನಪದ ಸಾಹಿತ್ಯದ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಮೂಲಕ ಕಳೆದ 10 ವರ್ಷಗಳಿಂದ ಮಾತೋಶ್ರೀ ಯಮನಾಬಾಯಿ ಮನೋಜಿರಾವ ಗಾಯಕವಾಡ ಅವರ ಸ್ಮರಣೆಯಲ್ಲಿ ದತ್ತಿ ಉಪನ್ಯಾಸ ಹಮ್ಮಿಕೊಳ್ಳುತ್ತ ಬರಲಾಗುತ್ತಿದೆ ಎಂದು ತಿಳಿಸಿದರು.

- Advertisement -

ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ, ಜನಪದ ಸಾಹಿತ್ಯ ಬದುಕಿನ ಪ್ರತಿಯೊಂದು ಕ್ಷೇತ್ರದಲ್ಲಿ ಹಾಸು ಹೊಕ್ಕಾಗಿ ವಿಜೃಂಭಿಸುತ್ತಿದೆ ಅದು ನಮಗೆ ಕಾಣುವುದಿಲ್ಲ. ಹಿಂದಿನ ಕಾಲದಲ್ಲಿ ಮನುಷ್ಯ ಹುಟ್ಟಿನಿಂದ ಮುಪ್ಪಾಗುವವರೆಗೂ ಅವರವರ ಶೈಲಿಯ ಮೂಲಕ ಬಣ್ಣಿಸುತ್ತ ಕುಟ್ಟುವ, ಬೀಸುವ, ಹಂತಿಯ, ಜೋಗುಳ, ಮದುವೆ ಸಂದರ್ಭದಲ್ಲಿ ಸಂಬಂಧಗಳ ಬೆಸೆಯುವ ಸೇರಿದಂತೆ ಬದುಕಿನ ಉದ್ದಕ್ಕು ಹುಟ್ಟಿಕೊಳ್ಳುವ ಪ್ರತಿ ಹಂತ ದೃಶ್ಯಗಳು ಜನಪದ ಹಾಡಿನಲ್ಲಿ ತೊಡಗಿಸಿಕೊಂಡು ಬೆಳೆಸಿದ್ದಾರೆ. ಕಾರಣ ಯುವ ಕಲಾವಿದರು, ಬರಹಗಾರರು ಇದ್ದರೆ ಅವರು ಮುಂದೆ ಬನ್ನಿ ಕನ್ನಡ ಸಾಹಿತ್ಯ ಪರಿಷತ್ತು ವೇದಿಕೆ ಕಲ್ಪಿಸಿಕೊಡುತ್ತದೆ ಎಂದು ಕರೆ ನೀಡಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಶರಣಬಸವ ಜೋಗೂರ ಮಾತನಾಡಿದರು.

ಕು. ವಿದ್ಯಾ ಪಾಟೀಲ ಪ್ರಾರ್ಥಿಸಿದರು. ಕಸಾಪ ದತ್ತಿ ಸಂಚಾಲಕ ಸಿದ್ದಲಿಂಗ ಕಿಣಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಂತೇಶ ನಾಯ್ಕೋಡಿ ಹಾಗೂ ಸಂಗಡಿಗರು ಕನ್ನಡ ಗೀತೆ ಹಾಡಿದರು. ಪ್ರಶಿಕ್ಷಣಾರ್ಥಿಗಳಾದ ಸಚೀನ ಮಠಪತಿ, ವೇದಶ್ರೀ ಪಾಟೀಲ ನಿರೂಪಿಸಿದರು. ಪ್ರಾಧ್ಯಾಪಕ ಡಿ ಎಸ್ ಮಠಪತಿ ವಂದಿಸಿದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group