spot_img
spot_img

ಡಾ.ಎಸ್.ಜಿ.ಜೈನಾಪೂರ ಅವರ ‘ಅಭಿವ್ಯಕ್ತಿ ಕಲಾ ಸಂಹಿತೆ’  ಕವನ ಸಂಕಲನ  ಲೋಕಾರ್ಪಣೆ

Must Read

spot_img
- Advertisement -

ಎಸ್.ವಿ.ಎನ್.ಕೆ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ವತಿಯಿಂದ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕ ಡಾ.ಎಸ್.ಜಿ.ಜೈನಾಪೂರ ಅವರ ‘ ಅಭಿವ್ಯಕ್ತಿ ಕಲಾ ಸಂಹಿತೆ ’  ಕವನ ಸಂಕಲನವನ್ನು ನಗರದ ಬಸವನಗುಡಿಯ ಡಿ.ವಿ.ಜಿ ರಸ್ತೆಯ ಶ್ರೀ ಸಾಯಿ ಜ್ಯೂವೆಲ್ಸ್ ಪ್ಯಾಲೆಸ್‍ನ ಮೇಲಿನ ಎಸ್.ವಿ.ಎನ್.ಕೆ ಪದವಿ ಕಾಲೇಜು ಸಭಾಂಗಣದಲ್ಲಿ ಎಸ್.ವಿ.ಎನ್.ಕೆ ಪದವಿ ಕಾಲೇಜು ಅಧ್ಯಕ್ಷ ಟಿ.ವಿ.ಸೆಂಥಿಲ್ ರವರು ಲೋಕಾರ್ಪಣೆಗೊಳಿಸಿದರು.

ವಿಜಯ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಲೇಖಕ ಡಾ.ಆರ್.ವಾದಿರಾಜು ಮಾತನಾಡುತ್ತ  ಕಾವ್ಯಕಲಾ ಪ್ರಕಾಶನ ಪ್ರಕಟಿಸಿರುವ ‘ ಅಭಿವ್ಯಕ್ತಿ ಕಲಾ ಸಂಹಿತೆ ’ 21 ಕವನಗಳ ಸಂಕಲನ;  ಎರಡನೇ ಶತಮಾನದ ಚೀನಿ ಕಾವ್ಯಗಳ ‘ದಿ ಆರ್ಟ್ ಆಫ್ ರೈಸಿಂಗ್’ಅನ್ನು  ಹಿರಿಯ ಸಾಹಿತಿ, ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕ ಡಾ.ಎಸ್.ಜಿ.ಜೈನಾಪೂರ ಕನ್ನಡಾನುವಾದಗೊಳಿಸಿರುವುದು ಚೀನಾ ಮತ್ತು ಕನ್ನಡ ಸಂಬಂಧಕ್ಕೆ ಸೇತುವೆಯಂತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಮಾತನಾಡುತ್ತ  ‘ಕಾವ್ಯ , ಸಂಸ್ಕೃತಿ ಮತ್ತು ಭಾಷೆಯ ಸೃಜನಶೀಲತೆಯ ಒಡನಾಟ , ಪರಸ್ಪರರ ಪ್ರಭಾವ ಕುರಿತು ಪ್ರೌಢ ಪ್ರಬಂಧ ಬರೆದಿರುವ ಶ್ರೀಯುತರು ನಾಲ್ಕು ದಶಕಗಳಿಗಿಂತ ಪ್ರಾಂಶುಪಾಲರಾಗಿ , ಬೆಂಗಳೂರು ವಿವಿಯ ಸೆನೆಟ್ , ಶೈಕ್ಷಣಿಕ ಪರಿಷತ್ತಿನ ಮಾಜಿ ಸದಸ್ಯರಾಗಿ ಸಕ್ರಿಯ , ದೀರ್ಘ ಸೇವೆ ಸಲ್ಲಿಸಿದ್ದಾರೆ. ಬೋಧನೆ , ಶೈಕ್ಷಣಿಕ ಆಡಳಿತ ಅವರ ವೃತ್ತಿಯಾದರೆ ಸೃಜನಶೀಲತೆ ಅವರ ಒಲವಿನ ಪ್ರವೃತ್ತಿ- ಪತ್ರಿಕೆಗಳಿಗೆ ಅಂಕಣಕಾರರಾಗಿ, ಬಾನುಲಿ ರೂಪಕಗಳನ್ನು ರಚಿಸಿ ಜನಮನ್ನಣೆಗಳಿಸಿದ್ದಾರೆ ಎಂದು ತಿಳಿಸಿದರು, ಪ್ರಾಂಶುಪಾಲ ಡಾ.ಸುಜಯ್ ಕುಮಾರ್, ನಿರ್ದೇಶಕ  ಸಾಗರ್ ಯು.ಎಸ್. ಉಪಸ್ಥಿತರಿದ್ದರು.

- Advertisement -
- Advertisement -

Latest News

ವಿಶ್ವ ಶಾಂತಿಗೆ ಕುವೆಂಪು ಚಿಂತನೆಗಳೇ ದಾರಿದೀಪ : ಡಾ. ಭೇರ್ಯ ರಾಮಕುಮಾರ್

ಇಂದು ವಿಶ್ವವನ್ನು ಕಾಡುತ್ತಿರುವ ಹಿಂಸೆ, ಭಯೋತ್ಪಾದನೆ, ಯುದ್ಧಗಳ ನಿವಾರಣೆಗೆ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವವೊಂದೇ ಪರಿಹಾರ ಎಂದು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group