ಕವನ: ಕ್ರಾಂತಿ ಕಿಡಿ ಭಗತ್ ಸಿಂಗ್

Must Read

ಕ್ರಾಂತಿ ಕಿಡಿ ಭಗತ್ ಸಿಂಗ್

ಮತ್ತೊಮ್ಮೆ ಜಗದಿ ಹುಟ್ಟಿ ಬರಲಿ
ಭಾರತಾಂಬೆಯ ಕರುಳ ಬಳ್ಳಿಯಲಿ
ಕ್ರಾಂತಿಯ ಕಿಡಿ ಎಲ್ಲೆಡೆ  ಹರಡಲಿ
ಎಲ್ಲ ಯುವಕ ಯುವತಿಯರಲಿ

ಯುವ ಜನತೆ ಮರೆತು ಹೋಗಿದೆ
ತಮ್ಮೊಳಗಿರುವ  ಶಕ್ತಿಯ ಮಹಿಮೆ
ಅಹಿತಕರ ಕೆಲಸದಿ ಮುಳುಗಿಹರು
ಸಿಂಹ ಶಕ್ತಿ ಹೊಂದಿದ ಕಲಿಗಳು

ನೀ ಬಂದೊಮ್ಮೆ ದಾರಿ ತೋರು
ತಿಳಿಸೊಮ್ಮೆ ಅವರ ಕರ್ಮವನು
ಭಾರತಮಾತೆಯು ಕೊರಗುತಿಹಳು
ತನ್ನ ಸಂತಾನದ ಸ್ಥಿತಿಯನು ಕಂಡು

ನಮಿಸುವೆ ಭಗವಂತ ನಿನಗೆ
ಕಳಿಸಿಕೊಡು ರುದ್ರನರೂಪದಿ
ಕಾಯುತಿಹಳು ಭುವನೇಶ್ವರಿ
ಕ್ರಾಂತಿ ಕಿಡಿಯ  ಬರುವಿಕೆಗಾಗಿ


ರಚನೆ ಶ್ರೀಮತಿ ಜ್ಯೋತಿ ಕೋಟಗಿ ಬೈಲಹೊಂಗಲ
ಬಿ ಆರ್ ಪಿ ಚ ಕಿತ್ತೂರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group