spot_img
spot_img

ಓಂ ದೇವೀ ಚಂದ್ರಘಂಟಾಯೈ ನಮಃ

Must Read

spot_img

ಓಂ ದೇವೀ ಚಂದ್ರಘಂಟಾಯೈ ನಮಃ

- Advertisement -

ಪಿಂಡಜಾ ಪ್ರವರಾರೂಢಾ
ಚಂಡಕೋಪಾಸ್ತ್ರಕೈರ್ಯುತಾ |
ಪ್ರಸೀದ ತನುತೇ ಮಹ್ಯಂ
ಚಂದ್ರಘಂಟೇತಿ ವಿಶ್ರುತಾ ||

ಯಾ ದೇವಿ ಸರ್ವಭೂತೇಷು
ಮಾ ಚಂದ್ರಘಂಟಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಅಕ್ಕಮಹಾದೇವಿ ಮೊದಲ ಬಾರಿ
ಅನುಭವಮಂಟಪಕ್ಕೆ ಬಂದಾಗ

- Advertisement -

ಅಲ್ಲಮರ ಕೇಳಿದ ನಾನಾ ತೆರನಾದ
ಪ್ರಶ್ನೆಗಳಿಗೆ ಉತ್ತರಿಸುತ್ತ

“ಭಾವಿಸಲು ಗಂಡುರೂಪ ನೋಡಾ”
ಎಂದು ಹೇಳುತ್ತಾಳೆ.

“ಭಾವಿಸಲು ಗಂಡುರೂಪ ನೋಡಾ”

- Advertisement -

ಇದು ಅಕ್ಕನ ವಚನ.
ಇದು ಅಕ್ಕನ ಮಾತು ಇದು ಅಕ್ಕನ ನಿಲುವು.

“ಭಾವಿಸಲು ನಾನು ಶಿವರೂಪ ನೋಡಾ”
ಭಾವಿಸಲು ನಾನು ಶಿವಾವತಾರ ನೋಡಾ”

ಇದು ದೇವೀ ಉವಾಚ.;
ಮಹಾದೇವಪತ್ನಿ ಮಹಾದೇವಿ
ಮಾ ಚಂದ್ರಘಂಟಾ ಉವಾಚ.

ಮಾ ಚಂದ್ರಘಂಟಾ ದೇವೀ ಉವಾಚ –

ಶಿವನ ಕೈಯಲ್ಲೂ ತ್ರಿಶೂಲವಿದೆ.
ನನ್ನ ಕೈಯಲ್ಲೂ ತ್ರಿಶೂಲವಿದೆ.

ಶಿವನ ಹಣೆಯ ಮೇಲೂ ಚಂದ್ರನಿದ್ದಾನೆ.
ನನ್ನ ಹಣೆಯ ಮೇಲೂ ಚಂದ್ರನಿದ್ದಾನೆ.

ಶಿವನು ಚಂದ್ರಧರನಾದರೆ
ನಾನು ಚಂದ್ರಧಾರಿಣಿ.

ಶಿವನು ಅರ್ಧಚಂದ್ರಧಾರಿಯಾದರೆ
ನಾನು ಚಂದ್ರಘಂಟಾಧಾರಿಣಿ
ಮತ್ತು ಘಂಟಾಚಂದ್ರಧಾರಿಣಿ.

ಶಿವನು ಅನಿಮಿಷನೇತ್ರ.
ನಾನೂ ಅನಿಮಿಷನೇತ್ರಳು.

ಶಿವನೂ ವಾಹನಾರೂಢ.
ನಾನೂ ವಾಹನಾರೂಢಳು.

ಶಿವನು ವೃಷವಾಹನನಾದರೆ
ನಾನು ಸಿಂಹವಾಹಿನಿ.

ನಾನು ಉಗ್ರಳೂ ಅಹುದು.
ನಾನು ಸೌಮ್ಯಳೂ ಅಹುದು.

ನಾನು ಕರುಣೆಯೂ ಅಹುದು;
ನಾನು ಕ್ರೌರ್ಯವೂ ಅಹುದು.

ನಾನು ನಿಷ್ಠರಿಗೆ ಕರುಣೆ;
ದುಷ್ಟರಿಗೆ ಕ್ರೌರ್ಯ.

ನಾನು ಶಿಷ್ಟರಿಗೆ ಅಭಯವಾದರೆ
ದುಷ್ಟರಿಗೆ ಭಯ ಮತ್ತು ಭಯವೋ ಭಯ!!

ನನ್ನ ಕೈಯಲ್ಲಿ
ತ್ರಿಶೂಲವೂ ಇದೆ, ಖಡ್ಗವೂ ಇದೆ.

ನನ್ನ ಕೈನಲ್ಲಿ
ಕಮಲವೂ ಇದೆ, ಕಮಂಡಲವೂ ಇದೆ

ನನ್ನ ಕೈನಲ್ಲಿ ಬಿಲ್ಲು, ಬಾಣ, ಗದೆಗಳೂ ಉಂಟು.
ನನ್ನ ಕೈನಲ್ಲಿ ಜಪಮಾಲೆಯೂ ಉಂಟು.

ನಾನು ವರದಹಸ್ತಳೂ ಅಹುದು;
ನಾನು ಅಭಯಹಸ್ತಳೂ ಅಹುದು.

ನಾನು ಭಯವೂ ಅಹುದು;
ನಾನು ಅಭಯವೂ ಅಹುದು.

ನಾನು ಒಲಿದರೆ ಅನುಕೂಲಸಿಂಧು;
ಮುನಿದರೆ ಪ್ರತಿಕೂಲಬಂಧು.

ನಾನು ಒಲಿದರೆ ನಾರಿ;
ಮುನಿದರೆ ಅಕ್ಷರಶಃ ಮಾರಿ, ಹೆಮ್ಮಾರಿ, ಮಹಾಮಾರಿ.

ನಾನು ಒಲಿದರೆ ಮಾ ಚಂದ್ರಘಂಟಾ.
ನಾನು ಮುನಿದರೆ ಚಂಡಿ, ರಣಚಂಡಿ.

ನಾನು ಭಯ, ಅಭಯವಷ್ಟೇ ಅಲ್ಲ;
ನಾನು ಉಭಯವೂ ಅಹುದು.

ನಾನು ಹರನೂ ಅಹುದು.
ನಾನು ಹರಿಯೂ ಅಹುದು.

ನಾನು ಹರಿಹರರೂಪಿಣಿ.
ನಾನು ಹರಿಹರರಸಮನ್ವಯ.

ನಾನು ಹರಿಹರಸಮನ್ವಯರೂಪಿಣಿ.

ನಾನು ಹರರೂಪಿಣಿಯೂ ಅಹುದು;
ನಾನು ಹರಿರೂಪಿಣಿಯೂ ಅಹುದು.
ನಾನು ಹರಿಹರಸಮರಸರೂಪಿಣಿ!!

ನನ್ನ ಕೈನಲ್ಲಿ ಹರನ ತ್ರಿಶೂಲವಿದೆ.
ನನ್ನ ಕೈನಲ್ಲಿ ಹರಿಯ ಗದೆ ಇದೆ.

ನನ್ನ ಕೈನಲ್ಲಿ ಹರನ ಜಪಮಾಲೆ ಇದೆ.
ನನ್ನ ಕೈನಲ್ಲಿ ಹರಿಯ ಕಮಲವಿದೆ.

ನನ್ನ ಕೈನಲ್ಲಿ ಹರಿಯ ಬಿಲ್ಲು, ಬಾಣಗಳಿವೆ.
ನನ್ನ ಕೈಯಲ್ಲಿ ಹರನ ಕಮಂಡಲು ಇದೆ.

ನಾನು ಹರನ ಹಾಗೆ ವರದಹಸ್ತೆಯೂ ಅಹುದು.
ನಾನು ಹರಿಯ ಹಾಗೆ ಅಭಯಹಸ್ತೆಯೂ ಅಹುದು.

ನೀವುಗಳು ಇನ್ನೊಂದು
ವಿಷಯವನ್ನು ಗಮನಿಸಿರಬಹುದು.

ಮುಖ್ಯತಃ ಮತ್ತು ಮೂಲತಃ
ನಾನು ಮಹಾದೇವನ ಪತ್ನಿ ಮಹಾದೇವಿ
ಪಾರ್ವತಿಯಾದರೂ

ನನ್ನ ಕಾರ್ಯವಿಧಾನ, ಕಾರ್ಯಶೈಲಿ
ಮತ್ತು ಕಾರ್ಯಕ್ಷಮತೆಯಿಂದಾಗಿ
ನನಗೆ ನೂರಾರು, ಸಾವಿರಾರು ಹೆಸರುಗಳಿವೆ.

ನನಗೆ ಚಂದ್ರಖಂಡಾ, ಚಂಡಿಕಾ, ರಣಚಂಡಿ…..
ಇತ್ಯಾದಿ ಸಹಸ್ರ ಸಹಸ್ರ ಹೆಸರುಗಳಿವೆ.

ನಿಮಗೂ ಗೊತ್ತಿದೆ…..,

ನಾನು ಸಮರಕ್ಕೂ ಸೈ, ಸೈರಣೆಗೂ ಸೈ.
ನಾನು ಸಮರಸಕ್ಕೂ ಸೈ, ಸಂಘರ್ಷಕ್ಕೂ ಸೈ.

ನಾನು ಅವಧಾನಕ್ಕೂ ಸೈ, ಅನವಧಾನಕ್ಕೂ ಸೈ.
ನಾನು ಅವತಾರಕ್ಕೂ ಸೈ, ಅವಾಂತರಕ್ಕೂ ಸೈ.

ನಿಮಗೆಲ್ಲ ಗೊತ್ತಿದೆ,

ನಾನು ನನ್ನ ಚಂದ್ರಘಂಟಾ ಅವತಾರದಲ್ಲಿ

“ರೆಡಿ ಫಾರ್ ಬ್ಯಾಟಲ್, ರೆಡಿ ಫಾರ್ ವಾರ್”
ವೇಷದಲ್ಲಿದ್ದೇನೆ.

ನಾನು ಯುದ್ಧಸಿದ್ಧತೆ
ಮತ್ತು ಯುದ್ಧಸನ್ನದ್ಧತೆಯ
ಕಾಸ್ಟ್ಯೂಮ್‌ (Costume)ನಲ್ಲಿದ್ದೇನೆ.

ನಾನು ಚಂದ್ರಘಂಟಾವತಾರದಲ್ಲಿ
ಯುದ್ಧಕ್ಕೆ ಸಿದ್ಧಳಾಗಿದ್ದೇನೆ
ಮತ್ತು ಯುದ್ಧಸನ್ನದ್ಧಳಾಗಿದ್ದೇನೆ.

ಈಗ ಮಾಡಬೇಕಾದ ಕೆಲಸವನ್ನು
ನನಗೆ ಈಗಲೇ ಮಾಡಿತೋರಿಸಬೇಕು.

ತಕ್ಷಣಕ್ಕೆ ಆಗುಮಾಡಬೇಕಾದ ಕೆಲಸವನ್ನು

“ಈಗ ಮಾಡುತ್ತೇನೆ, ಆಗ ಮಾಡುತ್ತೇನೆ,
ಹೋಗಿ ಮಾಡುತ್ತೇನೆ, ಬಂದು ಮಾಡುತ್ತೇನೆ”
ಎಂಬ ಇತ್ಯಾದಿ ಮಾತುಗಳನ್ನು
ಮತ್ತು ಸಬೂಬುಗಳನ್ನು
ಕೇಳಿಸಿಕೊಳ್ಳಲು ನಾನು ಸಿದ್ಧಳಿಲ್ಲ.

ನನಗೆ ವಿಲಂಬವಾಗಲಿ,
ತಡಮಾಡುವಿಕೆಯಾಗಲಿ
ಇಷ್ಟವಾಗುವುದಿಲ್ಲ.

ನನಗೆ ಯಾವಾಗಲೂ
ಎಲ್ಲವೂ ಯಥಾಶೀಘ್ರವಾಗಬೇಕು.

ನನ್ನದು “ಯಥಾಶೀಘ್ರ ಸ್ವಭಾವ”

ಮತ್ತು

ನನ್ನದು “ಯಥಾಶೀಘ್ರ ಜಾಯಮಾನ”.

“ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ” ಎಂದು ಕಾದುಕುಳಿತುಕೊಳ್ಳುವ ಜಾಯಮಾನ ನನ್ನದಲ್ಲ.

“ಯದಾ ಯದಾ” ಮತ್ತು “ತದಾ ತದಾ”
ಎಂಬೀ ಪದಗಳು
ನನ್ನ ಡಿಕ್ಶನರಿಯಲ್ಲಿ ಇಲ್ಲ.

ನನ್ನ ಡಿಕ್ಶನರಿಯಲ್ಲಿ ಇರುವುದು
ಒಂದೇ ಪದ ಅದು, “ಯಥಾಶೀಘ್ರ”!!

ಎಷ್ಟು ಸಾಧ್ಯವೋ ಅಷ್ಟು ಬೇಗ
ಮತ್ತು ಸಾಧ್ಯವಾದಷ್ಟು ಬೇಗ!!

ನಾನು ಸಮರಾಂಗಣಕ್ಕೆ ಇಳಿಯುವ
ಮುನ್ಸೂಚನೆ ಸಿಕ್ಕರೂ ಸಾಕು,

ರಾಕ್ಷಸರು ಸಮರಭೂಮಿಯಿಂದ
ಜಾಗಖಾಲಿಮಾಡುತ್ತಾರೆ.

ನನ್ನ ಚಂದ್ರಘಂಟಾ ಅವತಾರದಲ್ಲಿ
ನನ್ನ ಹಣೆಯ ಮೇಲಿರುವ

ಚಂದ್ರಾಕಾರದ ಘಂಟಾನಾದ
ಮಾತ್ರದಿಂದಲೇ ರಾಕ್ಷಸರ ಜಂಘಾಬಲವೆಲ್ಲ
ಉಡುಗಿಹೋಯಿತು.

ಅವರು ಹೇಳದೆಯೇ, ಕೇಳದೆಯೇ
ಯುದ್ಧಭೂಮಿಯಿಂದ
ಇನ್ನುಮುನ್ನಿಲ್ಲದ ಹಾಗೆ ಕಾಲ್ಕಿತ್ತರು.

ನಾನು ಎಂದರೆ ಹಾಗೇನೇ!!

ನಾನು ಒಲಿದರೆ ತವರುಮನೆ;
ಮುನಿದರೆ ಅರಗಿನಮನೆ!!

ನನ್ನನ್ನು ಕುರಿತು ನಿಮಗೆ ಹೆಚ್ಚಿಗೆ
ಏನನ್ನೂ ಹೇಳಬೇಕಿಲ್ಲ.

ನನ್ನ ವಿಷಯ ನನ್ನಕ್ಕಿಂತಲೂ
ನಿಮಗೇನೇ ಚೆನ್ನಾಗಿ ಗೊತ್ತುಂಟು.

ನಾನು ಈಗ ಹೇಳುವ ಈ ಕೆಳಗಿನ ಮಾತುಗಳನ್ನು
ಚೆನ್ನಾಗಿ ಕೇಳಿಸಿಕೊಳ್ಳಿ.
ನಾನು ಹೇಳುವ ಕಿವಿಮಾತುಗಳಿಗೆ ಕಿವಿಯಾಗಿ.

ನಾನು ಹೇಳುತ್ತಿದ್ದೇನೆ
ಮತ್ತು ಇದು ನನ್ನದೇ ಮಾತು –

“ಯಾವುದೇ ಕಾರಣಕ್ಕೂ ಹೆಣ್ಣನ್ನು ಹೆಣ್ಣೆಂದು
“ಅಂಡರ್ ಎಸ್ಟಿಮೇಟ್” ಮಾಡಬೇಡಿ.

ಯಾವುದೇ ಕಾರಣಕ್ಕೂ ಹೆಣ್ಣುಮಕ್ಕಳನ್ನು
ದುರ್ಬಲರೆಂದು, ಅಬಲೆಯರೆಂದು ಭಾವಿಸಬೇಡಿ.

ಸ್ತ್ರೀಶಕ್ತಿ ಮತ್ತು ಸ್ತ್ರೀಸಾಮರ್ಥ್ಯವನ್ನು
ಯಾವುದೇ ಕಾರಣಕ್ಕೂ “ಇಗ್ನರ್” ಮಾಡಬೇಡಿ.

ಸ್ತ್ರೀಶಕ್ತಿಯನ್ನು ಗಮನಬಾಹಿರವಾಗಿಸಬೇಡಿ
ಮತ್ತು ಸ್ತ್ರೀಶಕ್ತಿಯನ್ನು ಗೌಣವಾಗಿಸಬೇಡಿ.

ನಿಮಗೆಲ್ಲ ಗೊತ್ತು.

ಚಂದ್ರಘಂಟಾವತಾರದಲ್ಲಿ
ನಾನು ದಶಭುಜೆ.

ಬರೀ ನಾನು ಮಾತ್ರ ದಶಭುಜೆಯಲ್ಲ;

ಭೂಮಿಯಲ್ಲಿರುವ ಪ್ರತಿಯೊಬ್ಬ ಹೆಣ್ಣುಮಗಳು
ನನ್ನ ಹಾಗೆ ದಶಭುಜೆಯಾಗಿ ಕೆಲಸಮಾಡುತ್ತಾಳೆ.

ಭೂಮಿಯಲ್ಲಿರುವ ಪ್ರತಿಯೊಬ್ಬ ಹೆಣ್ಣುಮಗಳು
ಅಮ್ಮನಾಗಿ ಮಕ್ಕಳನ್ನು ಸುಧಾರಿಸುತ್ತಾಳೆ.

ಹೆಂಡತಿಯಾಗಿ ಗಂಡನ ಬೇಕು-ಬೇಡಗಳನ್ನುಸುಧಾರಿಸುತ್ತಾಳೆ.

ಅಜ್ಜಿಯಾಗಿ ಮೊಮ್ಮಕ್ಕಳನ್ನು ಸುಧಾರಿಸುತ್ತಾಳೆ.

ಗೃಹಿಣಿಯಾಗಿ ಮನೆ, ಮನೆತನಗಳನ್ನು ಸುಧಾರಿಸುತ್ತಾಳೆ.

ಯಜಮಾನಿಯಾಗಿ ಕುಟುಂಬದ
ಆಗು-ಹೋಗುಗಳನ್ನು ಸುಧಾರಿಸುತ್ತಾಳೆ.

ಹೆಣ್ಣುಮಕ್ಕಳಿಗೆ ಯಾವಾಗಲೂ
“ಶಿರೋಧಾರ್ಯ” ಗೌರವವನ್ನು ಕೊಟ್ಟುಕೊಂಡಿರಿ.

ಹೆಣ್ಣುಮಕ್ಕಳಿಗೆ ನೀವು ಗೌರವ ಕೊಟ್ಟುಕೊಂಡಿದ್ದರೆ
ಹೆಣ್ಣುಮಕ್ಕಳು ನಿಮಗೆ ಗೌರವವನ್ನು
ಕೊಟ್ಟುಕೊಂಡಿರುತ್ತಾರೆ.

“ಗಿವ್ ರಿಸ್ಪೆಕ್ಟ್ & ಟೇಕ್ ರಿಸ್ಪೆಕ್ಟ್”

Give Respect & Take Respect Policy

ಪಾಲಿಸಿಗೆ, ಸಿದ್ಧಾಂತಕ್ಕೆ ನೀವು ಬದ್ಧವಾಗಿರಿ.

“ಗಿವ್ ರಿಸ್ಪೆಕ್ಟ್ & ಟೇಕ್ ರಿಸ್ಪೆಕ್ಟ್’’

ವಿಷಯದಲ್ಲಿ ನೀವೇನಾದರೂ
ಯಾಮಾರಿದರೆ

ಹೆಣ್ಣುಮಕ್ಕಳು ಮಾರಿ,
ಮಹಾಮಾರಿಯಾಗಿ ನಿಲ್ಲುತ್ತಾರೆ, ಹುಷಾರು!!”

ಇದೆಲ್ಲವೂ ದೇವಿ ಉವಾಚ.
ಇದೆಲ್ಲವೂ ದೇವಿಯ ಘಂಟಾಘೋಷ!!

ನವರಾತ್ರಿಯ ಮೂರನೆಯ ದಿನದ
ಮಾ ಚಂದ್ರಘಂಟಾವತಾರಕ್ಕೆ

ಎಲ್ಲರ ಪರವಾಗಿ
“ನಮೋ ನಮಃ” ಮತ್ತು “ಓಂ ನಮಃ”


ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು

- Advertisement -
- Advertisement -

Latest News

ಕಿವುಡ ಮಕ್ಕಳ ಸಂಸ್ಥೆಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ಸರ್ಕಾರವು ವಿಕಲಚೇತನ ಸೇವಾ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಸ್ತುತ 2023ನೇ ಸಾಲಿನ ಉತ್ತಮ ಸಂಸ್ಥೆಯ ವಿಭಾಗದಡಿ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್,...
- Advertisement -

More Articles Like This

- Advertisement -
close
error: Content is protected !!
Join WhatsApp Group