ಸಮ್ಮೇಳನಾಧ್ಯಕ್ಷೆ ಆಶಾ ಕಡಪಟ್ಟಿಯವರ ಸತ್ಕಾರ

0
378

ಡಿಸೆಂಬರ್ 12ರಂದು ಅರಳಿಕಟ್ಟಿ ಗ್ರಾಮದಲ್ಲಿ ನಡೆಯಲಿರುವ ಬೆಳಗಾವಿ ತಾಲೂಕಿನ 8ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಆಶಾ ಕಡಪಟ್ಟಿ (ಮಠ) ರವರನ್ನು ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಲಾಯಿತು.

ಪ್ರಾರಂಭದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನಾಗಪ್ಪ ಕರವಿನಕೊಪ್ಪ ಸ್ವಾಗತಿಸಿದರು.

ತಾಲೂಕ ಅಧ್ಯಕ್ಷರಾದ ಸುರೇಶ ಹಂಜಿ, ಜಿಲ್ಲಾ ಕಾರ್ಯದರ್ಶಿಗಳಾದ ಎಂ ವೈ ಮೆಣಸಿನಕಾಯಿ, ಶಿವಾನಂದ ಹಲಕರಣಿಮಠ, ಎನ್ ಆರ್ ಮನೆನ್ನಿ, ಸುರೇಶ್ ಪಾರ್ವತಿ, ಎಂ ಜಿ ಪಾಟೀಲ್, ಗಿರೀಶ್ ಜಗಜಂಪಿ, ಶ್ರೀಮತಿ ರಾಜನಂದ ಘಾರ್ಗಿ ಮೊದಲಾದವರು ಉಪಸ್ಥಿತರಿದ್ದರು. ಕೊನೆಯಲ್ಲಿ ಡಾ.ಎಡಿ ಇಟಗಿ ವಂದಿಸಿದರು.