spot_img
spot_img

ಕಾವ್ಯ ಕಟ್ಟಿಕೊಂಡ ಮೀಸೆಯಂತಿರದೆ ಹುಟ್ಟಿಕೊಂಡ ಮೀಸೆಯಂತಿರಬೇಕು

Must Read

- Advertisement -

ಮುಡಲಗಿ: ಕವಿಯು ಮುಕ್ತ ಮನಸ್ಸಿನಿಂದ ಸೃಷ್ಟಿಯ ಸೌಂದರ್ಯದ ಭಾವನೆಯನ್ನು ಎಳೆದುಕೊಂಡಾಗ ಮಾತ್ರ  ಭಾವನಾತ್ಮಕ ಲೋಕದ ವಿಚಾರಗಳು ಅಭಿವ್ಯಕ್ತಗೊಳ್ಳುತ್ತವೆ ಎಂದು ಬೆಟಗೇರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಆರ್.ಎಸ್.ಅಳಗುಂಡಿ ಹೇಳಿದರು.

ಅವರು ರವಿವಾರದಂದು ಪಟ್ಟಣದ ಚೈತನ್ಯ ಶಾಲೆಯಲ್ಲಿ  ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಮೂಡಲಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಚೈತನ್ಯ ಆಶ್ರಮ ವಸತಿ ಶಾಲೆ ಆಶ್ರಯದಲ್ಲಿ ಜರುಗಿದ ಕವಿಗೋಷ್ಠಿ ಹಾಗೂ ಮುನ್ಯಾಳದ ಮಹಾನಿಂಗಪ್ಪ ಅಪ್ಪಣ್ಣ ಮುಗಳಖೋಡ ಅವರು ರಚಿಸಿದ “ಸಂಪಿಗೆ” ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಾವ್ಯ ಕಟ್ಟಿಕೊಂಡ ಮೀಸೆಯಂತೆ ಇರಬಾರದು, ಹುಟ್ಟಿಕೊಂಡ ಮೀಸೆಯಂತೆ ಇರಬೇಕೆಂದರು.

- Advertisement -

ಕಸಾಪ ಮೂಡಲಗಿ ತಾಲೂಕಾ ಘಟಕದ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಮಾತನಾಡಿ, ಕನ್ನಡ ರಕ್ಷಣೆ ಮಾಡುವಗೋಸ್ಕರ ಈಗಾಗಲೇ ಬಹಳಷ್ಟು ವೈವಿಧ್ಯಮಯ ಮತ್ತು ವಿನೂತನವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದೇವೆ. ಸಾಹಿತ್ಯ ಜ್ಞಾನ ಎಲ್ಲರಿಗೂ ಸಿಗುವಂತೆ ಮತ್ತು ಎಲೆಮರೆ ಕಾಯಿಯಂತಿರುವ ಯುವ ಬರಹಗಾರರಿಗೆ ಹಾಗೂ ಸಂಗೀತಗಾರರಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲಿಕ್ಕೆ  ಸಾಹಿತ್ಯ-ಸಂಗೀತ, ಚಿಂತನ-ಮಂಥನ  ಕಾರ್ಯಕ್ರಮವನ್ನು ಪ್ರತಿ ತಿಂಗಳು ಹುಣ್ಣಿಮೆಯ ದಿನದಂದು ನಡೆಸುತ್ತಿದ್ದೇವೆ, ಇಂದು ಕಾವ್ಯಾರ್ಥಿಗಳಿಗೆ  ಕಾವ್ಯ ಸಂಶೋಧನೆ ಮಾಡಲಿಕ್ಕೆ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ  ಎಂದರು

ಕವನ ಸಂಕಲನ ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಬಿ.ಪಿ.ಬಂದಿ ಮಾತನಾಡಿ, ನಿವೃತ್ತ ಶಿಕ್ಷಕ ಮುಗಳಖೋಡ ಅವರು ತಮ್ಮ ೮೩ನೇ ವಯಸ್ಸಿನಲ್ಲಿಯೂ  ಒಳ್ಳೆಯ “ಸಂಪಿಗೆ” ಕೃತಿಯನ್ನು ವೈಜ್ಞಾನಿಕವಾಗಿ ಬರೆದಿದ್ದಾರೆ, ತಮ್ಮ ಪ್ರಕೃತಿಯ ಸಂಗತಿ ಕುರಿತು ಹತ್ತು ಹಲವಾರು ಸಂಗತಿಯ ಕುರಿತು ಬಹಳಷ್ಟು ಸೊಗಸಾಗಿ ಕವನ ಸಂಕಲವನ್ನು ನಮ್ಮ ಕೈಗೆ ಕೊಡುವ ಮೂಲಕ ಸಾಹಿತ್ಯ ವಲಯಕ್ಕೆ ವಿಶೇಷವಾದ ಶಕ್ತಿ ನೀಡಿದ್ದಾರೆ ಎಂದ ಅವರು, ಮುಗಳಖೋಡ ಅವರ ಇನ್ನಷ್ಟು ಕವಿತೆಗಳು ಹೊರಗೆ  ಬರಲಿ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ಮಹಾದೇವ ಜಿಡ್ಡಿಮನಿ ಮಾತನಾಡಿ, ಬರವಣಿಗೆಯಲ್ಲಿ ಸಮಷ್ಟಿ ಪ್ರಜ್ಞೆ ಇರಲಿ, ನಾಡು-ನುಡಿಗೆ ಸ್ಪಂದಿಸಿದ ರಸಗವಳದ ವಿಭಿನ್ನ ಕವಿತೆಗಳು ಮೂಡಿ ಬಂದಿವೆ. ಬರಹಗಾರರಿಗೆ, ಕವಿಗಳಿಗೆ, ಸಾಹಿತಿಗಳಿಗೆ ಸಮಾಜದಲ್ಲಿ ಏನೋ ಮಾಡಬೇಕೆಂಬ ತುಡಿತವಿರುತ್ತದೆ. ಅಂಥವರ ಬದುಕು ಸಾರ್ಥಕವಾಗುತ್ತದೆ  ಎಂದರು.

- Advertisement -

“ಸಂಪಿಗೆ” ಕವನ ಸಂಕಲನ ರಚನಕಾರ ಮಹಾನಿಂಗಪ್ಪ  ಮುಗಳಖೋಡ  ಮಾತನಾಡಿದರು.

ಸಮಾರಂಭದ ವೇದಿಕೆಯಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ, ಬಿಆರ್‌ಸಿ ಅಧಿಕಾರಿ ವೈ.ಬಿ.ಪಾಟೀಲ, ಚೈತನ್ಯ ಅರ್ಬನ್ ಸೊಸೈಟಿ ಅಧ್ಯಕ್ಷ ಟಿ.ಬಿ.ಕೆಂಚರಡ್ಡಿ, ಡಿ.ಎಸ್.ಗೋಡಿಗೌಡರ, ಶಂಕರ ಗೋಡಿಗೌಡ್ರ ಇದ್ದರು. ಸಮಾರಂಭದಲ್ಲಿ ಚೈತನ್ಯ ಶಾಲೆಯ ಮುಖ್ಯೋಪಾಧ್ಯಾಯಿನಿ ಸಂಧ್ಯಾ ಪಾಟೀಲ, ರವಿ ಬರಮಾನಾಯ್ಕ, ಕಸಾಪದ ಬಿ.ವಾಯ್.ಶಿವಾಪೂರ, ಎ.ಎಚ್.ಒಂಟಗೋಡಿ, ವಾಯ್.ಬಿ.ಮಳಲಿ, ಮಹಾವೀರ ಸಲ್ಲಾಗೋಳ, ಶಿವಾನಂದ ಕಿತ್ತೂರ ಮತ್ತಿತರರು ಇದ್ದರು.

- Advertisement -
- Advertisement -

Latest News

ಕವನ: ಹೆಮ್ಮೆ ಪಡು ಭಾರತೀಯ ಮನವೆ

  ಹೆಮ್ಮೆ ಪಡು ಭಾರತೀಯ ಮನವೆ ಹೆಮ್ಮೆ ಪಡು ಭಾರತೀಯ ಮನವೆ ಸ್ವಾಭಿಮಾನದ ಸೌಧ  ತಲೆಯೆತ್ತಿದೆಯೆಂದು ! ಕರ್ತವ್ಯ ಪಥದಲ್ಲಿಂದು ಭಾರತ ಮುನ್ನಡೆಯುತ್ತಿದೆಯೆಂದು ! ತಳ್ಳಿ ಬಿಡು  ಒಣ ಪೂರ್ವಗ್ರಹವ ಜೋತು ಬಿದ್ದ ಆ 'ಮನು' ಮನದ ಬಿಳಲಿನಿಂದ ಕೆಳಗಿಳಿ ಹೆಮ್ಮೆ...
- Advertisement -

More Articles Like This

- Advertisement -
close
error: Content is protected !!
Join WhatsApp Group