ದಾಲ್ಮಿಯಾದಿಂದ ಬುದ್ದಿಮಾಂದ್ಯ ಶಾಲೆಗೆ ವಾಷಿಂಗ್ ಮಷಿನ್ ವಿತರಣೆ

Must Read

ಮೂಡಲಗಿ: ದಾಲ್ಮಿಯಾ ಭಾರತ ಪೌಂಢೇಶನದ ಮೂಡಲಗಿ ತಾಲೂಕಿನ ಯಾದವಾಡ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯಿಂದ ಕರ್ನಾಟಕ ರಾಜ್ಯೋತ್ಸವ ನಿಮಿತ್ತವಾಗಿ ಮುಧೋಳದ ಬುದ್ದಿಮಾಂದ್ಯ ವಸತಿ ಶಾಲೆಗೆ ವಾಷಿಂಗ್ ಮಷಿನ್, ಊಟದ ಪಾತ್ರೆ ಹಾಗೂ ಅನಾಥಾಶ್ರಮಕ್ಕೆ ಆಹಾರ ಸಾಮಗ್ರಿಗಳನ್ನು ವಿತರಿಸಿದರು.

ದಾಲ್ಮಿಯಾ ಕಾರ್ಖಾನೆಯ ಬೆಳಗಾವಿ ವಿಭಾಗದ ಮುಖ್ಯಸ್ಥ ಪ್ರಭಾತ್ ಕುಮಾರ ಸಿಂಗ್ ಮಾತನಾಡಿ, ಶಾಲೆಯ ಶಿಕ್ಷಕರ ಕಾರ್ಯ ಶ್ಲಾಘನೀಯ, ಬುದ್ದಿಮಾಂದ್ಯ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಪುಣ್ಯದ ಕೆಲಸಕ್ಕೆ ನಿಮಗೆ ದೇವರು ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಎಂದು ಹಾರೈಸಿ, ಮುಂದೆಯು ದಾಲ್ಮಿಯಾ ಸಂಸ್ಥೆಯಿಂದ ಸಹಾಯ ಸಹಕಾರ  ನೀಡುವದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ  ಸ್ಪೂರ್ತಿ ಮಹಿಳಾ ಕ್ಲಬ್ ಅಧ್ಯಕ್ಷೆ  ವಂದನಾ ಸಿಂಗ್, ಕಾರ್ಖಾನೆಯ ವಿವಿಧ ವಿಭಾಗದ ಹಿರಿಯ ಅಧಿಕಾರಿಗಳಾದ  ಅಜಯಕುಮಾರ ಸಿಂಗ್,  ಜಯಶಂಕರ ತಿವಾರಿ, ಅರಭಿಂದ್‍ಕುಮಾರ ಸಿಂಗ್, ಉಮೇಶ ದೇಸಾಯಿ ಹಾಗೂ ರಾಮನಗೌಡ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.

Latest News

ಗಾರ್ಡನ್ ಅಭಿವೃದ್ದಿಗೆ  ರೂ.೨೩.೩೯ ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ

ಸಿಂದಗಿ; ಆಯಾ ವಾರ್ಡುಗಳು ಸಾರ್ವಜನಿಕರು, ವಯೋ ವೃದ್ಧರು ವಾಯು ವಿಹಾರಕ್ಕೆ ಅನುಕೂಲವಾಗಲೆಂದು ಪಟ್ಟಣದ ಎಲ್ಲ ಉದ್ಯಾನವನಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಒಟ್ಟು ೭೨...

More Articles Like This

error: Content is protected !!
Join WhatsApp Group