ಸಮಾನ ಹಾಗೂ ಉತ್ತಮ ಶಿಕ್ಷಣ ಎಲ್ಲರ ಹಕ್ಕು- ಅಪೇಕ್ಷಾ ಹೊಸಟ್ಟಿ

Must Read

ಮೂಡಲಗಿ: ಪಟ್ಟಣದ ಬಿ.ವಿ.ಸೋನವಾಲಕರ ಸಿಬಿಎಸ್‍ಸಿ ಶಾಲೆಯ ವಿದ್ಯಾರ್ಥಿಗಳಿಂದ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಡಿಜಿಟಲ್ ಶಿಕ್ಷಣದ ಮಹತ್ವದ ಕುರಿತು ರವಿವಾರ ಬೀದಿ ನಾಟಕ ನಡೆಸಿದರು.

ಈ ಸಂದರ್ಭದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿ ಅಪೇಕ್ಷಾ ಹೊಸಟ್ಟಿ ಮಾತನಾಡಿ, ಶಿಕ್ಷಣದಲ್ಲಿ ಹೆಣ್ಣು ಮಕ್ಕಳಿಗೂ ಸಮಾನ ಹಕ್ಕಿದೆ ಹಾಗೂ ಎಲ್ಲರೂ ತಮ್ಮ ಹೆಣ್ಣು ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಿದಲ್ಲಿ ಅವಳು ಅಸಾಧ್ಯವಾದುದನ್ನು ಸಾಧಿಸಬಲ್ಲಳು ಎಂದು ಪ್ರತಿಪಾದಿಸಿದರು.

ವಿದ್ಯಾರ್ಥಿಗಳಾದ ಕೇಶವ ಪಾಟೀಲ, ಬಸಪ್ಪ ಬಳಿಗಾರ್, ಭೂಮಿಕಾ ತುಕ್ಕನ್ನವರ್, ಭಾಗ್ಯ ಬಾರಿಕರ್ ನಾಟಕವನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ವೀರಣ್ಣ ಹೊಸೂರ, ಪ್ರಾಂಶುಪಾಲ ಪ್ರಶಾಂತ್, ಬೆಂಗಳೂರಿನ ಹಿಪ್ಪೋ ಕ್ಯಾಂಪಸ್ ಸಂಸ್ಥೆಯ ರಾಹುಲ್ ಉತ್ತುರೆ, ವಿಜೇತ್, ಶಿಕ್ಷಕರು ಭಾಗವಹಿಸಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group