ಬೀದರ – ಅಮಿತ್ ಷಾ ಮೈಸೂರಿಗೆ ಬಂದರೆ ನಮಗೇನೂ ತೊಂದರೆಯಿಲ್ಲ ನಾನೇಕೆ ತಲೆ ಕೆಡಿಸಿಕೊಳ್ಳಲಿ ಅವರಿಗೆ ನಮ್ಮ ಆತಂಕ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟಾಂಗ್ ನೀಡಿದರು.
ಬೀದರನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ನೈತಿಕತೆ ಉಳಿಸಿಕೊಂಡು ರಾಜಕೀಯ ಮಾಡಿದವರು ರಾಜ್ಯದ ಸ್ವಾಭಿಮಾನ ಹೇಗೆ ಕಾಪಾಡಬೇಕೆಂದು ನನಗೆ ಗೊತ್ತಿದೆ ಎಂದರು.
ವಿಕಾಸ ಸೌಧದಲ್ಲಿ ೧೦ ಲಕ್ಷ ಅಕ್ರಮ ಹಣ ಪತ್ತೆಯಾದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರದಲ್ಲಿ ಯಾರಿಗಾದರೂ ಹಣ ಕೊಡಲು ಹೋಗಿರುತ್ತಾರೆ. ಮೇಲ್ನೋಟಕ್ಕೆ ಇವರು ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳುತ್ತಾರೆ ಇದುವರೆಗೂ ಯಾವುದಾದರೂ ತನಿಖೆ ತಾರ್ಕಿಕ ಅಂತ್ಯ ಕಂಡಿದ್ದು ನೋಡಿದ್ದೀರಾ ಎಂದು ಪ್ರಶ್ನೆ ಮಾಡಿದರು.
ಈ ಸಲ ಜೆಡಿಎಸ್ ಗೆ ಎಲ್ಲಾ ಭಾಗದಲ್ಲೂ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದ ಕುಮಾರಸ್ವಾಮಿ, ಬೀದರನಲ್ಲಿ ಕನಿಷ್ಠ ೪ ಸ್ಥಾನ ಗೆಲ್ಲುವ ನಿರೀಕ್ಷೆಯಿದೆ ಎಂದರು.
ತಮ್ಮನ್ನು ಸೂಳೆಗೆ ಹೋಲಿಕೆ ಮಾಡಿರುವ ಎಸ್ ಟಿ ಸೋಮಶೇಖರ್ ಮೇಕೆ ಹರಿಹಾಯ್ದ ಎಚ್ಡಿಕೆ, ಈತ ಬೇರೆ ಬೇರೆ ದಂಧೆಗಳನ್ನು ನಡೆಸುತ್ತಿದ್ದಾನೆ ಅವನ ವಿಚಾರದಲ್ಲಿ ನಾನು ಚರ್ಚೆ ಮಾಡಿದ್ದೇನೆ. ಎಂದ ಅವರು, ಎಸ್ ಟಿ ಸೋಮಶೇಖರ ಕಚೇರಿಯಲ್ಲಿ ಸ್ಯಾಂಟ್ರೊ ರವಿ ಇದ್ದ ವಿಡಿಯೋ ಬಿಡುಗಡೆ ಮಾಡಿ, ಇಂಥ ವಿಡಿಯೋ ಗಳು ಇನ್ನೂ ಸಾಕಷ್ಟಿವೆ ನನ್ನನ್ನು ಕೆಣಕಿದರೆ ಇನ್ನೂ ಹೊರಬರುತ್ತದೆ ಹೆಣ್ಣು ಮಕ್ಕಳಿಗೆ ಇವರು ಇದೇ ರೀತಿ ಗೌರವ ಕೊಡುತ್ತಾರಾ ಎಂದು ಖಾರವಾಗಿ ಪ್ರಶ್ನಿಸಿದರು.
ವರದಿ: ನಂದಕುಮಾರ ಕರಂಜೆ, ಬೀದರ