- Advertisement -
ಮೂಡಲಗಿ: ತಾಲೂಕಿನ ಹೊಸಯರಗುದ್ರಿ ಗ್ರಾಮದಲ್ಲಿ ಶ್ರೀ ಈರಾಲಿಂಗೇಶ್ವರ ಜಾತ್ರಾಮಹೋತ್ಸವ ನಿಮಿತ್ತವಾಗಿ ಜ.11 ರಂದು ರಾತ್ರಿ 9-30ಕ್ಕೆ ಗ್ರಾಮದ ಶ್ರೀ ಲಕ್ಷ್ಮೀ ದೇವಿ ನಾಟ್ಯ ಸಂಘ ಅರ್ಪಿಸುವ 5ನೇ ಕಲಾಕುಸುಮ ದಿಲ್ಲಿ ಹೊಕ್ಕ ಪುಂಡ ಹುಲಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕ ಉಮೇಶ ಚಿಪ್ಪಲಕಟ್ಟಿ ತಿಳಿಸಿದಾರೆ.
ಸಮಾರಂಭದ ಸಾನ್ನಿಧ್ಯವನ್ನು ಮರೆಗುದ್ದಿಯ ಶ್ರೀ ನಿರುಪಾಧೀಶ್ವರ ಶ್ರೀಗಳು, ಹೊಸಯರಗುದ್ರಿಯ ಶ್ರೀ ಸಿದ್ಧಪ್ರಭು ಶಿವಾಚಾರ್ಯ ಶ್ರೀಗಳು, ಮಲ್ಲಯ್ಯ ಹಿರೇಮಠ, ಪ್ರಭು ಹಿರೇಮಠ ವಹಿಸುವರು.
ಶಾಸಕ ಹಾಗೂ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘನ ಅಧ್ಯಕ್ಷತೆ ವಹಿಸುವರು, ಸರ್ವೋತ್ತಮ ಜಾರಕಿಹೊಳಿ ಮತ್ತು ಡಾ.ರಾಜೇಂದ್ರ ಸಣ್ಣಕ್ಕಿ ಅಧ್ಯಕ್ಷತೆ ವಹಿಸುವರು ಹಾಗೂ ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಜನಪ್ರತಿನಿಧಿಗಳು ಮತ್ತಿತರರು ಭಾಗವಹಿಸುವರು.