ಗುರ್ಲಾಪೂರ ಗ್ರಾಮಕ್ಕೆ ಶಾಸಕರ ಭೇಟಿ

Must Read

ಗುರ್ಲಾಪೂರ – ಸಮೀಪದ ಗುರ್ಲಾಪೂರ ಗ್ರಾಮಕ್ಕೆ ಅರಭಾಂವಿ  ಶಾಸಕರು ಹಾಗು ರಾಜ್ಯ ಕೆ ಎಮ್ ಎಪ್.ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿಯವರು ಬುಧವಾರರಂದು ಖಾಸಗಿ ಕಾರ್ಯಕ್ರಮದ ನಿಮಿತ್ತ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮೂಡಲಗಿ ಪುರಸಭೆ ಸದಸ್ಯರಾದ ಶ್ರೀಮತಿ ಯಲವ್ವ ಪರಪ್ಪ ಗಡ್ಡೆಕಾರ ಇವರ ನಿವಾಸದಲ್ಲಿ  ಶಾಸಕರನ್ನು ಸನ್ಮಾನಿಸಲಾಯಿತು. ನಂತರ ಶಾಸಕರು ಗ್ರಾಮದ ಅಬಿವೃದ್ದಿಯ  ಕುರಿತು ಮಾತನಾಡುತ್ತಾ, ಅತಿ ಅವಶ್ಯವಾಗಿ ರಾಜ್ಯ ಹೆದ್ದಾರಿಯಿಂದ ಇಟನಾಳ ರಸ್ತೆಯವರೆಗೆ ಸುಗಮ ಸಂಚಾರ ಮಾಡಲು ಈಗಾಗಲೆ ಜಿಲ್ಲಾ ಪಂಚಾಯಿತ ಅನುದಾನದಲ್ಲಿ ಅಡಿಯಲ್ಲಿ ಟೆಂಡರ ಕರೆಯಲಾಗಿದ್ದು ಕಬ್ಬು ನುರಿಸುವ ಹಂಗಾಮು ಮುಗಿದ ತಕ್ಷಣ ಕಾಮಗಾರಿಗೆ ಚಾಲನೇ ನಿಡಲಾಗುವುದು  ಮತ್ತು  ಪುರಸಭೆ ಹಾಗು ಗ್ರಾಮ ಪಂಚಾಯತ ಸದಸ್ಯರು ಗ್ರಾಮದ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಗಮನಹರಿಸಿ ಅದನ್ನು ನನ್ನ ಗಮನಕ್ಕೆ ತಂದು ಬೇಗನೆ ಕಾರ್ಯ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೂಡಲಗಿ ಪುರಸಭೆ ಸದಸ್ಯರಾದ ಆನಂದ ಟಪಾಲದಾರ, ಜಯಪ್ಪ ಪಾಟೀಲ, ರವಿ ಸಣ್ಣಕ್ಕಿ ಹಾಗು ಮಹಾದೇವ ಶೆಕ್ಕಿ, ಸಿದ್ದು ಗಡ್ಡೆಕಾರ, ಪ್ರಕಾಶ ಮುಗಳಖೋಡ, ಬಸವರಾಜ ಪಾಟೀಲ ಮಂಜು ಶಾಬನ್ನವರ, ಹಾಲಪ್ಪ ಗಡ್ಡೆಕಾರ, ಬಸವರಾಜ ಕುಲಗೋಡ, ಗೋಪಾಲ ಶಾಬನ್ನವರ, ಈಶ್ವರ ಮುಗಳಖೋಡ, ಶಿವರಾಜ ಶಿವಾಪೂರ, ಹಣಮಂತ ಗಡ್ಡೆಕಾರ, ಸಿದ್ದು ಕೊಟಗಿ, ಗಪಾರ ಡಾಂಗೆ, ಸುರೇಶ ನೇಮಗೌಡರ ಹಾಗು ಮೂಡಲಗಿ ಪರಸಭೆ ಸದಸ್ಯರು ಖಾನಟ್ಟಿ ಗ್ರಾಮಪಂಚಾಯಿತಿ ಸದಸ್ಯರು  ಆಗಮಿಸಿದ್ದರು. 

ನಂತರ ಗ್ರಾಮದ ಬಸವರಾಜ ಪಾಟೀಲ ಇವರ ನಿವಾಸಕ್ಕೆ ತೆರಳಿದಾಗ ಶಾಸಕರಿಗೆ  ಅಂಬೇಡ್ಕರ ಭಾರತ ಎಂಬ ಪುಸಕವನ್ನು ನೀಡಿ ಸನ್ಮಾಸಲಾಯಿತು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group