spot_img
spot_img

ಧರ್ಮದ ನಿಜವಾದ ಅರ್ಥವನ್ನು ಅರಿತು ಸಮಾಜ ಮುನ್ನಡೆಯಬೇಕಿದೆ: ಪ್ರೊ.ಶ್ರೀಕಾಂತ ಶಾನವಾಡ ಅಭಿಮತ

Must Read

spot_img
- Advertisement -

ದಿ. 19-02-2023 ರಂದು ಬೆಳಗಾವಿಯ ಮಹಾಂತೇಶ ನಗರದ ಹಳಕಟ್ಟಿ ಭವನದಲ್ಲಿ ನಡೆದ ವಾರದ ಸಾಮೂಹಿಕ ಪ್ರಾರ್ಥನೆ ಮತ್ತು ಅನುಭಾವ ಗೋಷ್ಠಿಯ ಸಂದರ್ಭದಲ್ಲಿ “ಪ್ರಚಲಿತ ಲಿಂಗಾಯತರ ಸ್ಥಿತಿಗತಿಗಳು” ಕುರಿತಾಗಿ ಉಪನ್ಯಾಸ ನೀಡಿದ ಬೆನನ್ ಸ್ಮಿತ್ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಶ್ರೀಕಾಂತ್ ಶಾನವಾಡ ಅವರು ಮಾತನಾಡುತ್ತಾ.

ಸಮಾಜದ ಭದ್ರ ಬುನಾದಿಗೆ ಶರಣರು ಹಾಕಿಕೊಟ್ಟ ಮಾರ್ಗ, ಬಸವಣ್ಣನವರ ಆಶಯಗಳು ಸದ್ಯದ ಪರಿಸ್ಥಿತಿಯಲ್ಲಿ ಪರೀಕ್ಷೆಗೆ ಒಳಪಡುವಂತಾಗಿವೆ. ರಾಜಕಾರಣಿಗಳ ನಿರೀಕ್ಷೆಯಂತೆ, ಪಟ್ಟಭದ್ರ ಹಿತಾಸಕ್ತಿಗಳ  ಸ್ವಾರ್ಥತೆಯಿಂದ ಶರಣರ ಹೆಸರುಗಳು, ಅವರ ವಚನಗಳ ಉಲ್ಲೇಖ ಮತ್ತು ಬಳಕೆಯಾಗುತ್ತಿರುವದು ತುಂಬಾ ವಿಷಾದನೀಯ. ಧರ್ಮ ರಾಜಕಾರಣಿಗಳ ಕೈಯಲ್ಲಿ ಅನುಕೂಲ ಸಿಂಧುವಾದ ಒಂದು ಸಾಧನವಾಗಿ  ಹೇಗೆ ಬಳಕೆಯಾಗುತ್ತಿದೆ ಎನ್ನುವುದನ್ನು ಉದಾಹರಣೆ ಸಮೇತ  ಪ್ರಸ್ಥಾಪಿಸಿದರು. ಸಂಘಟನೆಯ ಅಧ್ಯಕ್ಷರಾದ  ಈರಣ್ಣ ದೇಯನ್ನವರ ಮಾತನಾಡುತ್ತ, ಶರಣರ ವಚನಗಳು  ಜಗತ್ತಿಗೆ ಮಾದರಿಯಾಗಿರುವದನ್ನು ನೆನಪಿಸಿದರು.

ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ರಾಗಿ ಆಯ್ಕೆಯಾದ ಡಾ.ನಿರ್ಮಲಾ ಬಟ್ಟಲ ಅವರನ್ನು ಸತ್ಕರಿಸಲಾಯಿತು. ಶರಣರಾದ ಸತೀಶ ಪಾಟೀಲ ನಿರೂಪಣೆ ಮಾಡಿದರು. ಸ್ವಾಗತಪರ ನುಡಿಗಳನ್ನು ಶರಣರಾದ ಸುರೇಶ ನರಗುಂದ ಆಡಿದರು. ಶರಣೆ  ಶ್ರೀಮತಿ ಮಹಾದೇವಿ ಅರಳಿಯವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿತು. 

- Advertisement -

ಶರಣರಾದ ಶಿವಕುಮಾರ ಪಾಟೀಲ, ಜಯಶ್ರೀ ಚವಲಗಿ, ಸುವರ್ಣ ಗುಡಸ, ಮಹಾದೇವಿ ಅರಳಿಯವರಿಂದ ವಚನ ಗಾಯನ ನೆರವೇರಿತು. ಶರಣರಾದ ಸದಾಶಿವ ದೇವರಮನಿ, ಸಂಘಟನೆಯ ಉಪಾಧ್ಯಕ್ಷ ರಾದ ಸಂಗಮೇಶ ಅರಳಿ. ಶಶಿಭೂಷಣ ಪಾಟೀಲ,  ರಮೇಶ ಕಳಸಣ್ಣವರ, ಆನಂದ ಕರ್ಕಿ, ತಿಗಡಿ, ಕರಡಿಮಠ,ಶ್ರೀದೇವಿ ನರಗುಂದ, ಅಕ್ಕಮಹಾದೇವಿ ತೆಗ್ಗಿ, ಸುಜಾತಾ ಮತ್ತಿಕಟ್ಟಿ ಒಳಗೊಂಡಂತೆ  ಸಕಲ ಶರಣ ಬಳಗ  ಕಾರ್ಯಕ್ರಮದ ಯಶಸ್ವಿಗೆ ಮತ್ತು ಅಭಿನಂದನೆಗೆ ಅರ್ಹರಾದರು. ಪ್ರಸಾದ ಸೇವೆ ಶರಣರಾದ ಅಶೋಕ ಇಟಗಿಯವರಿಂದ ನೆರವೇರಿತು.

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group