spot_img
spot_img

ಭರದಿಂದ ಸಾಗಿದ ‘ವಿಜಯಪತಾಕೆ’

Must Read

ಬೆನಕನಕಟ್ಟಿ (ಧಾರವಾಡ): ‘ಶ್ರೀ ಬೊಮ್ಮಸಾಗರ ದುರ್ಗಾದೇವಿ ಪ್ರೊಡಕ್ಷನ್’ ಚಿತ್ರನಿರ್ಮಾಣ ಸಂಸ್ಥೆಯ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ‘ವಿಜಯಪತಾಕೆ’ ಕನ್ನಡ ಚಲನಚಿತ್ರದ ಚಿತ್ರೀಕರಣವು ಕಳೆದೊಂದು ವಾರದಿಂದ ಧಾರವಾಡ , ಬೆನಕನಕಟ್ಟಿ, ನಿಗದಿ ಸುತ್ತಮುತ್ತ ಸದ್ದಿಲ್ಲದೆ ಭರದಿಂದ ಚಿತ್ರೀಕರಣ ನಡೆಸಿದೆ.

ಈಗಾಗಲೇ ಶೇಕಡಾ ೮೦ ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಬಾಗಲಕೋಟ ಜಿಲ್ಲೆಯ ಸಿದ್ದನಕೊಳ್ಳದಲ್ಲೂ ಚಿತ್ರೀಕರಣ ನಡೆಸಿತ್ತು. ಸದ್ಯ ಮಾತಿನ ಭಾಗದ ಚಿತ್ರೀಕರಣವನ್ನು ಸಂಪೂರ್ಣ ಮುಗಿಸುತ್ತೇವೆ. ಹಾಡುಗಳನ್ನು ಗಜೇಂದ್ರಗಡ, ಕಾಲಕಾಲೇಶ್ವರ, ಶಿರ್ಶಿ,ಸಿದ್ದಾಪೂರ, ಜೋಗ, ದಾಂಡೇಲಿ, ಉಳವಿ ಸುತ್ತಮುತ್ತ ನಡೆಸುತ್ತೇವೆ. ಇದರಲ್ಲಿ ಸಂಪೂರ್ಣ ಕಿತ್ತೂರ ಕರ್ನಾಟಕ, ಕಲ್ಯಾಣ ಕರ್ನಾಟಕದ ಪ್ರತಿಭಾವಂತ ಕಲಾವಿದರೇ ಅಭಿನಯಿಸುತ್ತಿದ್ದಾರೆ. ತಾಂತ್ರಿಕ ವರ್ಗಕೂಡ ಇಲ್ಲಿನವರೇ ಹೆಚ್ಚಿದ್ದಾರೆ ಎಂದು ನಿರ್ದೇಶಕ ಆರ್.ಶೈನ್ ತಿಳಿಸಿದ್ದಾರೆ.

ನಾಯಕ ನಟನಾಗಿ ಆರ್.ಶೈನ್, ನಾಯಕಿಯಾಗಿ ರಾಘವಿ ಗೌಡ ,ಖಳನಾಯಕನಾಗಿ ಫಾಲಾಕ್ಷ ಉಳಿದಂತೆ ಬಸವರಾಜ್ ಮೇತ್ರಿ, ಹರೀಶ ಪತ್ತಾರ್, ರಾಜಕುಮಾರ ಪಾಟೀಲ್, ನೇತ್ರಾ ಕಲ್ಲೂರು, ಸಂಗನಗೌಡ ಕುರುಡುಗಿ, ಕೆ.ಆನಂದ ಬಿಜಾಪುರ, ಡಾ.ಪತ್ತೆಖಾನ್, ಪ್ರಕೃತಿ, ರಮಜಾನಸಾಬ ಉಳ್ಳಾಗಡ್ಡಿ, ಗಾಯತ್ರಿ ಹವಳೆ, ತೋಫಿಕ ರೋಣ, ವಿದ್ಯಾ ಹಿರೇಮಠ ಹಾಗೂ ಇನ್ನಿತರರು ಅಭಿನಯಿಸುತ್ತಿದ್ದಾರೆ.

ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಗಿರೀಶ ಶಿರಗನಹಳ್ಳಿ, ಸಹ ಛಾಯಾಗ್ರಹಣ ಸಿದ್ದೇಶ ಅಶ್ವ, ಸಂಕಲನ ಸಿದ್ದಾರ್ಥ ಜಾಲಿಹಾಳ, ಸಂಗೀತ ರಾಘವ್ ಸುಭಾಷ್, ಸಾಹಿತ್ಯ ಸುಭಾಷ್ ಬೆಟಗೇರಿ, ಪ್ರಸಾಧನ ಶ್ರೀಕಾಂತ ಕುಲಕರ್ಣಿ, ವಸ್ತ್ರಾಲಂಕಾರ ಶ್ರೀಕಾಂತ, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ ,ಡಾ. ವೀರೇಶ ಹಂಡಗಿ, ಸಹ ನಿರ್ದೇಶನ ಶ್ರೀನಿವಾಸ್ ಪ್ರಸಾದ, ನಿರ್ದೇಶನ ಆರ್.ಶೈನ್ ಅವರದಿದೆ. ಚಿತ್ರಕ್ಕೆ ಷಣ್ಮುಖಪ್ಪ ಆರ್.ಎಲ್ ಹಾಗೂ ಸಹನಿರ್ಮಾಪಕರಾಗಿ ರವಿಚಂದ್ರ ಆನೆಹೊಸೂರು ಬಂಡವಾಳ ಹೂಡಿದ್ದಾರೆ.


ವರದಿ:
ಡಾ.ಪ್ರಭು ಗಂಜಿಹಾಳ
ಮೊ-೯೪೪೮೭೭೫೩೪೬

- Advertisement -
- Advertisement -

Latest News

ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ

ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ,...
- Advertisement -

More Articles Like This

- Advertisement -
close
error: Content is protected !!