spot_img
spot_img

ಜಿಲ್ಲಾ ಮಟ್ಟದ ‘ವಿಜ್ಞಾನ ಮತ್ತು ತಂತ್ರಜ್ಞಾನ ರಸಪ್ರಶ್ನೆ ಕಾರ್ಯಕ್ರಮ’ ಮತ್ತು ಬಹುಮಾನ ವಿತರಣೆ

Must Read

spot_img
- Advertisement -

 

ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ಅಗಸ್ತ್ಯ ಫೌಂಡೇಶನ್ ಬೆಳಗಾವಿ ವತಿಯಿಂದ ಅಕಮಯಿ ಟೆಕ್ನಾಲಜಿ ಅವರ ಪ್ರಾಯೋಜಕತ್ವದಲ್ಲಿ ಬೆಳಗಾವಿ ಜಿಲ್ಲೆಯ 6 ಮತ್ತು 7ನೇ ತರಗತಿಯ ಸರ್ಕಾರಿ ಶಾಲೆಗಳ ಮಕ್ಕಳಿಗೆ ‘ ವಾಕೋವಾಕ್ಯಂ’ ಜಿಲ್ಲಾ ಮಟ್ಟದ  ‘ವಿಜ್ಞಾನ ಮತ್ತು ತಂತ್ರಜ್ಞಾನ ಕ್ವಿಜ್ ‘ಕಾರ್ಯಕ್ರಮವನ್ನು ಬುಧವಾರ ದಿ.1 ರಂದು ಬೆಳಗಾವಿ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳಿಂದ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಗಸ್ತ್ಯ ಫೌಂಡೇಶನ್ ನ ಉತ್ತರ ಕರ್ನಾಟಕ ಮತ್ತು ಗೋವಾ ರಾಜ್ಯಗಳ ಹಿರಿಯ ವ್ಯವಸ್ಥಾಪಕಿ ಡಾ. ಬಬೀತಾ ಗುಪ್ತಾ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳಿಗೂ ಸಹ ಖಾಸಗಿ ಶಾಲೆಯ ಮಕ್ಕಳಿಗೆ ಸಿಗುವಂತಹ ಸ್ಪರ್ಧಾಜ್ಞಾನ ಸಿಗಲಿ, ವಿನೂತನ ಶೈಲಿಯ ಸ್ಪರ್ಧೆಗಳಲ್ಲಿ ಭಾಗವಹಿಸುವುದರ ಜೊತೆಗೆ  ಅವರ ವಿಜ್ಞಾನದ ಆಸಕ್ತಿ ಬೆಳೆಯಲಿ ಎನ್ನುವ ನಿಟ್ಟಿನಲ್ಲಿ ಶಾಲೆಗಳಲ್ಲಿ ವಿಜ್ಞಾನದ ಜ್ಞಾನವನ್ನು ನೀಡುವ ಜೊತೆಗೆ ಸ್ಪರ್ಧೆಯಲ್ಲಿ ಉತ್ತೇಜಿಸಿ ಮಕ್ಕಳನ್ನು ವಿಶೇಷವಾಗಿ ತಯಾರಿಗೊಳಿಸುವ ಉದ್ದೇಶ ಅಗಸ್ತ್ಯ ಫೌಂಡೇಶನ್ ನದ್ದಾಗಿದೆ ಆ ನಿಟ್ಟಿನಲ್ಲಿ ಪೂರ್ಣವಾಗಿ ಉಚಿತ  ಸೇವೆ ಮಾಡುತ್ತಿರುವ ಸಂಸ್ಥೆಯ ಲಾಭ ಪಡೆಯಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

- Advertisement -

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ನಗರ ವಲಯದ ಕ್ಷೇತ್ರ ಸಮನ್ವಯಾಧಿಕಾರಿ ಐ ಡಿ ಹಿರೇಮಠ ಮಾತನಾಡಿ, ಮಕ್ಕಳಿಗೆ ಪ್ರೇರಣೆ ನೀಡಲು ಶಾಲಾ ಹಂತದಲ್ಲಿ ವಿಶೇಷವಾಗಿ ಸರ್ಕಾರಿ ಶಾಲೆಯ ಮಕ್ಕಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಾಯೋಗಿಕವಾದ ಮಾಹಿತಿ ಕೊಡುತ್ತಿರುವ ಅಗಸ್ತ್ಯ ಬಳಗದ ಕೆಲಸ ನಿಜಕ್ಕೂ ಮಾದರಿಯಾಗಿದೆ ಎಂದರು.

ನಂತರ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ 210ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೊದಲ ಪ್ರಾಥಮಿಕ ಹಂತದ ಸುತ್ತಿನಲ್ಲಿ 20 ಅಂಕಗಳ ಲಿಖಿತ ವಿಜ್ಞಾನ ಪ್ರಶ್ನೆಗಳನ್ನು ಕೇಳಿ ಅದರಲ್ಲಿ  8 ಉತ್ತಮ ತಂಡಗಳನ್ನು ಆಯ್ಕೆ ಮಾಡಲಾಯಿತು. ನಂತರ  ತಲಾ ಎರಡು ವಿದ್ಯಾರ್ಥಿಗಳಿದ್ದ ಆ 8 ತಂಡಗಳ ಮಕ್ಕಳಿಗೆ ಆಧುನಿಕ   ಮಾದರಿಯಲ್ಲಿ ಪರದೆ ಮೇಲೆ ಸಚಿತ್ರ ಪ್ರಶ್ನೆಗಳನ್ನು ಕೇಳುವುದರ ಮುಖೇನ  ಪಾಸಿಂಗ್ ರೌಂಡ್, ಬಜರ್ ರೌಂಡ್ ಸುಳಿವು ನೀಡುವ ರೌಂಡ್ ಹೀಗೆ 5 ಹಂತಗಳಲ್ಲಿ ವಿಶೇಷ ಪ್ರಶ್ನೆಗಳನ್ನು ಕೇಳಿ ಅತ್ಯುತ್ತಮವಾದ 3 ತಂಡಗಳನ್ನು ಜೊತೆಗೆ 3 ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.

ಜಿಲ್ಲಾಮಟ್ಟದಲ್ಲಿ  ಪ್ರಥಮ ಸ್ಥಾನವನ್ನು ಬೆಳಗಾವಿ ನಗರದ KHPS ನಂ 26. ವಿಶ್ವೇಶ್ವರಯ್ಯ ನಗರ ಶಾಲೆಯ  ವರುಣ ಮೇತ್ರಿ ಮತ್ತು ಅಕ್ಷರಾ ಕೊಡಲಿ,ದ್ವಿತೀಯ ಸ್ಥಾನವನ್ನು ಬೈಲಹೊಂಗಲ ತಾಲೂಕಿನ  KHPS  ಹಣ್ಣಿಕೇರಿ ಶಾಲೆಯ ಸಿದ್ದಾರ್ಥ ಭಾವಿ ಮತ್ತು ಕಿರಣ ಮದಲೂರ ಪಡೆದರೆ ತೃತೀಯ ಸ್ಥಾನವನ್ನು ಬೆಳಗಾವಿ ತಾಲೂಕಿನ  KHPS ಮುತಗಾ ಶಾಲೆಯ ಹಂಸಿಕಾ ಸೂರ್ಯವಂಶಿ ಮತ್ತು ನಿವೇದಿತಾ ಹಂಚಿನಮನಿ ರವರ ತಂಡ ಗಳಿಸಿತು.KHPS ಸಾಂಬರಾ ಶಾಲೆಯ ಶ್ರಾವಣಿ ತಿಪ್ಪಣಾಚೆ ಮತ್ತು ಸಂಗೀತಾ ಪಾಟೀಲ ರವರ ತಂಡ ಸಮಾಧಾನಕರ ಬಹುಮಾನ ಪಡೆಯಿತು. ಪ್ರಥಮ ₹12000, ದ್ವಿತೀಯ ₹9000, ತೃತೀಯ ₹6000. ಹಾಗೂ 3 ಸಮಾಧಾನಕರ  ₹ 3000 ನಗದು ಬಹುಮಾನದ ಜೊತೆಗೆ ಪ್ರಮಾಣ ಪತ್ರ,ಪದಕಗಳು ಮತ್ತು ವಿಶೇಷ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಭಾಗವಹಿಸಿದ ಎಲ್ಲಾ ಮಕ್ಕಳು ಮತ್ತು ಮಾರ್ಗದರ್ಶಿ ಶಿಕ್ಷಕರಿಗೆ ವಿಶೇಷ ಬಹುಮಾನ ಮತ್ತು ನೆನಪಿನ ಕಾಣಿಕೆ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

- Advertisement -

ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ಮಕ್ಕಳು, ಶಿಕ್ಷಕರು ಮತ್ತು ಪಾಲಕರು ಸೇರಿದಂತೆ ಅಗಸ್ತ್ಯ ಬಳಗದ ಮಾರ್ಗದರ್ಶಿ ಸಂಪನ್ಮೂಲ ಶಿಕ್ಷಕರು ಇಲಾಖೆಯ ವಿವಿಧ ಅಧಿಕಾರಿಗಳು ಭಾಗಿಯಾಗಿದ್ದರು.ಕ್ವಿಜ್ ಕಾರ್ಯಕ್ರಮವನ್ನು  ವಿನೂತನ ಪಾರದರ್ಶಕ ಮತ್ತು ವ್ಯವಸ್ಥಿತ ರೀತಿಯಲ್ಲಿ ಬಸವರಾಜ ರಾಮದುರ್ಗ ರವರು ನಡೆಸಿಕೊಟ್ಟರು.  ಸಂಸ್ಥೆಯ ಅಧಿಕಾರಿ ಶಿವಾನಂದ ಚಲವಾದಿ ನಿರ್ಣಾಯಕ ರಾಗಿ, ಶ್ರೀಪಾದ ದೇಸಾಯಿ ತಾಂತ್ರಿಕ ಸಹಾಯಕರಾಗಿ ಕೆಲಸ ಮಾಡಿದರು.

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group