ಯುಗಾದಿ ಎಂದರೆ ಮಾವು ಬೇವುಗಳ ಸಮಾಗಮ ಮಾವು ಚಿಗುರಿ ಬಿಟ್ಟು ನಳನಳಿಸುತ್ತಿದೆ ಬೇವು ಹೂ ಬಿಟ್ಟು ಪರಿಮಳ ಸೂಸುತ್ತಿರುತ್ತದೆ. ಎರಡು ವನಸ್ಪತಿಗಳ ಸಂಗಮ. ಮಾವು ಸೌಭಾಗ್ಯ ಸಂಕೇತ ಬೇವು ಆರೋಗ್ಯದ ಸಂಕೇತ. ಇವೆರಡನ್ನು ಮಿಲನ ಮಾಡಿ ಯುಗದ ಆದಿಗೆ ಉಪಯೋಗಿಸಲು ಸೂಚಿಸಿದ ಹಿರಿಯರಿಗೆ ಒಂದು ಸಲಾಂ. ಹಬ್ಬದ ದಿನ ಸಂಭ್ರಮಿಸಿದ ತೋರಣ ವನ್ನು ಔಷಧಿಯಾಗಿಯೂ ಉಪಯೋಗಿಸಬಹುದು. ಮಾವು ಮತ್ತು ಬೇವು ಎರಡೂ ಸೇರಿಸಿ ಮಾಡಿದ ತೋರಣವನ್ನು ಬಾಡಿದ ನಂತರ ಬಿಸಾಡಬೇಡಿ.
- ನೆರಳಿನಲ್ಲ ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಪ್ರತಿದಿನ ತೆಗೆದುಕೊಳ್ಳುವುದರಿಂದ ಶುಗರ್ ಹತೋಟಿಗೆ ಬರುತ್ತದೆ.
- ಅರೆಬರೆ ಪುಡಿ ಮಾಡಿ ಹುರಿದು ಬಾಣಲೆಗೆ ಬೆಂಕಿ ಹತ್ತಿದಾಗ ಕೆಳಗಿಳಿಸಿ. ಗಟ್ಟಿ ಮುಚ್ಚಳ ಹಾಕಿ ಇಡಿ.ಇದು ಹೊಗೆ ಬರುತ್ತದೆ ಆದರೆ ಬೆಂಕಿ ಹತ್ತುವುದಿಲ್ಲ.ಪೂರ್ಣ ಬೂದಿ ಆದಾಗ ಗಾಳಿಸಿ ಸ್ವಲ್ಪ ಸೈಂಧವ ಲವಣ ಸೇರಿಸಿ ಪ್ರತಿದಿನ ಬೆಳಿಗ್ಗೆ ಹಲ್ಲು ಉಜ್ಜುವ ಮೂಲಕ ಹಲ್ಲು ನೋವು, ಹಲ್ಲಿನ ಸಮಸ್ಯೆ ಮತ್ತು ವಸಡಿನ ಸಮಸ್ಯೆಗಳು ಗುಣವಾಗುತ್ತದೆ ಆದಷ್ಟು ದಿನ ನಿತ್ಯ ದ ಅನೇಕ ಕಾಯಿಲೆಗಳು ಸಣ್ಣಪುಟ್ಟ ಇಂತಹ ರೇಮಿಡಿ ಮಾಡುವುದರಿಂದ ಗುಣಪಡಿಸಲು ಮತ್ತು ಕಾಯಿಲೆ ಯಿಂದ ದೂರ ಇರಲು ಸಹಕಾರಿ.
ಸುಮನಾ ಮಳಲಗದ್ದೆ 9980182883.