ಶಿಕ್ಷಕರ ಮತದಾನ ಕೇಂದ್ರದಲ್ಲಿ ಆಕ್ರಮ ಮತದಾನ ಆರೋಪ

Must Read

ಬೀದರ- ಶಿಕ್ಷಕರ ಮತದಾನ ಕೇಂದ್ರದಲ್ಲಿ ನಾಲ್ವರು ಕಾಂಗ್ರೆಸ್ ಏಜೆಂಟರು ಕುಳಿತುಕೊಂಡು ಕಾಂಗ್ರೆಸ್ ಗೇ ಮತ ಹಾಕುವಂತೆ ಒತ್ತಡ ಹೇರಿ ಅಕ್ರಮ ಮತದಾನ ಮಾಡಿಸಿಕೊಳ್ಳುತ್ತಿದ್ದಾರೆಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಚುನಾವಣಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇಡಿಸಿ ಮತದಾನ ಕೇಂದ್ರಕ್ಕೆ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಭೇಟಿ ಚುನಾವಣೆ ಅಧಿಕಾರಿ ವಿರುದ್ಧ ಪೊಲೀಸರು ಸಾರ್ವಜನಿಕರ ಎದುರೇ ಆಕ್ರೋಶ ವ್ಯಕ್ತಪಡಿಸಿದರು.

ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಸರಕಾರಿ ಕಾಲೇಜಿನ ಮತಗಟ್ಟೆ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಮತ್ತು ಅವರ ಮಗ ಪ್ರಸನ್ನ ಖಂಡ್ರೆ ಸೇರಿ ಆರ್ ಓ ಅಧಿಕಾರಿಗಳಿಗೆ ಮತಗಟ್ಟೆಯಲ್ಲಿ ಯಾಕೆ ನಾಲ್ಕು ಜನರು ಏಜೆಂಟ್ ಬಾಕ್ಸ್ ಹತ್ತಿರ ಇದ್ದಾರೆ ಎಂದು ಪ್ರಶ್ನೆ ಮಾಡಿದರು.

ನಾಲ್ಕು ಜನ ಕಾಂಗ್ರೆಸ್ ಪಕ್ಷದ ಏಜೆಂಟರು ಬಾಕ್ಸ್ ಹತ್ತಿರ ಕುಳಿತುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಲಾಯಿತು. ನಂತರ ಚುನಾವಣಾ ಅಧಿಕಾರಿಗಳು ಎಲ್ಲರನ್ನೂ ಹೊರಹಾಕಿದರು

ಭಾಲ್ಕಿ ಕ್ಷೇತ್ರವು  ಖಂಡ್ರೆ ವರ್ಸಸ್ ಖಂಡ್ರೆ ಜಿದ್ದಾಜಿದ್ದಿ ಕ್ಷೇತ್ರವಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group