ಬೀದರ: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ವಿವಿಧ ಸಂಘಟನೆಗಳ ಜೊತೆಗೆ ಭಜರಂಗದಳವನ್ನು ಬ್ಯಾನ್ ಮಾಡುವ ವಿಚಾರಕ್ಕೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಭಾಲ್ಕಿ ಪಟ್ಟಣದ ಹನುಮಾನ್ ಮಂದಿರದಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡುವುದರ ಮೂಲಕ ಆಕ್ರೋಶ ಹೊರಹಾಕಿದರು.
ಅಷ್ಟೆ ಅಲ್ಲದೇ ಬಸವಕಲ್ಯಾಣ ಪಟ್ಟಣದಲ್ಲಿ ಹಿಂದೂಪರ ಕಾರ್ಯಕರ್ತರು ಭಜರಂಗದಳ ಬ್ಯಾನ್ ಮಾಡ್ತೇವೆ ಅನ್ನೋರಿಗೆ ತಕ್ಕಪಾಠ ಕಲಿಸಿ ಎಂದು ಮನವಿ ಮಾಡಿದ್ದಾರೆ.
ಬಸವಕಲ್ಯಾಣ ಪಟ್ಟಣದಲ್ಲಿ ಕಾಂಗ್ರೆಸ್ ವಿರುದ್ದ ಕಿಡಿಕಾರಿದ ಹಿಂದೂಪರ ಕಾರ್ಯಕರ್ತರು ದೇಶವಿರೋಧಿ ಕೆಲಸ ಮಾಡುವ ವ್ಯಕ್ತಿಗಳು ಹಾಗೂ ಸಂಘಟನೆಗಳನ್ನ ಬ್ಯಾನ್ ಮಾಡೊದು ಬಿಟ್ಟು, ಧರ್ಮ ಸಂಸ್ಕೃತಿ ಕಾಪಾಡುವ ಹಿಂದು ಸಂಘಟನೆಯನ್ನ ಬ್ಯಾನ್ ಮಾಡ್ತೇವೆ ಅಂತಾ ಹೇಳಿರೋದು ಖಂಡನೀಯ.
ಭಜರಂಗದಳ ಸಂಘಟನೆಯು ಸಮಾಜ ವಿರೋಧಿ ಸಂಘಟನೆ ಅಲ್ಲ ಹಿಂದೂ ಸಮಾಜದ ರಕ್ಷಣೆಗಾಗಿ ಗೋ ಮಾತೆಯ ರಕ್ಷಣೆಗಾಗಿ, ಹಿಂದೂ ಸಹೋದರಿಯರ ಮಾನ ಸಮ್ಮಾನ ಸಂರಕ್ಷಣೆಗಾಗಿ ಎಂತಹ ತ್ಯಾಗಕ್ಕೂ ಸಿದ್ಧವಾಗಿರುವ ಈ ಕೇಸರಿ ಯುವಕರ ಪಡೆಯಿದು. ಇಡೀ ದೇಶದಲ್ಲಿ ಬಜರಂಗದಳ ತನ್ನ ಕಾರ್ಯಕರ್ತರ ಮುಖಾಂತರ ಸಾಮಾಜಿಕ ಸೇವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಅಂತಹ ಸಂಘಟನೆಯನ್ನು ಕರ್ನಾಟಕದಲ್ಲಿ ನಿಷೇಧ ಮಾಡುತ್ತೇವೆ ಎಂದು ಹೇಳಿರುವುದು ಖಂಡನೀಯ.
ಹಾಗಾಗಿ ಈ ಬಾರಿ ಜನರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು, ದೇಶದ ಸಂಸ್ಕೃತಿ ಹಾಗೂ ಭದ್ರತೆ ಕಾಪಾಡುವ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡಿದರು.
ವರದಿ: ನಂದಕುಮಾರ ಕರಂಜೆ, ಬೀದರ