ಕವನ: ಜ್ಞಾನದ ಬೆಳಕು

Must Read

ಜ್ಞಾನದ ಬೆಳಕು

ಬುದ್ಧ ಪೂರ್ಣಿಮೆ ಬುದ್ಧ ಪೂರ್ಣಿಮೆ

ನಮ್ಮ ಜೀವನದ ಜ್ಞಾನ ಬೆಳಕು ಬುದ್ಧ ಪೂರ್ಣಿಮೆ
ಮಾನವೀಯತೆ ಶಾಂತಿ ಸಂದೇಶದ ಬುದ್ಧ ಪೂರ್ಣಿಮೆ
ಮಂದಸ್ಮಿತ ವದನ ಸಾಕಾರ ಮೂರ್ತಿ

ಕರುಣಾಮಯಿ ಸತ್ಯ ಬೋಧಕ
ಶಾಂತಿ ಸ್ಥಾಪಕ ಬುದ್ಧ
ಅರಸೊತ್ತಿಗೆಯ ತ್ಯಜಿಸಿ
ಬದುಕಿನ ಶಾಂತಿ ನೆಮ್ಮದಿ ಅರಸಿ ಬುದ್ಧನಾದ
ಜಗಕೆ ದಾರಿದೀಪವಾದ ಮಹಾನ್ ಚೇತನ
ಆಧ್ಯಾತ್ಮಿಕ ಪುರುಷ ಅಹಿಂಸಾ ತತ್ವ ಬೋಧಕ

ಮುದುಕ ಶವ ಕಂಡ ಕ್ಷಣ ಮರುಕ
ಜೀವನ ನಶ್ವರ ತತ್ವ ಅರುಹಿ
ಲೋಕ ಸಂಚಾರಗೈದ ಜ್ಞಾನ ದೀಪಕ
ಲುಂಬಿನಿವನದಿ ಜ್ಞಾನ ಬೆಳಕು ಕಂಡ ಸಾಧಕ
ಲೋಕಕಲ್ಯಾಣಾರ್ಥ ಸಂಚಾರಿ ಯಾಗಿ ಜೀವನಮಾರ್ಗ ಬೋಧಕ
ಜೀವನ ನಶ್ವರ. ಸತ್ಯ ಶಾಶ್ವತ

ಮನುಕುಲದ ಧರ್ಮದ ಅನುಪಾಲಕ
ಬೌದ್ಧ ಧರ್ಮದ ಸ್ಥಾಪಕ
ಸದ್ಭಾವನೆ, ಸತ್ಸಂಕಲ್ಪ, ಸದ್ವಚನ, ಸದ್ವರ್ತನೆ, ಸತ್‌ಶುದ್ಧಿ, ಸದಾಲೋಚನೆ, ಸದಾಂತರ್ಯ ಮತ್ತು ಸದಾಮೋದ ಎಂಬ ಎಂಟು ಸನ್ಮಾರ್ಗಗಳ ಪಾಲಕ
ಜನರಿಗೆ ಸದ್ಭಾವನಾ ಬದುಕ ತಿಳಿಸಿದ ಜ್ಞಾನದಾತ

ಪ್ರಾಣಿ ಹಿಂಸೆ, ನರಬಲಿ, ವರ್ಜಿಸಿದ ಅಹಿಂಸಾ ತತ್ವ ಪರಿಪಾಲಕ
ಪ್ರಾಣಿಗಳಿಗೂ ಜೀವವಿದೆ
ಜೀವ ತೆಗೆಯುವ ಹಕ್ಕು ನಮಗಿಲ್ಲ ಎಂದು ಸಂದೇಶ ಸಾರುತಲಿ ಪ್ರಾಣಿಗಳ ಪ್ರೀತಿಸಿ ಎಂದು ಸಾರಿದ ಜೀವಸಖ
ಹುಟ್ಟಿದ ದಿನವೂ ಒಂದೇ
ಜ್ಞಾನೋದಯವಾದ ದಿನವೂ ಒಂದೇ

ದ್ವೇಷ ಅಸೂಯೆ ನಿರ್ನಾಮ ಮಾಡಲು ಕರೆ ನೀಡಿ
ನೊಂದವರ ಬಾಳಿಗೆ ಬೆಳಕಾಗಿ
ಪ್ರೀತಿ ಚಿಲುಮೆಯ ಉಕ್ಕಿಸಿ
ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳದಿರಿ ಎಂದು ಅರುಹಿ
ನಿಜ ಪ್ರೀತಿಯ ಅಂತಃಕರಣದ
ಬೋಧಕ


ವೈ. ಬಿ. ಕಡಕೋಳ

(ಬುದ್ಧ ಪೂರ್ಣಿಮೆ ನಿಮಿತ್ತ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಕವನ ಜ್ಞಾನದ ಬೆಳಕು ಕವನಕ್ಕೆ ರೇಖಾ ಮೊರಬ ಅವರು ರೇಖಾಚಿತ್ರವನ್ನು ನೀಡಿರುವರು)

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group