ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ತು ೧೦೮ ನೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮಗಳನ್ನು ಕುರಿತು ಸದಸ್ಯರುಗಳಿಗೆ ಸ್ಥಳದಲ್ಲಿಯೇ ಪ್ರಬಂಧ ಬರೆಯುವ ಸ್ಪರ್ಧೆ, ಪರಿಷತ್ತು ನಡೆದುಬಂದ ದಾರಿ ಕುರಿತು ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪ್ರಬಂಧ ಸ್ಪರ್ಧೆಯನ್ನು ಡಾ. ಕೆ.ಜಿ. ವೆಂಕಟೇಶ್, ಮತ್ತು ಡಿ. ಸಿ. ದೇವರಾಜ್ ನಿರ್ವಹಿಸಿದರು. ರಸಪ್ರಶ್ನೆ ಕಾರ್ಯಕ್ರಮವನ್ನು ಡಾ. ಎಚ್. ಟಿ. ಕೃಷ್ಣಮೂರ್ತಿ ಮತ್ತು ಅನುರಾಧಾ ನಡೆಸಿಕೊಟ್ಟರು.
ಡಾ. ಕೆ.ಎಸ್. ಗಂಗಾಧರ ಅವರ ಕನಸ ಪೊರೆವ ಮೌನ ಪುಸ್ತಕ ಲೋಕಾರ್ಪಣೆಯನ್ನು ಹಿರಿಯ ಸಾಹಿತಿ ಸವಿತಾ ನಾಗಭೂಷಣ ನಡೆಸಿಕೊಟ್ಟರು. ಭಾರತೀಯ ಕುಟುಂಬ ಯೋಜನಾ ಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಉಮೇಶ ಆರಾಧ್ಯ ದೀಪಬೆಳಗಿಸಿ ಉದ್ಘಾಟಿಸಿದರು. ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಕರ್ನಾಟಕ ಜಾನಪದ ಪರಿಷತ್ತು ಏರ್ಪಡಿಸಿದ್ದ ಐದು ದಿನಗಳ ಜಾನಪದ ಕಲಿಕಾ ಶಿಬಿರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳಿಂದ ಸುಗ್ಗಿ ಕುಣಿತ, ಕೋಲಾಟ, ಲಂಬಾಣಿ ನೃತ್ಯ, ಜನಪದ ಹಾಡುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಕವಿ, ಲೇಖಕರಾದ ಡಾ. ಕೆ. ಎಸ್. ಗಂಗಾಧರ, ಸಾಗರದ ವಿ. ಗಣೇಶ್, ಬಿ.ಆರ್.ಪಿ. ಯ ದಾಳೇಗೌಡರು, ತಾ. ಕಸಾಪ ಅಧ್ಯಕ್ಷರಾದ ಮಹಾದೇವಿ ವೇದಿಕೆಯಲ್ಲಿದ್ದರು.
ಕೆ. ಎಸ್. ಮಂಜಪ್ಪ ನಿರೂಪಿಸಿದರು, ಎಂ. ಎಂ. ಸ್ವಾಮಿ ಸ್ವಾಗತಿಸಿದರು, ಡಿ. ಗಣೇಶ್ ವಂದಿಸಿದರು.