ಅ. ಅಮ್ಮ ನಿನ್ನ ಒಡಲಿನ
ಈ ಕರುಳ ಬಳ್ಳಿ ಕುಡಿಗೆ
ಆ. ಆನಂದ ನೀಡಿಹುದು
ನಿನ್ನ ಗರ್ಭವೆಂಬ ಸ್ವರ್ಗ.
ಇ. ಇಳೆಯ ಗುಣ ಹೊತ್ತು
ಸಲುಹಿದೆ ಜಗದಲ್ಲಿ ನನ್ನ.
ಈ. ಈಜಿ ಜಯಿಸಿ ಕಷ್ಟದಿ
ನೀ ಹೊಸ ಜೀವ ನೀಡಿದೆ.
ಉ. ಉಣಿಸಿದೆ ಎದೆಹಾಲಲಿ
ಅಮೃತವ ತುಂಬಿಕೊಂಡು.
ಊ. ಊರ ಜನ ಮೆಚ್ಚುವಂತೆ
ನೀ ನೀತಿ ಪಾಠ ಹೇಳಿದೆ.
ಋ. ಋಣ ತೀರಿಸಲು ನಿನ್ನದು
ಸಾಧ್ಯವಾಗದಮ್ಮ ನನ್ನಿಂದ.
ಎ. ಎಷ್ಟೇ ಜನ್ಮ ತಾಳಿದರು
ನೀನಾಗಬೇಕು ನನ್ನ ಅಮ್ಮ.
ಏ. ಏಳು ಬೀಳು ಬದುಕಿನಲ್ಲಿ
ಚೇತನ ಕೊಟ್ಟಂತ ದೇವರು.
ಐ. ಐಸಿರಿಯು ಕಾಣದೆ
ಚಿಂದಿ ಬಟ್ಟೆ ನೀ ಉಟ್ಟೆ
ಒ. ಒಬ್ಬಟ್ಟಿನ ಸಿಹಿಯಂತೆ
ವಾತ್ಸಲ್ಯವ ಧಾರೆಯರೆದೆ.
ಓ. ಓದದೆ ನೀನಿದ್ದರು ಬಾಳಲಿ
ನನಗೆ ಮೊದಲ ಗುರುವಾದೆ.
ಔ. ಔದಾರ್ಯದಿ ಬೆನ್ನ ಹಿಂದೆ
ನನಗೆ ನೆರಳಾಗಿ ನೀ ನಿಂತೆ.
ಅಂ. ಅಂಬರದ ತಾರೆಯಲಿ
ನನ್ನಿಂದ ಮರೆಯಾಗಿ ಹೋದೆ.!
ಎಚ್.ಡಿ.ಬಸವರಾಜ್.ಗಂಗಾವತಿ