ಅದ್ದೂರಿಯಾಗಿ ನಡೆದ ಐದು ಪಲ್ಲಕ್ಕಿಗಳ ಮೆರವಣಿಗೆ

Must Read

ಸಿಂದಗಿ: ತಾಲೂಕಿನ ದೇವಣಗಾಂವ ಗ್ರಾಮದ ನಿಂಗರಾಯದೇವರ ಉಗ್ರಾಣಮನೆಯ ವಾಸ್ತು ಶಾಂತಿಯ ನಿಮಿತ್ತ ಐದು ಪಲ್ಲಕ್ಕಿಗಳ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

ದೇವಣಗಾಂವ ಗ್ರಾಮದ ನಿಂಗರಾಯ ಪಲ್ಲಕ್ಕಿ, ಮಹಾಲಕ್ಷ್ಮಿ ಪಲ್ಲಕ್ಕಿ, ಮಂಗಳೂರಿನ ಮಾರಾಯಸಿದ್ದ ಪಲ್ಲಕ್ಕಿ, ಬ್ಯಾಡಗಿಹಾಳದ ನಿಂಗರಾಯ ಪಲ್ಲಕ್ಕಿ, ಬಮ್ಮನಹಳ್ಳಿಯ ಬೀರಣ್ಣದೇವರ ಪಲ್ಲಕ್ಕಿಗಳು, ಐದು ಗ್ರಾಮಗಳ ಈರಕಾರ ಪೂಜಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು, ನಿಂಗರಾಯ ದೇವಸ್ಥಾನದಿಂದ ಪ್ರಾರಂಭಗೊಂಡು ಗ್ರಾಮದ ಪ್ರಮುಖಬೀದಿಗಳಲ್ಲಿ ಡೊಳ್ಳು ಕಣಿತದೊಂದಿಗೆ ಮೆರವಣಿಗೆಯ ಮೂಲಕ ಸಂಚರಿಸಿ ಉಗ್ರಾಣಮನೆ ತಲುಪಿತು.

ಅಲ್ಲಿ ವಿವಿಧ ಪೂಜಾವಿಧಿವಿಧಾನಗಳು ಜರುಗಿದವು, ನಂತರ ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿತ್ತು. ರಾತ್ರಿ ಡೊಳ್ಳಿನ ಪದಗಳ ಮೇಳ ಹಮ್ಮಿಕೊಳ್ಳಲಾಗಿತ್ತು.

Latest News

ಬೆಳಕಿನ ಹಬ್ಬ ದೀಪಾವಳಿ.

            'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ  ದೀಪಾವಳಿ ಹಬ್ಬ'. ದೇಶದಾದ್ಯಂತ...

More Articles Like This

error: Content is protected !!
Join WhatsApp Group