Mudalgi: ಸರ್ವತೋಮುಖ ಬೆಳವಣಿಗೆಗೆ ಯೋಗ ಸಹಕಾರಿ – ಶಿವರಾಜ ಕಾಂಬಳೆ

Must Read

ಮೂಡಲಗಿ: ಯೋಗಾಸನದಿಂದ ಶಾರೀರಿಕ ಮಾನಸಿಕ ಸಮತೋಲನದ ಜೊತೆಗೆ ಬೌದ್ಧಿಕವಾಗಿ ಮನುಷ್ಯನ ಸರ್ವೋತೋಮುಖ ಬೆಳವಣಿಗೆಗೆ ಸಹಾಯಕವಾಗಿ ಉಲ್ಲಾಸಮಯ ಜೀವನ ನಮ್ಮದಾಗಿರುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಶಿವರಾಜ ಕಾಂಬಳೆ ಹೇಳಿದರು.

ಅವರು ಸಮೀಪದ ಪಟಗುಂದಿಯ ಸರಕಾರಿ ಕನ್ನಡ ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರುಗಿದ 9ನೇ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ, ಇಂದಿನ ಮಾನಸಿಕ ದೈಹಿಕ ಒತ್ತಡಗಳಿಂದಾಗಿ ಅನೇಕ ರೋಗ ರುಜಿನಗಳಿಗೆ ಆಹ್ವಾನ ನೀಡುವಂತಾಗಿದೆ.

ವಿದ್ಯಾರ್ಥಿ ಜೀವನದಲ್ಲಿಯೇ ಸರಳ ಹಾಗೂ ಉಪಯುಕ್ತ ಯೋಗಗಳನ್ನು ರೂಡಿಸಿಕೊಳ್ಳುವ ಮೂಲಕ ಅಮೃತದಂತಹ ಭೋಜನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸರಕಾರ ಒದಗಿಸುವ ಹತ್ತು ಹಲವಾರು ಯೋಜನೆಗಳನ್ನು ಬಳಸಿಕೊಳ್ಳ ಬೇಕು. ಪೌಷ್ಠಿಕಾಂಶಯುಕ್ತ ಆಹಾರವನ್ನು ಮಧ್ಯಾಹ್ನ ಉಪಾಹಾರ ಯೋಜನೆಯ ಮೂಲಕ ವಿದ್ಯಾರ್ಥಿ ಜೀವನದಲ್ಲಿಯೇ ಉತ್ತಮ ಆಹಾರ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿ ಹೇಳಿದರು.

ಈ ಸಂದರ್ಭದಲ್ಲಿ ಯೋಗಾಸನದ ಪ್ರಮುಖ ಆಸನಗಳಾದ ಸೂರ್ಯ ನಮಸ್ಕಾರ, ತಾಡಾಸನ, ಹೃಷ್ಕಾಸನ, ಪಾದಹಸ್ತಾಸನ, ವಜ್ರಾಸನ, ಶಶಾಂಕಾಸನ, ಭದ್ರಾಸನಗಳಂತಹ ಅನೇಕ ಆಸನಗಳ ಕುರಿತು ವಿದ್ಯಾರ್ಥಿಗಳಿಗೆ ಪರಿಚಯಿಸಿ ಪ್ರತಿನಿತ್ಯ ರೂಡಿಸಿಕೊಳ್ಳುವದರ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಗುರು ರಾಜು ಕೊಳದೂರ, ಎಮ್.ಎನ್ ಪೆಂಡಾರಿ, ಎ.ಎ ಪಟವೇಗಾರ, ಕೆ.ಎಲ್ ಮೀಶಿ, ಎಸ್.ಐ ನದಾಫ್, ಮಹಾಂತೇಶ ಭಜಂತ್ರಿ, ಲಕ್ಷ್ಮೀ ಕೆಳಗೇರಿ,ಜಯಶ್ರೀ ಸರ್ವಿ ಹಾಗೂ ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group