spot_img
spot_img

Bidar: ಜಿಲ್ಲಾ ಅಧಿಕಾರಿಗಳ ದಿಢೀರ್ ಭೇಟಿ

Must Read

spot_img
- Advertisement -

ಬೀದರ್: ಜಿಲ್ಲೆಯ ಹುಲಸೂರ ತಾಲೂಕಿನ ತಹಸಿಲ್ದಾರ ಕಚೇರಿಗೆ ಧಿಡೀರನೆ  ಭೇಟಿ ನೀಡಿದ ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರು ಸಾರ್ವಜನಿಕರ ಸಮಸ್ಯೆ ಆಲಿಸಿದರು.

ಇದೇ ಸಂದರ್ಭದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಹುಲಸೂರ ತಾಲೂಕಿನ ಪತ್ರಕರ್ತರೊಂದಿಗೆ ಸಮಾಲೋಚನೆ ನಡೆಸಿದ ಅಧಿಕಾರಿಗಳು ಅಪಘಾತ ಪ್ರಕರಣ ಹೇಗೆ ತಪ್ಪಿಸುವುದು ಹಾಗೂ ಹೆಚ್ಚುತ್ತಿರುವ  ಟ್ರಾಫಿಕ್ ಸಮಸ್ಯೆ ಕುರಿತು ಚರ್ಚೆ ನಡೆಸಿದರು.

- Advertisement -

ತಾಲ್ಲೂಕಿನಲ್ಲಿ ಕಳ್ಳತನ ಪ್ರಕರಣಗಳು ನಡೆಯದಂತೆ ನೊಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ ಪೊಲೀಸ್  ವರಿಷ್ಠಾಧಿಕಾರಿಗಳು. 

ಹುಲಸೂರ ತಾಲೂಕಿನಲ್ಲಿ ಮೂಲ ಸೌಕರ್ಯಗಳ ಸಮಸ್ಯೆ ಅಕ್ರಮ ಮರಳು ಸಾಗಾಟ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಗಮನಹರಿಸುವುದಾಗಿ ಕೂಡ ಜಿಲ್ಲಾಧಿಕಾರಿ ಗೊವಿಂದರೆಡ್ಡಿ ಭರವಸೆ ನೀಡಿದರು.

ಕಳೆದ ಬಾರಿಯ ತೊಗರಿ ಬೆಳೆಯ ನೆಟೆ ರೋಗದ ಪರಿಹಾರ ಹಣವನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಮತ್ತು ಹುಲಸೂರಿನ ಕೊಂಗಳಿ ಏತ ನೀರಾವರಿ ಯೊಜನೆ ಕೂಡಲೇ ಮುಗಿದ ಮೇಲೆ ಕೆರೆಗಳಿಗೆ ನೀರು ತುಂಬಿ ರೈತರ ಜಮೀನುಗಳಿಗೆ ಬಿಡಲಾಗುವುದು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಭರವಸೆ ನೀಡಿದರು.

- Advertisement -

ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

10 ನೆಯ ತರಗತಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಧೈರ್ಯ ನೀಡಿದ ತಾಲೂಕಾಧಿಕಾರಿಗಳು

ಮೂಡಲಗಿ:- ಮಾರ್ಚ್ ನಲ್ಲಿ ನಡೆಯುವ 10 ನೆಯ ತರಗತಿ ವಿದ್ಯಾರ್ಥಿಗಳ ಪರೀಕ್ಷೆ, ಅದರ ಪೂರ್ವ ತಯಾರಿ ನಡೆಸುತ್ತಿರುವ ತಾಲೂಕಾ ಅಧಿಕಾರಿಗಳು ಪೂರ್ವಭಾವಿಯಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ...
- Advertisement -

More Articles Like This

- Advertisement -
close
error: Content is protected !!
Join WhatsApp Group