spot_img
spot_img

Sindagi: ಉಪನ್ಯಾಸಕ ರಾಹುಲ ಕಾಂಬಳೆ ಅವರಿಗೆ ಸಾಹಿತ್ಯ ರತ್ನ ರಾಷ್ಟ್ರೀಯ ಪ್ರಶಸ್ತಿ

Must Read

spot_img
- Advertisement -

ಸಿಂದಗಿ: ಉಪನ್ಯಾಸಕ ರಾಹುಲ ಕಾಂಬಳೆಯಚರಿಗೆ 2022ನೇ ಸಾಲಿನಲ್ಲಿ ವಿಜಯಪುರದ ಜ್ಞಾನಯೋಗಾಶ್ರಮವು ಕೊಡ ಮಾಡುವ ಕನ್ನಡ ಬುಕ್ ಆಫ್ ರೆಕಾರ್ಡ್ ರಾಜ್ಯಮಟ್ಟದ ಪ್ರಶಸ್ತಿ, 2023 ನೇ ಸಾಲಿನಲ್ಲಿ ಮಂಗಳೂರಿನ ಕಿದ್ಮಾ ಫೌಂಡೇಶನ್ ಕೊಡಮಾಡುವ ಕಾವ್ಯಶ್ರೀ ರಾಜ್ಯಮಟ್ಟದ ಪ್ರಶಸ್ತಿ ದೊರಕಿದ್ದು ಈಗ ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ 2023 ನೇ ಸಾಲಿನ ನಾಡಿನ ಸಮಾಚಾರ ಸೇವಾ ಸಂಘ ಗೋಕಾಕ ಇವರು ‘ಸಾಹಿತ್ಯ ರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಧಾರವಾಡದ ರಂಗಾಯಣ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಮಟ್ಟದ  ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಂದಗಿಯ ಸಿ. ಎಮ್ ಮನಗೂಳಿ ಪದವಿ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕ ಕುಮಾರ್ ರಾಹುಲ್ ಕಾಂಬಳೆ ಪ್ರಶಸ್ತಿಗೆ ಭಾಜನರಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಇವರು, ಎರಡು ಕವನ ಸಂಕಲನಗಳನ್ನು ರಚಿಸಿ ವಿಶ್ವ ಕವಿ ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ. ಅನೇಕ ರಾಜ್ಯಮಟ್ಟದ ಕನ್ನಡ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವ, ಬಸವನಬಾಗೇವಾಡಿ ತಾಲೂಕಿನ ಚುಟುಕು ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಸಿಎಂ ಮನಗೂಳಿ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ವಿಷಯದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಸಂಬಂಧ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಅಧ್ಯಕ್ಷ ಮತ್ತು ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರು ಶುಭಕೋರಿದ್ದಾರೆ ಮತ್ತು ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ ಶುಭ ಹಾರೈಸಿದ್ದಾರೆ.

- Advertisement -
- Advertisement -

Latest News

10 ನೆಯ ತರಗತಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಧೈರ್ಯ ನೀಡಿದ ತಾಲೂಕಾಧಿಕಾರಿಗಳು

ಮೂಡಲಗಿ:- ಮಾರ್ಚ್ ನಲ್ಲಿ ನಡೆಯುವ 10 ನೆಯ ತರಗತಿ ವಿದ್ಯಾರ್ಥಿಗಳ ಪರೀಕ್ಷೆ, ಅದರ ಪೂರ್ವ ತಯಾರಿ ನಡೆಸುತ್ತಿರುವ ತಾಲೂಕಾ ಅಧಿಕಾರಿಗಳು ಪೂರ್ವಭಾವಿಯಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ...
- Advertisement -

More Articles Like This

- Advertisement -
close
error: Content is protected !!
Join WhatsApp Group