- Advertisement -
ಭಾರತೀಯರ ಹಬ್ಬ
ಮರೆಯದಿರಿ ಭಾರತದ, ಪ್ರಜೆಗಳೇ
ಸ್ವಾತಂತ್ರ್ಯವ, ತಂದಕೊಟ್ಟವರ ಕಹಳೆ
ತ್ಯಾಗ ಬಲಿದಾನದ ವೀರರವರು
- Advertisement -
ಅಮರರಾಗಿ ಕೈಗಿತ್ತರು ದೇಶದ ತೇರು
ವ್ಯರ್ಥವಾಗದಿರಲಿ, ವೀರರ ಹನಿಹನಿ ರಕ್ತ
ಸಂಕೋಲೆಯಿಂದ ನಮ್ಮ, ದೇಶವಾದ ಮುಕ್ತ
- Advertisement -
ಸ್ವಾತಂತ್ರ್ಯಕೆ ಹೋರಾಡಿದ ದೇಶ ಭಕ್ತರವರು
ಅವರ ದಿಟ್ಟ ಹೆಜ್ಜೆಯೇ ನಮಗಾದ ಉಸಿರು
ಶಾಂತಿ ಅಹಿಂಸೆಯವ ಅವರೇರಿದ ಮೆಟ್ಟಿಲು
ಈ ದಿನತೂಗುತಿವೆ, ಭಾರತದ ಮನೆತೊಟ್ಟಿಲು
೧೫ ಅಗಷ್ಟ ನಮ್ಮೆಲ್ಲರ, ಹರ್ಷತುಂಬಿದ ಹಬ್ಬ
ಭಾರತೀಯರ ಸಹನೆಗೆ ಬ್ರಿಟಿಷರಾದರು ಸ್ತಬ್ಧ
ಅಖಂಡ ಭಾರತಕೆ ಪಣತೊಟ್ಟ ವೀssರ
ನಮ್ಮ ವಲ್ಲಭಭಾಯ್ ಪಟೇಲ ಧೀsರss
ಉಕ್ಕಿನಂತೆ ಎದೆ ತಟ್ಟಿನಿಂತ ಹೋರಾಟಗಾರ
ಹಲವು ಸಾಮ್ರಾಜ್ಯಗಳ ಮಣಿಸಿದ ಸರ್ದಾರ
ಬುದ್ಧ ಬಸವ ಅಂಬೇಡ್ಕರ್ ಜನಿಸಿದ ಮಣ್ಣಿದು
ವೀರಾಧಿವೀರರಾಳಿ ಮೆರೆದ ಭೂಮಿ ನಮ್ಮದು
ವಿವಿಧತೆಯಲ್ಲಿ ಏಕತೆಯ ಮೆರೆದ ಅಭಿಮತವು
ದೇಶಬಾಂಧವರ ಹೋರಾಟದ ವಿಜಯ ಭಾರತವು
ಶ್ರೀಮತಿ ಸುಲೋಚನಾ ಮಾಲಿಪಾಟೀಲ.