Homeಸುದ್ದಿಗಳುಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ ಕೇವಲ ಐದು ಕಿ.ಮೀ ದೂರಲ್ಲಿ ಹದಿಮೂರನೇಯ ಶತಮಾನದಲ್ಲಿ ಅಂದರೆ ಕ್ರಿ.ಶ. 1238 ರಲ್ಲಿ ಹೊಯ್ಸಳ ವಾಸ್ತುಶೈಲಿಯಲ್ಲಿ ನಿರ್ಮಿತವಾದ ಶಿವನಿಗೆ ಮುಡಿಪಾದ ಸುಂದರ ದೇವಾಲಯ ಹೊಯ್ಸಳ ದೊರೆವೀರ ಸೋಮೇಶ್ವರನ ಕಾಲದಲ್ಲಿ ಕಟ್ಟಲ್ಪಟ್ಟ ಸುಂದರ ಗುಡಿ ಇದು. ಅಮರಶಿಲ್ಪಿ ಜಕಣಾಚಾರಿಯ ಹಾಗೆಯೆ ಸಾಕಷ್ಟು ಪ್ರಸಿದ್ಧಿಗಳಿಸಿದ್ದ ರೂವಾರಿ ಮಲ್ಲಿತಮ್ಮ ಎಂಬ ಅಸಾಮಾನ್ಯ ಶಿಲ್ಪಿಯು ಈ ದೇವಾಲಯದ ಪ್ರಮುಖ ಶಿಲ್ಪಗಾರ. ಹೊಯ್ಸಳರ ಅನೇಕ ದೇವಾಲಯಗಳಿಗೆ ಮಲ್ಲಿತಮ್ಮ ಶಿಲ್ಪಗಾರನಾಗಿ ಗಮನಸೆಳೆಯುತ್ತಾನೆ.

ಇಲ್ಲಿನ ಕೆತ್ತನೆಗಳನ್ನು ಹಾಗೂ ಕಲಾತ್ಮಕತೆಯನ್ನು ಗಮನಿಸಿದಾಗ ಕಲಾಪ್ರಿಯರು ತನ್ಮಯರಾಗುವುದು ಖಚಿತ. ಸೂಕ್ಷವಾದ ಹಲವಾರು ರಚನೆಗಳನ್ನು ಕೆತ್ತನೆಗಳನ್ನು ಇಲ್ಲಿ ಕಾಣಬಹುದಾಗಿದೆ. ಒಮ್ಮೆಯಾದರೂ ನೋಡಲೇಬೇಕಾದ ಸುಂದರ ದೇವಾಲಯವಾಗಿ ಜನರನ್ನು ಆಕರ್ಷಿಸುತ್ತದೆ ಪಂಚಲಿಂಗೇಶ್ವರ. ಹಾಗಾಗಿ ಎಲ್ಲ ಕನ್ನಡಿಗರು ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟು ತಮ್ಮ ಈ ಸುಂದರ ಗುಡಿಯ ಸೌಂದರ್ಯವನ್ನು ಸವಿಯಿರಿ.

RELATED ARTICLES

Most Popular

error: Content is protected !!
Join WhatsApp Group