ಬೀದರ್ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ

Must Read

ಬೀದರ್ – ಜಿಲ್ಲೆಯಲ್ಲಿ  ಪಶ್ಚಿಮ ಬಂಗಾಳ ಮೂಲದ ಎರಡು ಸಾವಿರಕ್ಕೂ ಹೆಚ್ಚು ನಕಲಿ ವೈದ್ಯರ ಹಾವಳಿ ಹೆಚ್ಷಾಗಿದ್ದು ಜನತೆಯ ಆರೋಗ್ಯ ಅಪಾಯದಲ್ಲಿದೆ ಆದರೂ ಜಿಲ್ಲಾಡಳಿತ ಈ ವೈದ್ಯರ ಹಾವಳಿ ತಡೆಗಟ್ಟಲು ವಿಫಲವಾಗಿದೆ.

ಬೀದರ್ ನಲ್ಲಿ ಕಲ್ಕತ್ತಾ ಡಾಕ್ಟರ ಎಂದು ಪ್ರಸಿದ್ಧರಾಗಿದ್ದು ಆಶ್ಚರ್ಯವೆಂದರೆ ಜಿಲ್ಲೆಯ ಪ್ರತಿ ಗ್ರಾಮದಲ್ಲಿಯೂ ಕಲ್ಕತ್ತಾ ಡಾಕ್ಟರ್ ಗಳಿದ್ದಾರೆ !

ಇದಕ್ಕೆಲ್ಲ ಜಿಲ್ಲಾ ಆರೋಗ್ಯ ಇಲಾಖೆ ಕೂಡ ಕುಮ್ಮಕ್ಕು ನೀಡುತ್ತದೆ ಎಂಬ ಆರೋಪವಿದ್ದು ಬೀದರ್ ಜಿಲ್ಲಾದ್ಯಂತ ಎರಡು ಸಾವಿರಕಿಂತ ಹೆಚ್ಚು ಕಲ್ಕತ್ತಾ ಡಾಕ್ಟರ್ ಗಳಿದ್ದಾರೆ.

ಈ ನಕಲಿ ವೈದ್ಯರುಗಳು ಕರ್ನಾಟಕ ಮೆಡಿಕಲ್ ಕೌನ್ಸಿಲ್‌ ಅನುಮತಿ ಇಲ್ಲದೇ ಆಸ್ಪತ್ರೆ ತೆರೆದಿದ್ದಾರೆ‌. ವೈದ್ಯಕೀಯ ವಿದ್ಯಾಭ್ಯಾಸ ಮುಗಿಸದೆ ಡಾಕ್ಟರ್ ಎಂದು ಹೇಳಿಕೊಂಡ ಇವರು ಬಡ ರೋಗಿಗಳ ಜೀವದ ಜೊತೆ ಚಲ್ಲಾಟವಾಡುತ್ತಿದ್ದು ಆರೋಗ್ಯ ಸಚಿವರು ನೋಡಲೇ ಬೇಕಾದ ಸ್ಟೋರಿ ಇದಾಗಿದೆ. ಇವರ ಅವ್ಯವಸ್ಥೆ ಎಷ್ಟು ಇದೆಯೆಂದರೆ ಪಶ್ಚಿಮ ಬಂಗಾಳದ ಮಹಿಳೆ  ತನ್ನ ಗಂಡನಿಗೆ ಫೋನ್ ಮೂಲಕ ಔಷಧ ಕೇಳಿ ರೋಗಿಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋ ಟೈಮ್ಸ್ ಆಫ್ ಕರ್ನಾಟಕ  ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಹೆಣ್ಣು ಮಗಳು ಡಾಕ್ಟರ್ ಪದವಿ ಪಡೆಯದೇ ಚಿಕಿತ್ಸೆ ನೀಡುತ್ತಿರುವುದು ಅವ್ಯವಸ್ಥೆಯ ಪರಮಾವಧಿ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರು ಇತ್ತ ಗಮನ ಹರಿಸಬೇಕಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group