Sindagi: ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಮನವಿ

0
343

ಸಿಂದಗಿ: ರಾಜ್ಯಾದ್ಯಂತ ಕಡ್ಡಾಯವಾಗಿ ನವೆಂಬರ್ 1 ರೊಳಗಾಗಿ ಕನ್ನಡ ನಾಮಫಲಕ ಅಳವಡಿಸುವುದು, ಗಡಿನಾಡು ಹಾಗೂ ಅತಿ ಹಿಂದುಳಿದ ಕನ್ನಡ ಶಾಲೆಗಳಿಗೆ ಮೂಲಭೂತ ಸೌಲಭ್ಯ ನೀಡಿ ಕನ್ನಡ ಶಾಲೆಗಳನ್ನು ಉಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಂಘಟನೆಯ ಕಾರ್ಯಕರ್ತರು ತಹಶೀಲ್ದಾರರ ಮುಖಾಂತರ  ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ತಾಲೂಕು ಅಧ್ಯಕ್ಷ ಜಿಲಾನಿ ಮುಲ್ಲಾ ಮಾತನಾಡಿ, ಕರ್ನಾಟಕ ರಾಜ್ಯಾದ್ಯಂತ ವಿಶಿಷ್ಟವಾಗಿ ಹಾಗೂ ವಿಭಿನ್ನವಾಗಿ ಗುರುತಿಸಿಕೊಂಡಿದ್ದು, ನಾಡು, ನುಡಿ, ಗಡಿ, ಜಲ, ಭಾಷೆ ಕಾರ್ಮಿಕರ, ರೈತರ ಬಡವರ ಪರ ಸಾಮಾಜಿಕ ಕಳಕಳಿಯುಳ್ಳ ಹಾಗೂ ಶೈಕ್ಷಣಿಕವಾಗಿ ತನ್ನದೆ ಆದ ಕೊಡುಗೆ ನೀಡುತ್ತಾ ಬಂದಿದ್ದು ಹಲವಾರು ವಿಷಯಗಳಲ್ಲಿ ಸಂಘಟನೆಯು ತನ್ನ ಗಟ್ಟಿ ನಿಲುವಿನಿಂದ ನಾಡಿಗೆ ತೊಂದರೆಯಾದಾಗ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ ಜ್ವಲಂತ ಉದಾಹರಣೆಗಳು ಸಾಕಷ್ಟಿವೆ, ಕಳೆದ 20 ವರ್ಷಗಳಿಂದ ಸಂಘಟನೆಯನ್ನು ಹಗಲಿರುಳೆನ್ನದೆ ತನ್ನದೆ ಸ್ವಂತ ಮನೆಯಂತೆ ಪೋಷಿಸಿ ಸಾವಿರಾರು ಯುವಕರಿಗೆ ಕನ್ನಡದ ಬಗ್ಗೆ ನಾಡು ನುಡಿಯ ಬಗ್ಗೆ ನಿರಂತರವಾಗಿ ಸ್ವಾಭಿಮಾನ ಮುಡಿಸುತ್ತ ಬಂದಿದೆ. ನೂತನ ಸರ್ಕಾರದ ಮೇಲೆ ಸಾರ್ವಜನಿಕರು ಅಭೂತಪೂರ್ವವಾದ ಭರವಸೆಯನ್ನು ಇಟ್ಟುಕೊಂಡಿದ್ದು, ತಮ್ಮ ನೇತೃತ್ವದಲ್ಲಿ ರಾಜ್ಯಾದ್ಯಂತ ಎಲ್ಲ ಕಡೆ ಕಡ್ಡಾಯವಾಗಿ ನವೆಂಬರ್ 1 ರೊಳಗಾಗಿ ಕನ್ನಡ ನಾಮಫಲಕ ಅಳವಡಿಸುವುದು, ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುವುದು, ಕನ್ನಡಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವುದು ಹಾಗೂ ಉತ್ತರ ಕರ್ನಾಟಕ ಭಾಗದ ಗಡಿನಾಡು ಹಾಗೂ ಅತಿ ಹಿಂದುಳಿದ ಕನ್ನಡ ಶಾಲೆಗಳಿಗೆ ಮೂಲಭೂತ ಸೌಲಭ್ಯ ನೀಡಿ ಕನ್ನಡ ಶಾಲೆಗಳು ಉಳಿಸುವುದು. ಪ್ರತಿ ಬಾರಿಯಂತೆ ಬರಿ ಚರ್ಚೆಗೆ ಸೀಮಿತವಾಗದೆ, ಸೂಕ್ತ ಕ್ರಮ ಕೈಗೊಂಡು ಅಭಿವೃದ್ಧಿ ಮಾಡಬೇಕೆಂದು ಎಲ್ಲ ಸಮುದಾಯದ ಸಾರ್ವಜನಿಕರ ಪರವಾಗಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲೂಕಿನ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ವಿಶ್ವನಾಥ ಶಿವಸಿಂಪಗೇರ, ಅಹ್ಮದ ಸಿಂಧೆ, ಆಕಾಶ ಭಜಂತ್ರಿ, ಶಬ್ಬೀರಪಟೇಲ ಬಿರಾದಾರ, ಉಸ್ಮಾನ ಆಲಮೇಲ, ಆಕಾಶ ಯಾಳವಾರ, ಬಸವರಾಜ ಪಾಟೀಲ,  ಪಾಟೀಲ, ಮುಜ್ಜಮೀಲ ಮುಲ್ಲಾ, ಸದಾನಂದ ಧರೀಕಾರ, ಮಲ್ಲಿಕಾರ್ಜುನ ಬಿರಾದಾರ ಉಪಸ್ಥಿತರಿದ್ದರು.