ಸಿಂದಗಿ: ಎಸ್.ಸಿಪಿ/ಟಿ.ಎಸ್.ಪಿ ಮಾಡಲಾದ ಅನುದಾನದಲ್ಲಿ ಪ್ರಸ್ತಾಪಿತ ನೀರಾವರಿ ಸಾಮರ್ಥ್ಯ ಯೋಜನೆಯಡಿ ಹಂಚಿಕೆ ಕಾಮಗಾರಿ (ಗಂಗಾ ಕಲ್ಯಾಣ) ಯೋಜನೆಯಲ್ಲಿ ಆಯ್ಕೆ ಮಾಡಲಾದ ಫಲಾನುಭವಿಗಳನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡದೇ ಈ ಹಿಂದೆ ಆಯ್ಕೆಯಾದ ಫಲಾನುಭವಿಗಳನ್ನೇ ಮುಂದುವರೆಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ, ಕಾಲುವೆ ವಲಯ-2, ರಾಂಪೂರ, ಮುಖ್ಯ ಇಂಜನೀಯರ್ ಕಛೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಮುಖ್ಯ ಇಂಜನೀಯರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿ, 2022-23ನೇ ಸಾಲಿನಲ್ಲಿ ಸಿಂದಗಿ ವಿಧಾನಸಭಾ ಮತಕ್ಷೇತ್ರದ ಎಸ್.ಸಿಪಿ/ಟಿ.ಎಸ್.ಪಿ ಮಾಡಲಾದ ಅನುದಾನದಲ್ಲಿ ಪ್ರಸ್ತಾಪಿತ ನೀರಾವರಿ ಸಾಮರ್ಥ್ಯ ಯೋಜನೆಯಡಿ ಹಂಚಿಕೆ ಕಾಮಗಾರಿ (ಗಂಗಾ ಕಲ್ಯಾಣ) ಯೋಜನೆಯಲ್ಲಿ ಆಯ್ಕೆ ಮಾಡಲಾದ ಫಲಾನುಭವಿಗಳನ್ನು ನೀರಾವರಿ ಸಾಮರ್ಥ್ಯ ಕಾಮಗಾರಿಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ ಉಲ್ಲೇಖ 1&3 ರಂತೆ ಈಗಿನ ಶಾಸಕರು ಫಲಾನುಭವಿ ಬದಲಾವಣೆ ಮಾಡಲು ಕೋರಿರುತ್ತಾರೆ. ಯಾವುದೇ ಕಾರಣಕ್ಕೂ ಬದಲಾವಣೆ ಮಾಡದೇ ಈ ಹಿಂದೆ ಆಯ್ಕೆಯಾದ ಫಲಾನುಭವಿಗಳನ್ನೇ ಮುಂದುವರೆಸುವಂತೆ ಅಭಿಪ್ರಾಯ ಹಾಗೂ ಶಿಫಾರಸ್ಸಿನೊಂದಿಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಅನುವಾಗುವಂತೆ ನಿಗಮ ಕಛೇರಿಗೆ ಸೂಚಿಸಿದ್ದೀರಿ. ಯಾವುದೇ ಕಾರಣಕ್ಕೂ 2022-23 ನೇ ಸಾಲಿನ (ಗಂಗಾ ಕಲ್ಯಾಣ) ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳನ್ನು ಬದಲಾವಣೆ ಮಾಡದೇ ಈ ಹಿಂದೆ ಆಯ್ಕೆಯಾದ ಟೆಂಡರ್‍ನ್ನೇ ಮುಂದುವರೆಸಿಕೊಂಡು ಫಲಾನುಭವಿಗಳನ್ನೇ ಮುಂದುವರೆಸಿ ಸದರಿ
ಹೋಗಬೇಕು. ಒಂದು ವೇಳೆ ಸದರಿ ಫಲಾನುಭವಿಗಳಲ್ಲಿ ಯಾವುದೇ ಬದಲಾವಣೆಯಾದಲ್ಲಿ ನಮ್ಮ ಪಕ್ಷದಿಂದ ತಮ್ಮ ಕಛೇರಿ ಮುಂದೆ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ಮಾಜಿ ಶಾಸಕ ರಮೇಶ ಭೂಸನೂರ, ಮಹಿಳಾ ಮೋರ್ಚಾ ಅಧ್ಯಕ್ಷೆ ನೀಲಮ್ಮ ಯಡ್ರಾಮಿ, ಪೀರು ಕೆರೂರ, ಸದಾಶಿವ ಹಾದಿಮನಿ ಶಿಕ್ಷಕರು, ಶಿವಕುಮಾರ ಬಿರಾದಾರ, ಶಂಕರ ಬಗಲಿ, ಸಂತೋಷ ಮಣೀಗೇರಿ, ಅಂಬಿರೀಶ ತಳವಾರ, ಸಿದ್ದು ಬುಳ್ಳಾ, ಶ್ರೀಶೈಲ ಚಳ್ಳಗಿ, ಮಲ್ಲು ಸಾವಳಸಂಗ,ಅನಸೂಯಾ ಪರಗೊಂಡ, ಕಾಜು ಬಂಕಲಗಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.