ಮೂಡಲಗಿ: ಪಟ್ಟಣದ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕರ್ನಾಟಕ ಗೃಹ ಮಂಡಳಿ ಇಲಾಖೆಯಿಂದ ಸುಮಾರು 75 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮ ಗುರುವಾರದಂದು ಜರುಗಿತು.
ಈ ಸಮಯದಲ್ಲಿ ಗೋಕಾಕ-ಮೂಡಲಗಿ ತಾಲೂಕಾ ಕಾನಿಪ ಸಂಘದ ಗೌರವಾಧ್ಯಕ್ಷ ಹಾಗೂ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಮೂಡಲಗಿ ಸರಕಾರಿ ಕಾಲೇಜಿನಲ್ಲಿ ಪ್ರತೇಕ ಗ್ರಂಥಾಲಯ ನಿರ್ಮಾಣ ಮಾಡುವದರಿಂದ ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸವನ್ನು ಮತ್ತು ಬುದ್ಧಿ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುವುದು ಎಂದರು.
ಕಾಲೇಜಿನ ಪ್ರಾಚಾರ್ಯ ಮಹೇಶ ಕುಂಬಾರ ಮಾತನಾಡಿ, ಕಾಲೇಜಿನಲ್ಲಿ ಪ್ರತ್ಯೇಕ ಗ್ರಂಥಾಲಯ ವ್ಯವಸ್ಥೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಹೆಚ್ಚಿನ ಮುತುವರ್ಜಿಯಿಂದ ಅನುದಾನ ಬಿಡುಗಡೆಯಾಗಿ ಗ್ರಂಥಾಲಯ ಸ್ಥಾಪನೆಯಾಗುತ್ತಿರುವದರಿಂದ ಕಾಲೇಜಿನ ಎಲ್ಲ ಮತ್ತು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದರ ಜೊತೆಗೆ ಪಠ್ಯದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗೆ ಗ್ರಂಥಾಲಯಗಳು ಬಹಳ ಅವಶ್ಯವಾಗಿದೆ ಎಂದರು.
ಮಹಾದೇವ ಹಿರೇಮಠ ಅವರು ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಈ ಸಮಯದಲ್ಲಿ ಕಾಲೇಜಿನ ಅಭಿವೃದ್ಧಿ ಸಲಹಾ ಸಮಿತಿ ಸದಸ್ಯ ಸಂಜಯ ಮೊಕಾಶಿ, ಕರ್ನಾಟಕ ಗೃಹ ಮಂಡಳಿ ಇಲಾಖೆಯ ಬೆಳಗಾವಿ ಜಿಲ್ಲಾ ಎ.ಇಇ ಜ್ಯೋತಿ ನಾಜರೆ, ಪುರಸಭೆ ಸದಸ್ಯರಾದ ಹನಮಂತ ಗುಡ್ಲಮನಿ, ಜಯಾನಂದ ಪಾಟೀಲ, ಅಬ್ದುಲಗಫಾರ ಡಾಂಗೆ, ಶಿವು ಸಣ್ಣಕ್ಕಿ, ಆನಂದ ಟಪಾಲ, ಉಪನ್ಯಾಸಕರಾದ ಶಾನೂರಕುಮಾರ ಗಾಣಿಗೇರ, ಚೇತನರಾಜ ಬಿ, ರವಿ ಗಡದನ್ನವರ ಸುಮ್ಮಾ ಲಂಕೆಪ್ಪನವರ, ಹಾಗೂ ಅನ್ವರ ನದಾಫ್, ಶಿವಲಿಂಗ ಹಾದಿಮನಿ, ಬಸು ಝಂಡೇಕುರಬರ, ಸಿದ್ದು ಗಡೇಕಾರ, ಸಿದ್ದಪ್ಪ ಮಗದುಮ, ಶಿವಬೋಧ ಗೋಕಾಕ, ಭೀಮಶಿ ಢವಳೇಶ್ವರ, ಮಲ್ಲಪ್ಪ ನೇಮಗೌಡರ, ಪಾಂಡು ಮಹೇಂದ್ರಕರ, ಶಶಿ ಪಾಟೀಲ ಮತ್ತಿತರರು ಇದ್ದರು.