spot_img
spot_img

ಹೆಣ್ಣು: ಭೂಮಿಯ ಮೇಲಿನ ಸುಂದರ ಸೃಷ್ಟಿ

Must Read

- Advertisement -

ಆಕಾಶದ ನೀಲಿಯಲ್ಲಿ

ಚಂದ್ರ ತಾರೆ ತೊಟ್ಟಿಲಲ್ಲಿ

ಬೆಳಕನಿಟ್ಟು ತೂಗಿದಾಕೆ

- Advertisement -

ನಿನಗೆ ಬೇರೆ ಹೆಸರು ಬೇಕೆ

    ಸ್ತ್ರೀ ಎಂದರೆ ಅಷ್ಟೇ ಸಾಕೆ

ಹಸುರನುಟ್ಟ ಬೆಟ್ಟಗಳಲಿ

- Advertisement -

ಮೊಲೆಹಾಲಿನ ಹೊಳೆಯನಿಳಿಸಿ

ಬಯಲ ಹಸುರ ನಗಿಸಿದಾಕೆ

     ನಿನಗೆ ಬೇರೆ ಹೆಸರು ಬೇಕೆ?

     ಸ್ತ್ರೀ ಎಂದರೆ ಅಷ್ಟೇ ಸಾಕೆ?

ಮರ ಗಿಡ ಹೂ ಮುಂಗುರುಳನು

ತಂಗಾಳಿಯ ಬೆರಳ ಸವರಿ

ಹಕ್ಕಿ ಗಿಲಕಿ ಹಿಡಿಸಿದಾಕೆ

     ನಿನಗೆ ಬೇರೆ ಹೆಸರು ಬೇಕೆ?

     ಸ್ತ್ರೀ ಎಂದರೆ ಅಷ್ಟೇ ಸಾಕೆ?

ಮನೆಮನೆಯಲಿ ದೀಪ ಮುಡಿಸಿ

ಹೊತ್ತು ಹೊತ್ತಿಗೆ ಅನ್ನ ಉಣಿಸಿ

ತಂದೆ ಮಗುವ ತಬ್ಬಿದಾಕೆ

     ನಿನಗೆ ಬೇರೆ ಹೆಸರು ಬೇಕೆ?

     ಸ್ತ್ರೀ ಎಂದರೆ ಅಷ್ಟೇ ಸಾಕೆ?

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ


ಭೂಮಿಯ ಮೇಲಿನ ಅತ್ಯಂತ ಸುಂದರ ಸೃಷ್ಠಿಯೇ ಹೆಣ್ಣು. ನಾನಾ ರೂಪಗಳಲ್ಲಿ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗುವ ಜೀವವೇ ಹೆಣ್ಣು. ಹಾಗಾಗಿ ಆಕೆಯ ಪ್ರೀತಿಗೆ , ಮಮತೆಗೆ, ತ್ಯಾಗಕ್ಕೆ ಎಂದಿಗೂ ಬೆಲೆ ಕಟ್ಟಲಾಗದು. ಎಲ್ಲಿ ಸ್ತ್ರೀಯನ್ನು ಗೌರವಿಸಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ಮಾತಿದೆ. ಹೆಣ್ಣನ್ನು ಗೌರವಯುತವಾಗಿ ನಡೆಸಿಕೊಳ್ಳುವುದೇ ನಾವು ಆಕೆಗೆ ಸಲ್ಲಿಸುವ ನಿಜಗೌರವ. ಪ್ರತಿ ಜೀವಕ್ಕೆ ಜೀವ ನೀಡುವ ಹೆಣ್ಣಿಗೆ, ಅವಳೊಳಗಿನ ತಾಯ್ತನಕ್ಕೆ ಮಹಿಳಾ ದಿನದ ಶುಭಾಶಯಗಳು.

ಸ್ತ್ರೀ ಕನಸೂ ಹೌದು, ವಾಸ್ತವವೂ ಹೌದು. ಪ್ರಕೃತಿಗೂ-ಸ್ತ್ರೀಗೂ ಅವಿನಾಭಾವ ಸಂಬಂಧವಿದೆ. ಸ್ತ್ರೀ ಭೂಮಿಯಾಗಿ, ಮುಗಿಲಾಗಿ, ಮೇರು ಪರ್ವತವಾಗಿ ಬೆಳೆದು ನಿಂತಿದ್ದಾಳೆ. ಹಾಗಾಗಿ ಸ್ತ್ರೀ ಯನ್ನು ಸಮೃದ್ಧಿಯ ಸಂಕೇತವೆಂದು ಪರಿಭಾವಿಸಲಾಗಿದೆ. ಇಡೀ ವಿಶ್ವವೇ ಆರೋಗ್ಯಕರ ಮನೋಭಾವ ಹೊಂದಲು ಸಹಕಾರ ಶಕ್ತಿ ಮಹಿಳೆಯಾಗಿದ್ದಾಳೆ. ಏಕೆಂದರೆ ಒಂದು ಜೀವವನ್ನು ಸೃಷ್ಟಿ ಮಾಡುವ ಶಕ್ತಿ ಮಹಿಳೆಗೆ ಇದೆ ಎಂದಾದರೆ, ಖಂಡಿತ ಅವಳಲ್ಲಿ ಅನಂತವಾದ ಶಕ್ತಿ ಇದೆ ಎಂದರ್ಥ. ಮಾತೃಶಕ್ತಿ , ವಾತ್ಸಲ್ಯ,  ಸಹನೆ, ಪ್ರೀತಿ, ತಾಳ್ಮೆ, ಆರೈಕೆ, ಸತ್ಕಾರ, ಸನ್ಮಾನ, ಸಾಂತ್ವನ ಗುಣಗಳು ಹೆಣ್ಣಿಗೆ ಹುಟ್ಟಿನಿಂದಲೇ ಮೇಳೈಸಿಕೊಂಡು ಬಂದಿರುತ್ತವೆ.

ಅಂದಹಾಗೆ “ಮಹಿಳೆಯೊಬ್ಬಳು ನಿರ್ಭಯದಿ ಏಕಾಂಗಿಯಾಗಿ ನಡೆದಾಡಿದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಬಂದಂತೆ” ಎಂಬ ಮಹಾತ್ಮ ಗಾಂಧೀಜಿಯವರ ನುಡಿಗಳು ಪ್ರಸ್ತುತ ಭಾರತದಲ್ಲಿ ಮಹಿಳೆಯರು ಪುರುಷರಷ್ಟೇ ಸಮಾನವಾಗಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದ್ದಾಳೆ. ಅಷ್ಟೇ ಅಲ್ಲದೇ ಗಾಂಧೀಜಿಯವರ ದೂರಾಲೋಚನೆಗೆ ಇಂಬು ಎಂಬಂತೆ ಇಂದು ಜಾಗತಿಕ ಮಟ್ಟದಲ್ಲಿ ಮಹಿಳೆ ಒಂದು ರತ್ನವಾಗಿ ಹೊಳೆಯುತ್ತಿದ್ದಾಳೆ.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಅವಳದೇ ಆದ ಗೌರವ, ಸ್ಥಾನಮಾನಗಳಿರುವುದನ್ನು ಗುರುತಿಸಬಹುದಾಗಿದೆ. ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ. ಮಮತೆ, ಕರುಣೆ, ಅಕ್ಕರೆ ಮತ್ತು ಭೂಮಿ ತೂಕದ ತಾಳ್ಮೆಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ.

“ಹೆಣ್ಣೆಂದರೆ ಭೋಗದ ವಸ್ತುವಲ್ಲ” ಎಂಬ ಜ್ಞಾನಿಗಳ ಮಾತು ಎಚ್ಚರಿಸಿ, ಅಬಲೆಯ ಸಬಲೆಯಾಗಿ ಮಾರ್ಪಡಿಸಿ, ಸಾಧನೆಯ ಶಿಖರದ ತುದಿಯಲ್ಲಿ ನಿಂತಿಹಳು ತಾಯಿಯಾಗಿ, ಸೋದರಿಯಾಗಿ, ಗೆಳತಿಯಾಗಿ, ಮಡದಿಯಾಗಿ, ಮಗಳಾಗಿ, ಅಕ್ಷಯ ಪಾತ್ರೆಯಂತೆ, ಬಗೆದಷ್ಟು ಪ್ರೀತಿಯ ಮೊಗೆದು ಮೊಗೆದು ಧಾರೆ ಎರೆದು ಪೋಷಿಸುವಳು.

ಮಹಿಳೆ ಇಂದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವನ್ನೊಳಗೊಂಡು ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪನ್ನು ಮೂಡಿಸುತ್ತ ಕುಟುಂಬದ ಆರ್ಥಿಕ ಶಕ್ತಿಯಾಗಿ, ಹಲವು ಸಾಧನೆಗಳೊಂದಿಗೆ, ದೇಶಕ್ಕೆ, ಸಮಾಜಕ್ಕೆ, ಕುಟುಂಬಕ್ಕೆ ಪುರುಷರಷ್ಟೇ ಕೊಡುಗೆ ನೀಡುವುದರ ಮೂಲಕ ಸಬಲೀಕರಣದತ್ತ ಮುನ್ನೆಡೆಯುತ್ತಿರುವ ನಿಮಗಿದೋ ನನ್ನ ಕೋಟಿ ಶರಣು.

ಹೆಣ್ಣು ಭವದ ಬೀಜ ಎಂದು ಅಲ್ಲಮ ಪ್ರಭು ಹೇಳಿದ್ದಾರೆ. ಹೆಣ್ಣಿಲ್ಲದೇ ನಾವಿಲ್ಲ, ಹೆಣ್ಣಿಲ್ಲದೇ ನಾಡಿಲ್ಲ.  ಆದ್ದರಿಂದ ಪ್ರತಿಯೊಬ್ಬರು ಹೆಣ್ಣನ್ನ ಉಳಿಸಿ, ಹೆಣ್ಣನ್ನ ಬೆಳೆಸಿ, ಹೆಣ್ಣನ್ನ ಗೌರವಿಸಿ. ಏಕೆಂದರೆ ಹೆಣ್ಣಿoದಲೇ ಇಹವು ಹೆಣ್ಣಿoದಲೇ ಪರವು, ಹೆಣ್ಣಿoದಲೇ ಸಕಲ ಸಂಪದವು- ಸರ್ವಜ್ಞ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ :  ಇಲ್ಲಿದೆ Best ways to celebrate

ಪ್ರತಿ ವರ್ಷ ಮಾರ್ಚ್ 8 ರಂದು ವಿಶ್ವದೆಲ್ಲೆಡೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ.

ಹಿನ್ನೋಟ

1910 ರ ಆಗಸ್ಟ್‌ನಲ್ಲಿ ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ 17 ದೇಶಗಳ ಪ್ರತಿನಿಧಿಗಳು ಸೇರಿದ್ದರು.  ಅಮೆರಿಕೆಯ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕಿಯರು ಬಂದಿದ್ದರು. ಈ ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್‌ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಜೆಟ್‌ಕಿನ್ ಅಧ್ಯಕ್ಷೆಯಾಗಿದ್ದರು. ಈ ಸಮ್ಮೇಳನದಲ್ಲಿ ಚರ್ಚಿತವಾದ ಎರಡು ವಿಷಯಗಳೆಂದರೆ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಮತ್ತು ಇತರ ಸೌಕರ್ಯಗಳು.

ಕ್ಲಾರಾ ಜೆಟ್‌ಕಿನ್ ಈ ಸಮ್ಮೇಳನದಲ್ಲಿ ಮಾರ್ಚ್ 8 ನ್ನು ಮಹಿಳಾ ದಿನವನ್ನಾಗಿ ಆಚರಿಸಬೇಕೆಂದು 1911 ರಲ್ಲಿ ನಿರ್ಣಯ ಮಂಡಿಸಿದರು. ಅಲ್ಲಿ ನೆರೆದಿದ್ದ ವಿವಿಧ ರಾಷ್ಟ್ರಗಳ ಸದಸ್ಯ ಪ್ರತಿನಿಧಿಗಳು ಸರ್ವಾನುಮತದಿಂದ ಸಮ್ಮತಿಸಿದರು. ಈ ಸಮ್ಮೇಳನದಲ್ಲಿ ಫಿನ್ಲೆಂಡ್‌ನಲ್ಲಿ ಆಗಷ್ಟೇ ಚುನಾಯಿತರಾಗಿದ್ದ ಮೂವರು ಮಹಿಳೆಯರಿದ್ದು, ಅವರು ಜೆಟ್‌ಕಿನ್‌ ಸಲಹೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಹೀಗೆ ಅಂತರರಾಷ್ಟ್ರೀಯ ಮಹಿಳಾ ದಿನವೆನ್ನುವುದು ಪ್ರತಿಭಟನೆ ಮತ್ತು ರಾಜಕೀಯ ಕ್ರಿಯಾಶೀಲತೆಯ ದಿನವಾಗಿ ಅಸ್ತಿತ್ವಕ್ಕೆ ಬಂದಿತು.

1911 ರಲ್ಲಿ ಮತದಾನದ ಹಕ್ಕನ್ನು ಬೇಡಿಕೆಯಾಗಿಟ್ಟುಕೊಂಡು ಮೊದಲ ಬಾರಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಇದಕ್ಕೂ ಮೊದಲು 1903 ರಲ್ಲಿ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಹೋರಾಟ ನಡೆಸಿದ್ದ ಮಹಿಳಾ ಕಾರ್ಮಿಕ ಸಂಘಟನೆಗಳು ‘ಮಹಿಳೆಯರ ಟ್ರೇಡ್ ಯೂನಿಯನ್ ಲೀಗ್’ ಸ್ಥಾಪಿಸಿ ರಾಜಕೀಯ ಮತ್ತು ಆರ್ಥಿಕ ಕಲ್ಯಾಣವನ್ನು ತಮ್ಮ ಸಂಘಟನೆಯ ಮುಖ್ಯ ಧ್ಯೇಯವನ್ನಾಗಿಸಿಕೊಂಡವು.

1908 ರ ಫೆಬ್ರವರಿ ಕೊನೆಯ ಭಾನುವಾರ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಬೃಹತ್ ಪ್ರತಿಭಟನಾ ಪ್ರದರ್ಶನಗಳು ನಡೆದಿದ್ದವು. ನಂತರ 1909 ರಲ್ಲಿ ಸಿದ್ಧ ಉಡುಪುಗಳ ಕಾರ್ಖಾನೆಗಳಲ್ಲಿ 20,000 ದಿಂದ 30,000 ದಷ್ಟು ಮಹಿಳೆಯರು ಚಳಿಗಾಲದಲ್ಲಿ 13 ವಾರಗಳ ಕಾಲ ಮುಷ್ಕರ ನಡೆಸಿ ದಸ್ತಗಿರಿಯಾದರು. ಮಹಿಳೆಯರ ಟ್ರೇಡ್ ಯೂನಿಯನ್ ಲೀಗ್‌ನವರು ಜಾಮೀನು ನೀಡಿ ಬಂಧಿತ ಕೆಲಸಗಾರರನ್ನು ಬಿಡಿಸಿಕೊಂಡರು. ಈ ಅಮೆರಿಕದ ಮಹಿಳೆಯರ ಹೋರಾಟದಿಂದ ಸ್ಫೂರ್ತಿಗೊಂಡ ಕ್ಲಾರಾ ಜೆಟ್‌ಕಿನ್ ಸೋಷಿಯಲಿಸ್ಟ್ ಮಹಿಳೆಯರ ಸಮ್ಮೇಳನದಲ್ಲಿ ವರ್ಷಕ್ಕೊಮ್ಮೆ ದಿನವನ್ನು ನಿಗದಿಪಡಿಸಿ ಮಹಿಳೆಯರು ತಮ್ಮ ಬೇಡಿಕೆಗಳನ್ನು ಒತ್ತಾಯಿಸಲು ಅನುವಾಗುವಂತಹ ವ್ಯವಸ್ಥೆಗಾಗಿ ಸಲಹೆ ನೀಡಿ ಕಾರ್ಯರೂಪಕ್ಕೆ ತರಲು ಶ್ರಮಿಸಿದರು.

ಬದಲಾವಣೆಯ ಹಾದಿಯನ್ನು ರೂಪಿಸುವಲ್ಲಿ ನಮ್ಮ ಜಗತ್ತು ಮತ್ತು ನಾಯಕರು ಅವಿಭಾಜ್ಯ ಪಾತ್ರವನ್ನು ವಹಿಸುತ್ತಾರೆ, ಆದರೆ ಅದನ್ನು ತೊಡಗಿಸಿಕೊಳ್ಳುವುದು ಪ್ರತಿಯೊಬ್ಬರಿಗೂ ಬಿಟ್ಟದ್ದು. 

ಈ ಲೇಖನದಲ್ಲಿ ನೀವು, ನಿಮ್ಮ ತಂಡ ಮತ್ತು ನಿಮ್ಮ ಸಮುದಾಯವು ಈ ವರ್ಷ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಆಚರಿಸಬಹುದಾದ 10 ಅತ್ಯುತ್ತಮ ಮಾರ್ಗಗಳನ್ನು ಹಂಚಿಕೊಂಡಿದ್ದೇನೆ. 

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲು 10 ಮಾರ್ಗಗಳು ಇಲ್ಲಿವೆ:

1. Choose To Challenge ಮೂಲಕ ಸಾಮಾಜಿಕವಾಗಿ ನಿಮ್ಮ ಬೆಂಬಲವನ್ನು ತೋರಿಸಿ:

2. ಸಂಭಾಷಣೆ ಮತ್ತು ಆಚರಣೆಯಲ್ಲಿ ಪುರುಷರು ತೊಡಗಿಸಿಕೊಳ್ಳಿ:

3. ನಿಮ್ಮ ಕೆಲಸದ ಸ್ಥಳದಲ್ಲಿ ಲಿಂಗ ಸಮಾನತೆಗಾಗಿ ವಕೀಲರಾಗಿ:

4. ಆನ್‌ಲೈನ್ ಪ್ಯಾನೆಲ್‌ನ್ನು ಹೋಸ್ಟ್ ಮಾಡಿ ಅಥವಾ ಹಾಜರಾಗಿ:

5. ನಿಮ್ಮ ನೆಟ್‌ವರ್ಕ್‌ನಲ್ಲಿರುವ ಮಹಿಳೆಯರೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಿ:

6. ನಿಮ್ಮ ಸಹೋದ್ಯೋಗಿಗಳು ಅಥವಾ ಸ್ನೇಹಿತರೊಂದಿಗೆ ಪುಸ್ತಕ ಕ್ಲಬ್ ಅನ್ನು ಪ್ರಾರಂಭಿಸಿ:

7. ಮಹಿಳಾ ಒಡೆತನದ ವ್ಯವಹಾರಗಳಿಗೆ ಬೆಂಬಲ ನೀಡಿ:

8. ಅತ್ಯುತ್ತಮ ಅನಿಸಿದ ಸಾಂಸಾರಿಕ ಪ್ರದರ್ಶನವನ್ನು ಆಯೋಜಿಸಿ:

9. ಮಹಿಳಾ ದತ್ತಿ ಸಂಸ್ಥೆಗಳಿಗೆ ದಾನ ಮಾಡಿ:

10. ನಿಮ್ಮ ಜೀವನದಲ್ಲಿನ ಅದ್ಭುತ ಮಹಿಳೆಯರನ್ನು ಗುರುತಿಸಿ, ಅವರ ಕಾರ್ಯವನ್ನು ಪ್ರಶಂಸಿಸಿ, ಪ್ರೋತ್ಸಾಹಿಸಿ:


ಸರ್ವ ಮಹಿಳೆಯರಿಗೂ ಮಹಿಳಾ ದಿನಾಚರಣೆಯ ಪ್ರಯುಕ್ತ ಹಾರ್ದಿಕ ಶುಭಾಶಯಗಳು

 ಹೇಮಂತ್ ಚಿನ್ನು

 ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group