ಸಿಂದಗಿ: ಗೋವು ಸಮೃದ್ಧಿಯ ಸಂಕೇತ. ಮನೆಗಳಲ್ಲಿ ಗೋವುಗಳು ಇರುವುದರಿಂದ ನೂರಾರು ರೋಗ ರುಜಿನಗಳು ದೂರವಾಗುತ್ತವೆ ಇದು ವೈಜ್ಞಾನಿಕವಾಗಿ ಸತ್ಯವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಅವರು ಪಟ್ಟಣದ ಸಂಗಮೇಶ್ವರ ದೇವಸ್ಥಾನದಲ್ಲಿ ಮಂಗಳವಾರ ತಾಲೂಕ ಆಡಳಿತ ಹಮ್ಮಿಕೊಂಡಿರುವ ಗೋ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೋವಿಗೆ ಆಹಾರವನ್ನು ಉಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗೋವು ಐಶ್ವರ್ಯ ಮತ್ತು ಮೋಕ್ಷದ ಪ್ರತೀಕವಾಗಿದೆ. ಗೋವಿನ ಪೂಜೆ ಅನಾದಿಕಾಲದಿಂದಲೂ ನಮ್ಮ ದೇಶದಲ್ಲಿ ಮಾಡುತ್ತಾ ಬಂದಿದ್ದಾರೆ. ಗೋಪೂಜೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಗೋವಿನ ದೇಹದಲ್ಲಿ ಅನೇಕ ದೇವತೆಗಳು ವಾಸ ಮಾಡಿರುತ್ತಾರೆ ಎಂಬ ಪ್ರತೀತಿ ಇದೆ. ನಮ್ಮ ಹಿರಿಯರು ಗೋವುಗಳನ್ನ ಸಾಕುವ ಮೂಲಕ ನಮಗೆಲ್ಲ ಒಂದು ಸಂಸ್ಕೃತಿಯನ್ನು ಕಲಿಸಿದ್ದಾರೆ ಆ ಪರಂಪರೆ ಮುಂದುವರೆಯಬೇಕು ಎಂದು ಹೇಳಿದರು.
ಈ ವೇಳೆ ತಹಶೀಲ್ದಾರ್ ಪ್ರದೀಪ್ ಕುಮಾರ್ ಹಿರೇಮಠ ಮಾತನಾಡಿದರು. ವೇದಿಕೆಯ ಮೇಲೆ ಪಶು ವೈದ್ಯಾಧಿಕಾರಿ ಡಾ. ಮಾರುತಿ ತಡಲಗಿ ಇದ್ದರು.
ಕಾರ್ಯಕ್ರಮದಲ್ಲಿ ಎಸ್ ಎಂ ಬಿರಾದಾರ್, ರಾಜಶೇಖರ್ ಹೆಬ್ಬಾಳ್ ಸೇರಿದಂತೆ ತಾಲೂಕ ಆಡಳಿತ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.