ವಿಜಯೀಭವ ಭಾರತ; ಆತಿಥೇಯ ಟೀಂ ಇಂಡಿಯಾಗೆ ಶುಭ ಕೋರಿದ ಶಾಸಕ ಬಾಲಚಂದ್ರ ಜಾರಕಿಹೊಳಿ

0
242

ಗೋಕಾಕ್– ಗುಜರಾತ್ ನ ಅಹ್ಮದಾಬಾದ್ ನಲ್ಲಿಂದು ನಡೆಯುವ ವಿಶ್ವಕಪ್ ಅಂತಿಮ‌ ಪಂದ್ಯದಲ್ಲಿ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂದು ಕ್ರಿಕೆಟ್ ಪ್ರೇಮಿಯೂ ಆಗಿರುವ ಶಾಸಕ, ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದಿನ ಭಾನುವಾರದ ಹೈ ವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದು, ಆಡಿರುವ ಎಲ್ಲ ೧೦ ಪಂದ್ಯಗಳನ್ನು ಗೆದ್ದು ಅಜೇಯ ವಾಗಿರುವ ನಮ್ಮ ಟೀಂ ಇಂಡಿಯಾ ೧೩ನೇ ಆವೃತ್ತಿಯ ವಿಶ್ವಕಪ್ ಟ್ರೋಫಿ ಮುಡಿಗೇರಿಸಲಿದೆ ಎಂದು ಅವರು ಹೇಳಿದ್ದಾರೆ.

ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಸೇರಿದಂತೆ ಎಲ್ಲದರಲ್ಲೂ ಅದ್ಭುತ ಯಶಸ್ಸನ್ನು ಗಳಿಸಿರುವ ಟೀಂ ಇಂಡಿಯಾ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಐತಿಹಾಸಿಕ ವಿಜಯ ಸಾಧಿಸಬೇಕೆಂಬುದು ಪ್ರತಿಯೊಬ್ಬ ಭಾರತೀಯನ ಕನಸಾಗಿದ್ದು, ಈ ಕನಸು ನನಸಾಗಲೆಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸೋಣ. ಆತಿಥೇಯ ಟೀಂ ಇಂಡಿಯಾ ಹೊಸ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಕೋಟ್ಯಾಂತರ ಭಾರತೀಯರ ಕನಸುಗಳನ್ನು ನನಸು ಮಾಡಲಿ. ಎಂದು ಟೀಂ ಇಂಡಿಯಾ ಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶುಭ ಕೋರಿದ್ದಾರೆ.

ಪಂದ್ಯ ನಡೆಯುವ ಸ್ಥಳ- ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್. ಗುಜರಾತ್.

ಪಂದ್ಯ ಆರಂಭ- ಮಧ್ಯಾಹ್ನ ೨.೦೦ ಗಂಟೆಗೆ

ನೇರ ಪ್ರಸಾರ- ಸ್ಟಾರ್ ಸ್ಪೋರ್ಟ್ಸ್, ಡಿಡಿ