ಸವದತ್ತಿ– ಸವದತ್ತಿ ತಾಲೂಕಿನ ಸುಕ್ಷೇತ್ರ ಯಲ್ಲಮ್ಮನ ದೇವಸ್ಥಾನ ವ್ಯಾಪ್ತಿಯಲ್ಲಿ ಬರುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಮನೆ ಮನೆ ಭೇಟಿ ಕಾಯ೯ಕ್ರಮ ವನ್ನು ಸವದತ್ತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ಹಾಗೂ ಮುಖ್ಯೋಪಾಧ್ಯಾಯ ಆರ್. ಎಫ್ ಮಾಗಿ, ಶಿಕ್ಷಣ ಸಂಯೋಜಕರಾದ ಗುರುನಾಥ ಕರಾಳೆ ಹಾಗೂ ಶಿಕ್ಷಕವೃಂದ, ಇತ್ತೀಚೆಗೆ ಶಾಲಾ ಅವಧಿಯ ನಂತರ ಆದಶ೯ ವಿದ್ಯಾಲಯ ಯಡ್ರಾವಿ ಹಾಗೂ ಸವದತ್ತಿ ಪಟ್ಟಣದ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಕಾರ್ಯ ಮಾಡಿದರು.
ಈ ಸಂದರ್ಭದಲ್ಲಿ ಮನೆಯಲ್ಲಿಯ ವಿದ್ಯಾರ್ಥಿಗಳ ಅಭ್ಯಾಸದ ವೇಳಾಪಟ್ಟಿ, ಅಭ್ಯಾಸದ ಕ್ರಮಗಳ ಬಗ್ಗೆ ಮ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ಮಾಗ೯ದಶ೯ನ ಮಾಡಿದರು. ಹಾಗೆಯೇ ಸವದತ್ತಿ ಯಲ್ಲಿರುವ ಬಾಲಕರ ವಿದ್ಯಾರ್ಥಿನಿಲಯಕ್ಕೂ ಭೇಟಿ ನೀಡಲಾಯಿತು. ಅನಗತ್ಯವಾಗಿ ಸಮಯ ವ್ಯರ್ಥ ಮಾಡದೆ ಶೃದ್ಧೆಯಿಂದ ಅಭ್ಯಾಸ ಮಾಡಿ ನಿಮಗೆ ಕ್ಲಿಷ್ಟ ಎನಿಸುವ ವಿಷಯವಾಗಿ ನಿಸ್ಸಂದೇಹವಾಗಿ ನಿಮ್ಮ ವಿಷಯದಲ್ಲಿ ಬೋಧನೆ ಮಾಡುವ ಶಿಕ್ಷಕರನ್ನು ಕೇಳಿ ವಿಷಯ ಮನವರಿಕೆ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.