Homeಸುದ್ದಿಗಳುನಿಮ್ಮ ಶಾಲೆಯ ವಾಹನ ಚಾಲಕರ ಪರಿಶೀಲನೆ ಆಗಿದೆಯಾ ನೋಡಿಕೊಳ್ಳಿ

ನಿಮ್ಮ ಶಾಲೆಯ ವಾಹನ ಚಾಲಕರ ಪರಿಶೀಲನೆ ಆಗಿದೆಯಾ ನೋಡಿಕೊಳ್ಳಿ

ಶಾಲಾ ವಾಹನಗಳ ಚಾಲಕರ ಪೊಲೀಸ್ ವೆರಿಫಿಕೇಶನ್ ಮಾಡಿಸಲು ಶಿಕ್ಷಣ ಇಲಾಖೆಯಿಂದ ಸೂಚನೆ

ಬೆಂಗಳೂರು – ಶಾಲಾ ವಾಹನಗಳಲ್ಲಿ ಕಾರ್ಯ ನಿರ್ವಹಿಸುವ ವಾಹನ ಚಾಲಕರ ನಡವಳಿಕೆ ಹಾಗೂ ಮಾನಸಿಕ ಸ್ಥಿತಿಯ ಬಗ್ಗೆ ಸಂಬಂಧಿಸಿದ  ಪೊಲೀಸ್ ಠಾಣೆಯಿಂದ ಪರಿಶೀಲನೆ ( ವೆರಿಫಿಕೇಶನ್ ) ಕಡ್ಡಾಯವಾಗಿ ಮಾಡಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆ ರಾಜ್ಯದ ಎಲ್ಲ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆ.

ದಿ. ೦೧.೦೧.೨೦೨೪ ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಶಿಕ್ಷಣ ಇಲಾಖೆಯ ಆಯುಕ್ತರು, ಕರ್ನಾಟಕ ಮೋಟಾರು ವಾಹನ ಕಾಯಿದೆ ೧೯೮೯ ಕ್ಕೆ ತಿದ್ದುಪಡಿ ತಂದು conditions for vehicles engaged in transport of school children rules 2012 ಖಾಸಗಿ ಒಪ್ಪಂದ ವಾಹನಗಳಲ್ಲಿ ಶಾಲಾ ಮಕ್ಕಳಿಗೆ ಸೂಕ್ತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅಧಿಸೂಚನೆ ಕ್ರಮ ಸಂಖ್ಯೆ ೪ ರಂತೆ ನಿಯಮಗಳನ್ನು ರೂಪಿಸಿದ್ದಾರೆ.

ಶಾಲಾ ಮಕ್ಕಳನ್ನು ಶಾಲೆಯಿಂದ ಮನೆಗೆ, ಮನೆಯಿಂದ ಶಾಲೆ ಕೊಂಡೊಯ್ಯುವ ವಾಹನ ಚಾಲಕರಿಂದ ಹಾಗೂ ಸಹಾಯಕರಿಂದ ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಗಾಗಿ ಬಸ್, ವ್ಯಾನ್, ಆಟೋರಿಕ್ಷಾ ಮತ್ತು ಇತರೆ ಶಾಲಾ ವಾಹನಗಳ ಚಾಲಕರ ಮಾನಸಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚಾಲಕರ ನಡವಳಿಕೆಯ ಬಗ್ಗೆ ಪೊಲೀಸರಿಂದ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆಯುವುದು ಮತ್ತು ಪ್ರತಿ ಎರಡು ವರ್ಷಗಳಿಗೊಮ್ಮೆ ನವೀಕರಿಸುವುದು, ಪ್ರಮಾಣಪತ್ರವನ್ನು ಶಾಲೆಯ SATS ತಂತ್ರಾಂಶದಲ್ಲಿ upload  ಮಾಡಬೇಕು, ಖಾಸಗಿ ಶಾಲಾ ವಾಹನಗಳಲ್ಲಿ ಸಹಾಯಕರನ್ನಾಗಿ ಮಹಿಳೆಯರನ್ನು ನೇಮಿಸಬೇಕು, ಪ್ರತಿಯೊಂದು ಖಾಸಗಿ ಶಾಲಾ ವಾಹನದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು, ಶಾಲಾ ವಾಹನದಲ್ಲಿ ನಿಗದಿತ ಸಂಖ್ಯೆಗಿಂತಲೂ ಹೆಚ್ಚಿನ ಮಕ್ಕಳನ್ನು ಕರೆದೊಯ್ಯುವುದನ್ನು ನಿರ್ಬಂಧಿಸಬೇಕು, ಶಾಲಾ ವಾಹನ ಚಾಲಕ ಹಾಗೂ ಸಹಾಯಕರು ಮಕ್ಕಳನ್ನು ಕರೆದೊಯ್ಯುವಾಗ ಮತ್ತು ಕಳಿಸುವಾಗ ಶಾಲಾ ಮುಖ್ಯಸ್ಥರ ಸಮ್ಮುಖದಲ್ಲಿ ಕಡ್ಡಾಯವಾಗಿ ರುಜು ಹಾಕಬೇಕು, ಸದರಿ ಮಾಹಿತಿಯನ್ನು ಪ್ರತಿವರ್ಷ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಿ ಅನುಮೋದನೆ ಪಡೆಯಬೇಕು ಎಂಬುದಾಗಿ ನಿಯಮಗಳನ್ನು ಸೂಚಿಸಲಾಗಿದೆ.

ಅಧಿಸೂಚನೆಯ ಕ್ರಮ ಸಂಖ್ಯೆ ೪ ನ್ನು ಈ ರೀತಿ ವ್ಯಾಖ್ಯಾನಿಸಲಾಗಿದೆ:

4. School cabs safety committee : In every school wherein school cab used as a means of transportation shall have a safety committee to look into matters pertaining to safe transportation of School children and transportation fee and identification of stops. The safety committee should comprise parents and transporters representatives alongwith the school staff. The committee shall verify the validity of documents of the vehicles viz. Registration certificate, certificate of fitness, certificate of insurance permit, Emission certificate, Driving licence,  Fire extinguisher, first aid kit, and ensure that all the safety measures have been adopted in the vehicle.

ಈ ಎಲ್ಲ ನಿಯಮಗಳನ್ನು ಖಾಸಗಿ ಶಾಲಾ ವಾಹನಗಳು ಪಾಲಿಸುತ್ತಿರುವ ಬಗ್ಗೆ ಪೊಲೀಸ್ ಇಲಾಖೆಯಿಂದ ಪ್ರಮಾಣ ಪತ್ರ ಪಡೆಯಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ರಾಜ್ಯದ ಎಲ್ಲಾ ಶಿಕ್ಷಣಾಧಿಕಾರಿಗಳಿಗೆ, ಜಿಲ್ಲಾ ಉಪ ನಿರ್ದೇಶಕರಿಗೆ,  ಅಪರ ಆಯುಕ್ತರು,  ಅಧಿಸೂಚನೆ ಹೊರಡಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group