ಜ.28ರಂದು ಈಶ್ವರೀಯ ವಿಶ್ವ ವಿದ್ಯಾಲಯದಿಂದ ‘ಸಮಯದ ಕರೆ-ಸಕಾರಾತ್ಮಕ ಬದಲಾವಣೆ’

Must Read

ಮೈಸೂರು: ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಜ.28ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಹುಣಸೂರು ರಸ್ತೆಯಲ್ಲಿರುವ ಲಿಂಗದೇವರುಕೊಪ್ಪಲಿನ ‘ಜ್ಞಾನ ಸರೋವರ ರಿಟ್ರೀಟ್ ಸೆಂಟರ್’ನಲ್ಲಿ ಆಡಳಿತಾಧಿಕಾರಿಗಳಿಗೆ ‘ಸಮಯದ ಕರೆ-ಸಕಾರಾತ್ಮಕ ಬದಲಾವಣೆ’ ಎಂಬ ವಿಷಯದ ಕುರಿತು ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ.

ಉದ್ಘಾಟನೆ ಮತ್ತು ಪ್ರಾಸ್ತಾವಿಕ ಭಾಷಣವನ್ನು ದೆಹಲಿಯ ಆಡಳಿತಾಧಿಕಾರಿಗಳ ವಿಭಾಗದ ಅಧ್ಯಕ್ಷೆ ರಾಜಯೋಗಿನಿ ಬಿಕೆ ಆಶಾಜಿಯವರು ಮಾಡಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಮೈಸೂರು ನೈರುತ್ಯ ರೈಲ್ವೆ ವಿಭಾಗೀಯ ರೈಲ್ವೆ ಪ್ರಬಂಧಕರಾದ ಶ್ರೀಮತಿ ಶಿಲ್ಪ ಅಗರವಾಲ್, ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಎಮ್.ಎಸ್.ಗೀತಾ, ಚಾಮರಾಜನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾ ದಂಡಾಧಿಕಾರಿಗಳಾದ ಶ್ರೀಮತಿ ಗೀತಾ ಹುಡೇದ ಆಗಮಿಸಲಿದ್ದು, ಈಶ್ವರೀಯ ವಿವಿ ಮೈಸೂರು ಉಪ ವಿಭಾಗದ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿಕೆ ಲಕ್ಷ್ಮೀಜಿ ಆಶೀರ್ವಚನ ನೀಡಲಿದ್ದಾರೆ. ರಾಜಯೋಗ ಧ್ಯಾನವನ್ನು ಈವಿವಿ ಭೂಪಾಲ್ ವಲಯದ ರಾಜಯೋಗಿನಿ ಬಿಕೆ ಅವಧೇಶ್‍ಜಿ ಮಾಡಿಸಲಿದ್ದಾರೆ. ಕಾರ್ಯಕ್ರಮ ಮತ್ತು ವಿಭಾಗದ ಬಗ್ಗೆ ಈವಿವಿ ಅಬು ಪರ್ವತದ ಆಡಳಿತಾಧಿಕಾರಿಗಳ ವಲಯದ ಮುಖ್ಯಾಲಯ ಸಂಚಾಲಕರಾದ ರಾಜಯೋಗಿ ಬಿಕೆ ಹರೀಶ್‍ಜಿ ತಿಳಿಸಿಕೊಡಲಿದ್ದಾರೆ ಎಂದು ಬಿಕೆ ಜಯಂತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಮೊಬೈಲ್ 9448368019 ಅಥವಾ 7975785643 ಸಂಪರ್ಕಿಸಬಹುದು.

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...

More Articles Like This

error: Content is protected !!
Join WhatsApp Group