- Advertisement -
ಮೈಸೂರು: ನಗರದ ಚಾಮುಂಡಿ ಬೆಟ್ಟದಲ್ಲಿ ಜ.25 ರಂದು ಶಾಸಕರ ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ ಅಯ್ಯಪ್ಪ ಸ್ವಾಮಿ ದೇವಾಲಯದ ಉದ್ಘಾಟನೆಯನ್ನು ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ಜಿ.ಟಿ.ದೇವೇಗೌಡರು ನೆರವೇರಿಸಿದರು.
ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ ದೀಕ್ಷಿತ್ ಅವರು ಜ್ಯೋತಿ ಬೆಳಗಿಸಿದರು. ಶ್ರೀಮತಿ ಲಲಿತ ಜಿ.ಟಿ.ದೇವೇಗೌಡರು ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಒದಗಿಸಿದರು.
ಈ ಸಂದರ್ಭ ಚಾಮುಂಡೇಶ್ವರಿ ದೇವಸ್ಥಾನದ ಸಂಘದ ಅಧ್ಯಕ್ಷ ಶ್ರೀಧರ ದೀಕ್ಷಿತ್, ನಾಯಕರ ಸಂಘದ ಅಧ್ಯಕ್ಷ ಆರ್.ಶಂಭುಲಿಂಗ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪದಾಧಿಕಾರಿ ಸುಬ್ರಹ್ಮಣ್ಯ ಸಿ., ವೆಂಕಟೇಶ್ ಸಿ. ಟಿ.ಟಿ.ಮಂಜುನಾಯಕ, ನಾಗೇಂದ್ರ, ಸ್ವಾಮಿ, ಆನಂದ್, ಜಯರಾಮ್,ಪಿ., ಶಂಕರ್ ಎಸ್., ಸಿದ್ದರಾಜು ಎಂ., ಪ್ರಕಾಶ್, ಸ್ವಾಮಿ ಹಾಗೂ ಚಾಮುಂಡಿ ಬೆಟ್ಟದ ಗ್ರಾಮಸ್ಥರು ಉಪಸ್ಥಿತರಿದ್ದರು.