ಮೈಸೂರು – ತಿ.ನರಸೀಪುರ ತಾಲ್ಲೂಕು, ಬನ್ನೂರು ಹೋಬಳಿಯಲ್ಲಿರುವ ಇತಿಹಾಸ ಪ್ರಸಿದ್ಧ ಕೊಡಗಹಳ್ಳಿ ಗ್ರಾಮದ ಶ್ರೀ ಕೋದಂಡ ರಾಮಮಂದಿರದಲ್ಲಿ ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.
ಪ್ರಧಾನ ಅರ್ಚಕರಾದ ಶ್ರೀನಿವಾಸ ದೀಕ್ಷಿತ್ ನೇತೃತ್ವದಲ್ಲಿ ಬೆಳಿಗ್ಗೆಯಿಂದಲೇ ದೇವರಿಗೆ ಅಭಿಷೇಕ, ಅಲಂಕಾರ, ಭಜನೆ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಪಟೇಲರಾದ ಕೆ.ಜೆ.ಚಿಕ್ಕಜವರಪ್ಪ, ಶ್ರೀಮತಿ ಸುಮಾ ಶ್ರೀನಿವಾಸ್, ಕುಮಾರಿ ಶ್ರೀಸಿರಿ, ಮುಖಂಡರಾದ ಕೆ.ಜೆ.ನಾಗರಾಜ್, ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಾಲಸುಬ್ರಹ್ಮಣ್ಯ, ವಿಂಧ್ಯಾ, ರಾಜೇಂದ್ರಪ್ರಸಾದ್, ಸುಬ್ಬಣ್ಣ, ಚೆನ್ನಪ್ಪ, ಹರೀಶ್, ಗಿರೀಶ್ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ರಾದಿಗಳು ದೇವತಾ ಕಾರ್ಯದಲ್ಲಿ ಭಾಗವಹಿಸಿ ಪುನೀತರಾದರು.