- Advertisement -
ಕಿಕ್ ಔಟ್ ಹನಿಗಳು
1.. ಬೀಡಿ ಸೇದಬೇಡಿ
ಎಂದಳು ಬಿಟ್ಟೆ
ಗುಟಕ ತಿಂದರೆ ಕ್ಯಾನ್ಸರ್
ಹೆದರಿಸಿದಳು ಬಿಟ್ಟೆ
ಹೆಂಡ ಕುಡಿಯಬೇಡಿರೆಂದು
ಬೇಡಿಕೊಂಡಳು
ಹೆಂಡ ಬಿಡಲಿಲ್ಲ
ಹೆಂಡತಿ ಬಿಟ್ಟೆ
—
2..ಹೆಂಡ ಕುಡಿದುಹೋದರೆ
ಹೆಂಡತಿ ಬಾಗಿಲು ತೆಗೆಯುವುದಿಲ್ಲ
ಅದಕ್ಕೆ
ನಾನು ರಾತ್ರಿ ಕುಡಿಯುವುದಿಲ್ಲ
ಹಗಲು ಹೇಳುವುದಿಲ್ಲ
- Advertisement -
3.. ನಮ್ಮೂರ
ಸಾಲ ಮಾಡುವ ಸಿದ್ದರಾಮ
ಸಾಲ ಕೊಡುವ ಕೋದಂಡರಾಮ
ಇಬ್ಬರೂ ಒಂದನ್ನಂತೂ
ಬಿಡುವುದಿಲ್ಲ
ಸಿದ್ದರಾಮ ಕುಡಿಯುವುದು ಬಿಡುವುದಿಲ್ಲ
ಕೋದಂಡರಾಮ ಬಡ್ಡಿ ಬಿಡುವುದಿಲ್ಲ
4.. ನಮ್ಮೂರಿನಲ್ಲಿ ಉದ್ದಾರವಾದವರು
ದಾಸಪ್ಪ ಆಂಡ್ ಸನ್ಸ್
ಹಾಳಾದವರು
ಕುಡಿತದ ದಾಸರು.
—
ಗೊರೂರು ಅನಂತರಾಜು
ಹಾಸನ
9449462879