spot_img
spot_img

ಮಂಕುತಿಮ್ಮನ ಕಗ್ಗ ಅರ್ಥಾನುಸಂಧಾನ

Must Read

- Advertisement -

ಸುಮಾರು ಎಪ್ಪತ್ತೈದು ವರ್ಷಗಳ ಹಿಂದೆ ಡಿವಿಜಿಯವರು ಬರೆದ 945 ಪದ್ಯಗಳ ಸಂಕಲನ ಮಂಕುತಿಮ್ಮನ ಕಗ್ಗ. ನಾಲ್ಕು ಸಾಲಿನಲ್ಲಿ, ವಿಶಿಷ್ಟವಾದ ಲಯದಲ್ಲಿ ಬರೆಯಲ್ಪಟ್ಟ ಈ ಕಗ್ಗಗಳು *ಕನ್ನಡದ ಭಗವದ್ಗೀತೆ* ಯೆಂದೇ ಕರೆಯಲ್ಪಟ್ಟಿವೆ.

ಯಾರು ಯಾವುದೇ ಸಂದರ್ಭದಲ್ಲಿ ಓದಿದರೂ ಅವರ ಮನಸ್ಸಿಗೆ ಸಮಾಧಾನವನ್ನು ಸಾಂತ್ವನವನ್ನು ನವಚೈತನ್ಯವನ್ನು ನೀಡಬಲ್ಲವು, ಈ ಕಗ್ಗಗಳು. ಅದಕ್ಕೆ ಕಾರಣ, ಇದರ ಕರ್ತೃ ಡಿವಿಜಿಯವರ ಋಷಿತುಲ್ಯ ಬದುಕು, ಅಗಾಧ ಲೋಕಾನುಭವ. ಹಾಗಾಗಿ ನಮ್ಮ ವ್ಯಕ್ತಿತ್ವ ವಿಕಾಸದಲ್ಲಿ ಕಗ್ಗ ನಿರ್ವಹಿಸುವ ಪಾತ್ರ ಬಹಳ ದೊಡ್ಡದು. ಅದರಲ್ಲೂ ವಿದ್ಯಾರ್ಥಿಗಳಿಗೆ ಈ ಕಗ್ಗಗಳ ಕಂಠಪಾಠ ಮಾಡಿಸಿದಲ್ಲಿ, ಅವರ ಬದುಕಿಗೆ ಭವಿಷ್ಯಕ್ಕೆ ಹೊಸ ಮೆರುಗು ಬರುವುದರಲ್ಲಿ ಸಂಶಯವಿಲ್ಲ.

- Advertisement -

ಕಗ್ಗಗಳನ್ನು ವಿವರಿಸುವ ಪುಸ್ತಕಗಳೂ ಸಾಕಷ್ಟಿವೆ. ಅವೆಲ್ಲವುಗಳಿಗೆ ಕಿರೀಟವಿಟ್ಟಂತೆ ಈ ಹೊಸ ಪುಸ್ತಕ ಬಂದಿದೆ. ಅಧ್ಯಾಪಕರಾಗಿ, ಸಾಹಿತಿಯಾಗಿ, ಅನುವಾದಕರಾಗಿ ಅಪಾರ ಅನುಭವ ಗಳಿಸಿರುವ ತೊಂಬತ್ತರ ಹರೆಯದ ನರಸಿಂಹಭಟ್ಟರು, ಡಿವಿಜಿಯವರ ಕಗ್ಗಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಮಾರ್ಗದರ್ಶಕರಾಗಿ ಬಂದಿದ್ದಾರೆ.

ಆಸಕ್ತರು ಈ ಪುಸ್ತಕವನ್ನು ಖರೀದಿಸಲು, ತಮ್ಮ ಪ್ರೀತಿಪಾತ್ರರಿಗೆ ಅದರಲ್ಲೂ ತಾವು ಇಷ್ಟಪಡುವ ಮಕ್ಕಳಿಗೆ ಉಡುಗೊರೆಯಾಗಿ ನೀಡಲು WhatsApp ಮಾಡಿ : 7483681708

- Advertisement -
- Advertisement -

Latest News

ಜಾತ್ರೆಗಳು ಜಾನಪದ ಕಲೆ, ಸಂಪ್ರದಾಯ, ಆಚರಣೆಗಳ ತೊಟ್ಟಿಲು

ಮೂಡಲಗಿ: ‘ಜನಪದರು ಸೇರಿ ದೈವೀಆರಾಧನೆಯೊಂದಿಗೆ ಜಾತಿ, ಧರ್ಮ, ಮೇಲು, ಕೀಳು ಭೇದ ಬಿಟ್ಟು ಸಾಮರಸ್ಯವನ್ನು ಬೆಳೆಸುವುದೇ ಜಾತ್ರೆಗಳಾಗಿವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ತಾಲ್ಲೂಕಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group