- Advertisement -
ಕರ್ನಾಟಕ ಸರ್ವೋದಯ ಮಂಡಲ ಪ್ರಸ್ತುತ ರಾಜ್ಯದ ಬೆಂಗಳೂರು ನಗರ ಹಾಗೂ ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ತುಮಕೂರು, ಹಾಸನ,ಚಿತ್ರದುರ್ಗ, ಕೋಲಾರ, ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದು ಯುವಜನರಲ್ಲಿ ಸರ್ವೋದಯ – ಗಾಂಧೀ ಮೌಲ್ಯಗಳ ಪ್ರಚಾರ ಮಾಡುವ ಉದ್ದೇಶದಿಂದ ನಾಲ್ಕು ಜಿಲ್ಲೆ ಗಳಲ್ಲಿ ಅಧ್ಯಕ್ಷರ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ.
ಧಾರವಾಡ ಡಾ. ಚಿದಾನಂದ ಪಿ. ಮನ್ಸೂರ, ಉಡುಪಿ ಡಾ. ಗಣನಾಥ ಎಕ್ಕಾರು, ದಕ್ಷಿಣ ಕನ್ನಡ ಯಶವಂತ ಕೊಡಿಯಾಲ್ ಬೈಲ್, ಚಿಕ್ಕಬಳ್ಳಾಪುರ ಎನ್. ಪದ್ಮ .ಈ ನೇಮಕಗಳು ಆಯಾ ಜಿಲ್ಲಾ ಮಂಡಲಗಳು ಅಧ್ಯಕ್ಷರನ್ನು ವಿಧ್ಯುಕ್ತ ಆಯ್ಕೆ ಮಾಡಿಕೊಳ್ಳುವವರೆಗೆ ಜಾರಿಯಲ್ಲಿ ಇರುತ್ತವೆ ಎಂದು ರಾಜ್ಯ ಸರ್ವೋದಯ ಮಂಡಲ ದ ಕಾರ್ಯದರ್ಶಿ ಡಾ. ಯ.ಚಿ. ದೊಡ್ಡಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.