ಅಕ್ಷರ ತಾಯಿ ಲೂಸಿ ಸಾಲ್ಡಾನ್ ಅವರ 105 ನೇ ದತ್ತಿ ನಿಧಿ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ

Must Read

ಯರಗಟ್ಟಿ: ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನರವರ 105 ನೇ ದತ್ತಿ ಕಾರ್ಯಕ್ರಮವನ್ನು ಸಮೀಪದ ಸೊಪ್ಪಡ್ಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.

ಈ ಕಾರ್ಯವನ್ನು ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ  ಸಮಾರಂಭದಲ್ಲಿ ಜರುಗಿಸಲಾಯಿತು.

ಈ ವೇಳೆ ಪೂಜ್ಯ ರೇವಣ ಸಿದ್ದೇಶ್ವರ ಸ್ವಾಮೀಜಿ, ಅಜೀತಕುಮಾರ ದೇಸಾಯಿ, ಎಸ್ ಡಿಎಂಸಿ ಅಧ್ಯಕ್ಷರಾದ ಶ್ರೀಮತಿ  ದ್ರಾಕ್ಷಾಯಿಣಿ ಮಹಾಲ್ಮನಿ, ಎಸ್ ಡಿಎಂಸಿ ಉಪಾಧ್ಯಕ್ಷ ಸಂಜಯ ಕರೆನ್ನವರ, ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಸತ್ಯೆವ್ವ ಗೊರಗುದ್ದಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ. ಎನ್ ಬ್ಯಾಳಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ವಸಂತ ಬಡಿಗೇರ, ನಲಿಕಲಿ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ಮನೋಹರ ಚೀಲದ, ಆಶಾ ಫರೀಟ,ಅಕ್ಷರ ತಾಯಿ ದತ್ತಿದಾನಿ ಲೂಸಿ ಸಾಲ್ಡಾನ್, ಅಪ್ನಾದೇಶ ಫೌಂಡೇಶನ್ ಧಾರವಾಡದ ಅಧ್ಯಕ್ಷರಾದ ವಾಯ್. ಬಿ. ಕಡಕೋಳ, ಕಾರ್ಯಾಧ್ಯಕ್ಷರಾದ ಎಲ್. ಐ. ಲಕ್ಕಮ್ಮನವರ, ಆಯ್. ಬಿ. ಗೌಡರ, ಈಶ್ವರ ಕಲಗೌಡ್ರ, ಎನ್. ಎಂ. ಪಾಟೀಲ, ವಿಲ್ಸನ್ ಸೊಪ್ಪಡ್ಲ, ಗ್ರಾ. ಪಂ. ಸದಸ್ಯ ರವಿಕಿರಣ ಪಾಟೀಲ, ಎಂ. ಬಿ. ಚಿಲಕಂಡಿ, ಮುಖ್ಯ ಶಿಕ್ಷಕರಾದ ಶಿವಾನಂದ ಮಿಕಲಿ ಸೇರಿದಂತೆ ಅನೇಕ ಇದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಎಲ್. ಐ. ಲಕ್ಕಮ್ನವರ ಮಾತನಾಡಿ, ಸಾಲ್ಡಾನಾ  ಗುರು ಮಾತೆ ಅವರ ಗಂಡನ ಮನೆ ಸೊಪ್ಪಡ್ಲ. ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿ ರೈಲು ನಿಲ್ದಾಣದಲ್ಲಿ ನೀರು ಕುಡಿಯಲು ಬಂದ ಸಂದರ್ಭದಲ್ಲಿ ಕಳೆದು ಕೊಂಡು ಸೊಪ್ಪಡ್ಲ ಗ್ರಾಮದ ಮಡಿವಾಳರ ಅವರ ಆಶ್ರಯದಲ್ಲಿ ಬೆಳೆದು ಕಿರು ವಯಸ್ಸಿನಲ್ಲಿ ಗಂಡನ ನಿಧನ. ನಂತರ ಓದು ನೌಕರಿ ಎಂದೆಲ್ಲ ಜೀವನ ಸವೆಸಿದ ಲೂಸಿ ಸಾಲ್ಡಾನ್ ಗುರು ಮಾತೆ ಬದುಕು ವೈ. ಬಿ. ಕಡಕೋಳ ಅವರ ಕಥೆಯಾಧಾರಿತ ನಾನು ಲೂಸಿ ಕಿರುಚಿತ್ರ ಇತ್ತೀಚೆಗೆ ಬಿಡುಗಡೆ ಕಂಡಿದೆ. ಅವರ ದತ್ತಿ ಕುರಿತು ಸಮಗ್ರವಾಗಿ ತಿಳಿಸುತ್ತಾ ಲಕ್ಕಮ್ಮನವರ ಗುರುಗಳು ಕಲಿಯುಗದ ದತ್ತಿ ದಾನಿ ಸಾಲ್ಡಾನ್ ಎಂದು ಲೂಸಿ ಸಾಲ್ಡಾನ್ ಗುರು ಮಾತೆ ಅವರ ಜೀವನ ಕುರಿತು ವಿವರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನಲವತ್ತೈದು ಸಾವಿರ ರೂಪಾಯಿ ಚೆಕ್ ನ್ನು ಲೂಸಿ ಸಾಲ್ಡಾನ್ ವಿತರಿಸಿದರು. 

ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಶಾಲಾ ವಾರ್ಷಿಕ ವರದಿ ವಾಚನ ಜರುಗಿತು. ಶಾಲೆಗೆ ವಿವಿಧ ರೂಪದಲ್ಲಿ ಸಹಾಯ ಸಹಕಾರ ನೀಡಿದ ಮಹನೀಯರ ಸ್ಮರಣೆ ಕೂಡ ಜರುಗಿತು. ಮಕ್ಕಳು ಕಾರ್ಯ ಕ್ರಮ ನಿರ್ವಹಣೆ ಮಾಡಿದ್ದು ವಿಶೇಷವಾಗಿತ್ತು. 

ಶಿವಾನಂದ ಮಿಕಲಿ ಸ್ವಾಗತಿಸಿದರು. ದಿಲಾವರ್ ನಾಯ್ಕ ವಾರ್ಷಿಕ ವರದಿ ವಾಚನ ಮಾಡುವ ಜೊತೆಗೆ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು

Latest News

ಕಲಬುರಗಿ ವಿಮಾನ ನಿಲ್ದಾಣ ಸ್ತಬ್ಧ: ರಾಜ್ಯ ಸರಕಾರದ ಮೌನದಿಂದ ಅಭಿವೃದ್ಧಿಗೆ ಹಿನ್ನಡೆ

371 ಜೆ ವ್ಯಾಪ್ತಿಯ ವಿಮಾನ ನಿಲ್ದಾಣಕ್ಕೆ ಗ್ರಹಣ: ಜನಪ್ರತಿನಿಧಿಗಳ ಮೌನಕ್ಕೆ ಆಕ್ಷೇಪಇತ್ತೀಚೆಗಷ್ಟೇ ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಸಂಕಲ್ಪ...

More Articles Like This

error: Content is protected !!
Join WhatsApp Group