spot_img
spot_img

ಶಿಕ್ಷಕ ಸಾಹಿತಿ ವೈ ಬಿ ಕಡಕೋಳ ರಿಗೆ ಮೌಲ್ಯ ಸಾಹಿತ್ಯ ಸಂಪದ ಪ್ರಶಸ್ತಿ 2024 ಪ್ರದಾನ

Must Read

- Advertisement -

ರಾಮದುರ್ಗ: ಇಂದಿನ ದಿನಗಳಲ್ಲಿನ ವೈಜ್ಞಾನಿಕ ಬೆಳವಣಿಗೆಯ ವೇಗವನ್ನು ಗಮನಿಸಿದಾಗ ಇಡೀ ಜಗತ್ತನ್ನು ಅಂಗೈಯಲ್ಲಿ ಹಿಡಿದಂತಾಗಿದೆ. ಆದರೆ ಒಬ್ಬ ಬಡವ ನಮ್ಮಿಂದ ದೂರವಾಗಿದ್ದಾನೆ. ಡಿಜಿಟಲ್ ಯುಗದಲ್ಲಿ ನಮಗೆ ಬಹಳಷ್ಟು ಅನುಕೂಲ ಆದರೂ.. ದುಷ್ಪರಿಣಾಮವೂ ದೊಡ್ಡ ಪ್ರಮಾಣದಲ್ಲಿದೆ. ಮಾನವೀಯ ಮೌಲ್ಯಗಳು ಮಸುಕಾಗಿ.. ನಶಿಸಿ ಹೋಗುತ್ತಿವೆ. ಮೌಲ್ಯಯುಕ್ತ ಸಂಬಂಧಗಳಿಗೆ ಪೆಟ್ಟು ಬಿದ್ದಿರುವುದರಲ್ಲಿ ಸಂದೇಹ ಇಲ್ಲ. ಇಂಥ ಸಂದರ್ಭದಲ್ಲಿ ಮೌಲ್ಯ ಸಂಬಂಧ ಉಳಿಸಿ ಬೆಳೆಸಿ ಸಿಂಚನಗೊಳಿಸುವ ನಿಟ್ಟಿನ ರಹದಾರಿಯಲ್ಲಿ ದಾಪುಗಾಲಿಟ್ಟಿರುವ ‘ಮೌಲ್ಯಸಂಪದ ಸೇವಾ ಸಂಸ್ಥೆ ಮತ್ತು ಪತ್ರಿಕಾ ಬಳಗದ’ ಕಾರ್ಯ ಮಾದರಿ ಆಗಿದೆ. ಅದು ಪ್ರಸ್ತುತ ಸಂದರ್ಭದ ಅಗತ್ಯ ಕಾರ್ಯ ಎಂದು ಆಳಂದ ತಾಲೂಕಿನ ಖಜೂರಿಯ ಜಗದ್ಗುರು ಶ್ರೀ ಕೋರಣೇಶ್ವರ ಮಠದ ಶ್ರೀ ಮ. ನಿ. ಪ್ರ. ಮುರುಘರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಾದ ನುಡಿಗಳಲ್ಲಿ ಮಾತನಾಡಿದರು.

ಅವರು ರಾಮದುರ್ಗದ ತುರನೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ತಪೋಭೂಮಿ ದೇವಸ್ಥಾನದ ಆವರಣದಲ್ಲಿ ರವಿವಾರ ನಡೆದ ಮೌಲ್ಯಸಂಪದ ೧೯ ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡ ರಾಷ್ಟ್ರೀಯ ಸಾಧಕರ ಮಹಾಸಂಗಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸವದತ್ತಿ ತಾಲೂಕಿನ ಮುನವಳ್ಳಿ ಯ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಸೇರಿದಂತೆ ಮೂರು ಜನರಿಗೆ ಮೌಲ್ಯ ಸಾಹಿತ್ಯ ಸಂಪದ ಪ್ರಶಸ್ತಿ 2024 ಪ್ರದಾನ ಮಾಡಲಾಯಿತು.

- Advertisement -

ಕಾರ್ಯ ಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ  ರಾಮದುರ್ಗ ಶಾಸಕರು ಹಾಗೂ ಕರ್ನಾಟಕ ಸರ್ಕಾರದ ವಿಧಾನ ಸಭೆಯ ಮುಖ್ಯ ಸಚೇತಕರಾದ ಅಶೋಕ ಪಟ್ಟಣ  ಮಾತನಾಡುತ್ತ, ‘ಬಹಳ ವರ್ಷಗಳಿಂದ ಮೌಲ್ಯಸಂಪದ ಕಾರ್ಯಕ್ರಮ ಸಮಾಜಮುಖಿಯಾಗಿ ನಡೆದಿದೆ. ಈ ರೀತಿಯ ಕಾರ್ಯ ನಡೆಸುವವರ ಇಚ್ಛಾಶಕ್ತಿಗೆ ದೇವರು ಇನ್ನಷ್ಟು ಶಕ್ತಿ ತುಂಬಲಿ ಎಂದು ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮೌಲ್ಯಸಂಪದ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಶೈಲಾ ಎಸ್. ಸೊಗಲದ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಮದುರ್ಗದ ಅಪಾರ್ಚುನಿಟಿ ಕ್ರಿಯೇಷನ್ಸ ಸಂಘಟನೆಯ ಮುಖ್ಯಸ್ಥರು ಶ್ರೀಮತಿ ಶ್ರೀದೇವಿ ಮಾದನ್ನವರ, ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯಾಧ್ಯಕ್ಷೆ ಶ್ರೀಮತಿ ರಜನಿ ಅಶೋಕ ಜೀರಗ್ಯಾಳ, ಸಾಲಹಳ್ಳಿಯ ಸಾಹಿತಿಗಳು ಆರ್. ಎಸ್. ಪಾಟೀಲ, ಹಲಗತ್ತಿಯ ಹಿರಿಯ ಸಾಹಿತಿ ವೆಂಕಟೇಶ ಹುಣಸಿಕಟ್ಟಿ, ಬೆಳಗಾವಿ ವಿಭಾಗದ ರೇಷ್ಮೆ ಜಂಟಿ ನಿರ್ದೇಶಕರು ಎಸ್. ಎಮ್. ಕೋರೆ, ಬೆಂಗಳೂರಿನ ಹಿರಿಯ ಪತ್ರಿಕಾ ಸಂಪಾದಕ ಬಿ. ಎಸ್. ಅಲಗುಸುಂದರಂ, ಇಲಕಲ್ಲ  ವಿಜಯ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ. ಕೆ. ಗವಿಮಠ, ಮುಂಡಗೋಡ ಅರಣ್ಯ ಇಲಾಖೆಯ  ಅಧಿಕಾರಿಗಳು ಎ. ಎನ್. ಹಪ್ಪಳದ, ತೋರಣಗಟ್ಟಿಯ ಗಣ್ಯ ರೈತರು ಎಸ್. ಎಸ್. ಮುದೇನೂರ, ಸಾಲಹಳ್ಳಿಯ ಸಮಾಜ ಸೇವಕರು ತಿಪ್ಪಣ್ಣ ಮುರುಗೋಡ, ಧಾರವಾಡದ ಗಡದ ಟಿಟೋರಿಯಲ್ ಸಂಸ್ಥೆಯ ಬಸವರಾಜ ಗಡದ, ಧಾರವಾಡದ ಜನಮುಖಿ ಸೇವಾ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಬಸಂತಿ ಅ. ಹಪ್ಪಳದ, ತುರನೂರ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಲೋಕಣ್ಣ ಮಾಳಿ, ರಾಮದುರ್ಗದ ಸಿ. ಎಸ್. ಬಿ. ಕಾಲೇಜಿನ ಪ್ರಾಚಾರ್ಯ ಎಸ್. ಎಮ್. ಸಕ್ರಿ, ಪತಂಜಲಿ ಯೋಗ ಪ್ರತಿಷ್ಠಾನದ ಅಧ್ಯಕ್ಷ ಡಾ. ಬಿ. ಎಲ್. ಸಂಕನಗೌಡ್ರ, ರಾಮದುರ್ಗದ ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರು ಎಚ್. ಆರ್. ಪಾಟೀಲ, ರಾಮದುರ್ಗದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಹಿರಿಯ ವೈದ್ಯರು ಡಾ. ಕೆ. ವಿ. ಪಾಟೀಲ, ಯರಗಟ್ಟಿಯ ವಿಶ್ರಾಂತ ದೈಹಿಕ ನಿರ್ದೇಶಕರು ಮಲ್ಲಿಕಾರ್ಜುನ ಮುನ್ನೋಳ್ಳಿ. ಅಥಣಿಯ ವಿಕಲಚೇತನ ಜ್ಞಾನ ಪ್ರತಿಭೆ ಬಸವರಾಜ ಉಮರಾಣಿ, ನಿಪ್ಪಾಣಿಯ ವಿಶ್ರಾಂತ ಪ್ರಾಧ್ಯಾಪಕ ಜೆ. ಬಿ. ಜನವಾಡೆ, ರೋಣದ ವಿಶ್ರಾಂತ ಶಿಕ್ಷಕ ಬಸಲಿಂಗಪ್ಪ ಮ. ಹೆರಕಲ್ಲ, ರನ್ನ ಬೆಳಗಲಿಯ ಖ್ಯಾತ ಕಲಾವಿದ ಶಿಕ್ಷಕ ಬಾಲಕೃಷ್ಣ ಚೋಪಡೆ ಹಾಗೂ ಸದಲಗಾದ ಗಡಿನಾಡ ಕನ್ನಡ ಸೇವಾ ಸಮಿತಿಯ ಸದಸ್ಯ ಚಿದಾನಂದ ಸರವಡೆ  ನರೇಂದ್ರ ಮೋದಿಯವರ ಹಾಗೆ ಕಾಣುವ ಬಾಗಲಕೋಟೆಯ ಬಿ. ವ್ಹಿ ಕುಲಕರ್ಣಿ  ಮೊದಲಾದವರು ವೇದಿಕೆಯ ಮೇಲಿದ್ದರು. ನಾಡಿನಲ್ಲಿ ಸಾಮಾಜಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ನೀಡಿದ ಸಾಧಕ ಸೇವಕರಾಗಿದ್ದ ೪೧ ಜನ ವ್ಯಕ್ತಿಶಕ್ತಿಗಳಿಗೆ  ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ  ಮೌಲ್ಯಸಂಪದ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಪೋಲೀಸ ಇಲಾಖೆಯಲ್ಲಿದ್ದ ಬಿಜಗುಪ್ಪಿ ಗ್ರಾಮದ ರೈತಕವಿ ವಿಜಯ ಡಿ. ಸಕ್ರಿ ಇವರ ಕವನ ಸಂಕಲನ “ಭಾವಗಳ ಚಿತ್ತಾರ” ಕೃತಿಯನ್ನು ಸಮಾರಂಭದ ಭವ್ಯ ವೇದಿಕೆಯ ಮೇಲೆ ಶ್ರೀಗಳು ಗಣ್ಯರು ಲೋಕಾರ್ಪಣಗೊಳಿಸಿದರು.

- Advertisement -

ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನೂ ನಡೆಸಲಾಯಿತು. ಮೌಲ್ಯಸಂಪದ ಪತ್ರಿಕೆಯ ಪ್ರ. ಸಂಪಾದಕ ಸೋಮಶೇಖರ ವೀ. ಸೊಗಲದ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಪತ್ರಿಕೆಯ ಉಪ ಸಂಪಾದಕ ಬಿ. ಬಿ. ಹಾಜಿ ಪ್ರಾಸ್ತಾವಿಕ ಮಾತನಾಡಿದರು. ಸಂಗೀತ ಶಿಕ್ಷಕ ಪಿ. ಎಮ್. ಹೂಗಾರ  ಸ್ವಾಗತಿಸಿದರು. ಬೋರಗಾಂವದ ಶಿಕ್ಷಕ ಬಾಹುಬಲಿ ನರವಡೆ ವಂದಿಸಿದರು.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group