ನಟ ಕೆ.ಶಿವರಾಂ ನಿಧನಕ್ಕೆ ಆದಿಕರ್ನಾಟಕ ಮಹಾಸಂಸ್ಥೆ ಸಂತಾಪ

0
324

ಮೈಸೂರಿನ ಆದಿಕರ್ನಾಟಕ ಮಹಾಸಂಸ್ಥೆ ಹಾಗೂ ಅಶೋಕಪುರಂ ಜನತೆ ಖ್ಯಾತ ನಟ ಹಾಗೂ ಮೊದಲ ಕನ್ನಡ ಭಾಷೆಯಲ್ಲಿ ತೇಗರ್ಡೆ ಹೊಂದಿದ ನಿಷ್ಠಾವಂತ ಐ.ಎ.ಎಸ್ ಅಧಿಕಾರಿ ಎನಿಸಿಕೊಂಡಿದ್ದ ಕೆ.ಶಿವರಾಂ ರವರ ನಿಧನ ನಾಡಿನ ಜನತೆಗೆ ಹಾಗೂ ಚಲನಚಿತ್ರ ರಂಗಕ್ಕೆ ತುಂಬಲಾರದ ನಷ್ಟ ಎಂದು ಅಶೋಕಪುರಂ ಆದಿಕರ್ನಾಟಕ ಮಹಾಸಂಸ್ಥೆಯ ಅಧ್ಯಕ್ಷರಾದ ಸಿದ್ದರಾಜು ಪಿ (ಸುನಿಲ್) ಸಂತಾಪ ವ್ಯಕ್ತಪಡಿಸಿದ್ದಾರೆ.

ಅಶೋಕಪುರಂನಲ್ಲಿ ಇಂದು ಶ್ರದ್ಧಾಂಜಲಿ ಸಭೆ ನಡೆಸಿ ಮೃತರ ಆತ್ಮಕ್ಕೆ 2 ನಿಮಿಷಗಳ ಕಾಲ ಶಾಂತಿ ಕೋರಿ ದಲಿತರು, ಪೌರಕಾರ್ಮಿಕರು ಮತ್ತು ಹಿಂದುಳಿದ ವರ್ಗದವರಿಗೆ ಶಕ್ತಿಮೀರಿ ಸರ್ಕಾರದ ಸೌಲಭ್ಯಗಳನ್ನು ಒದಗಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದ ಧೀಮಂತ ದಕ್ಷ ಅಧಿಕಾರಿ ಕೆ.ಶಿವರಾಂ ಎಂದು ತಿಳಿಸಿ ಚಲನಚಿತ್ರ ರಂಗದಲ್ಲಿಯೂ ಸಹ ಬಹುಭಾಗ ಮೈಸೂರಿನಲ್ಲಿಯೇ ಚಿತ್ರೀಕರಣಗಳನ್ನು ತೆಗೆದು ಎಲ್ಲರಿಗೂ ಮನರಂಜನೆ ಹಾಗೂ ವಿಚಾರಗಳನ್ನು ತಿಳಿಸುತ್ತಿದ್ದ ಶಿವರಾಂ ರವರು ನಿಧನ ಹೊಂದಿರುವುದು ತುಂಬಲಾರದ ನಷ್ಟ ಎಂದು ತಿಳಿಸಿದರು. 

ಉಪಾಧ್ಯಕ್ಷರಾದ ಶಿವಸ್ವಾಮಿ ರವರು ಮಾತನಾಡಿ ಐ.ಎ.ಎಸ್ ಅಧಿಕಾರಿಯಾಗಿರುವುದು ಕನ್ನಡ ಮಾಧ್ಯಮದಲ್ಲಿ ಓದಿ ಎಂಬುದನ್ನು ಇಡೀ ರಾಜ್ಯಕ್ಕೆ ತೋರಿಸಿದ ಮೊಟ್ಟಮೊದಲ ಕನ್ನಡ ಐ.ಎ.ಎಸ್ ಅಧಿಕಾರಿ ಎಂದು ತಿಳಿಸಿ ಸದಾಕಾಲ ದಲಿತಮಕ್ಕಳು ಬಡವರ ಮಕ್ಕಳು ಶಿಕ್ಷಣ ಪಡೆಯಬೇಕೆಂದು ಚಿಂತಿಸುತ್ತಿದ್ದರು ಎಂದರು. 

ಸಭೆಯಲ್ಲಿ ಕಾರ್ಯದರ್ಶಿ ರಾಜ್‍ಮೊಗ, ಸಹಕಾರ್ಯದರ್ಶಿ ಜಯಕುಮಾರ್, ಖಜಾಂಚಿ ಕೃಷ್ಣಮೂರ್ತಿ, ಸಲಹೆಗಾರರಾದ ಮಹಾಲಿಂಗಯ್ಯ ಹಾಗೂ ಅಶೋಕಪುರಂ ಜನತೆ ಉಪಸ್ಥಿತರಿದ್ದರು.