- Advertisement -
ಬಂದೇವ ನಾವು ಬಂದೇವ
ಮಕ್ಕಳ ಮೇಳಕ್ಕೆ ಬಂದೇವ
ನಲಿದೇವ ನಾವು ನಲಿದೇವ
- Advertisement -
ಜನಪದ ಮೇಳದಲಿ ನಲಿದೇವ ||
ತಂದೇವ ನಾವು ತಂದೇವ
ಶುದ್ಧ ಮನವನು ತಂದೇವ
- Advertisement -
ಜೀವನ ಶಿಕ್ಷಣ ಪಡೆದೇವ
ಸ್ಕೌಟ್ ಮೇಳದಲ್ಲಿ ಮಿಂದೇವ ||
ಇದು ಸ್ಕೌಟ್ ಗೈಡ್ ಶಿಬಿರ ಅಣ್ಣ
ಮಕ್ಕಳ ಮೇಳ ನಮಗಾಗಿ ಅಣ್ಣ
ನಾವೆಲ್ಲ ಒಟ್ಟಾಗಿ ಸೇರಿದೆವಣ್ಣ
ಇಲ್ಲಿ ಕಲಿಯಲು ತೊಡಗಿದೆವಣ್ಣ ||
ಸರಳ ಯೋಗಾಸನ, ಆಟಗಳುಂಟು
ಪ್ರಥಮಚಿಕಿತ್ಸೆ, ಮೌಲ್ಯಗಳುಂಟು
ವನವಿದ್ಯೆ, ಮರಕೋತಿ ಆಟವುಂಟು
ನಲಿಯುತ ಹಾಡುವ ಗೀತೆಗಳುಂಟು ||
ರಂಗೋಲಿ, ಅಡುಗೆ ತಯಾರಿ ಸ್ಪರ್ಧೆ
ರಸಪ್ರಶ್ನೆ, ನಾನಾ ಬಗೆಯ ಸ್ಪರ್ಧೆ
ಶಿಬಿರಾಗ್ನಿ ಜೊತೆಗೆ ಹಾಡು ಕುಣಿತ
ಎಲ್ಲರ ಮನ ತಣಿಸುವ ಸೆಳೆತ
ಸ್ಕೌಟ್ ಗೈಡ್ ಗುರುಗಳು ಬರುವರಿಲ್ಲಿ
ತರತರದ ವಿಷಯವ ಕಲಿಸುವರಿಲ್ಲಿ
ಪೋಷಕರೇ ಶುಭ ಹಾರೈಸ ಬನ್ನಿ
ಚಿಣ್ಣರೆಲ್ಲರೂ ನಮಿಸೋಣ ಬನ್ನಿ ||
ರಚನೆ:
ಸಂತೋಷ್ ಬಿ ಪಿ, ಸ್ಕೌಟ್ ಮಾಸ್ಟರ್
ಸ್ವಾಮಿ ವಿವೇಕಾನಂದ ಸ್ಕೌಟ್ಸ್ ದಳ
ಸ.ಹಿ.ಪ್ರಾ.ಶಾಲೆ ಕಿರವಾಡಿ ತಾ:ಹಾನಗಲ್ಲ ಜಿ:ಹಾವೇರಿ