ಬೆಂಗಳೂರು : ನಮ್ಮ ಸಂಘದ ಹೋರಾಟದ ಫಲವಾಗಿ ರಾಜ್ಯದ ಪತ್ರಕರ್ತರಿಗೆ ಸರ್ಕಾರ ಬಸ್ ಪಾಸ್ ನೀಡಿದೆ ಎಂದು ಕೆಲವರು ಹೇಳಿಕೊಂಡಿದ್ದಾರೆ ಯಾವತ್ತಾದರೂ ಪತ್ರಕರ್ತರ ಪರವಾದ ಹೋರಾಟವಾಗಲಿ ಧ್ವನಿಯಾಗಲಿ ಎತ್ತಿದ್ದಾರಾ ಎಂದು ಕಾ.ನಿ.ಪ.ದ್ವನಿ ಸಂಘಟನೆ ರಾಜ್ಯಾದ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಕಾ.ನಿ.ಪತ್ರಕರ್ತರ ದ್ವನಿ ಸಂಘಟನೆ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಕಾ.ನಿ.ಪ.ದ್ವನಿ ಉದಯವಾದ ಕೆಲವೇ ದಿನಗಳಲ್ಲಿ ಪತ್ರಕರ್ತರ ನಾನಾ ಬೇಡಿಕೆ ಮುಂದಿಟ್ಟು ಸಾವಿರಾರು ಪತ್ರಕರ್ತರ ಜೊತೆಗೂಡಿ ಹತ್ತು ಹಲವು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಮೊದಲ ಭಾಗವಾಗಿ ಸಾವಿರಾರು ಪತ್ರಕರ್ತರ ಜೊತೆಗೂಡಿ ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಪ್ರತಿಭಟನೆ ಮಾಡಲಾಗಿತ್ತು ಪ್ರತಿಭಟನೆ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳ ಸಲಹೆಗಾರರಾದ ಪ್ರಭಾಕರ್ ಮನವಿ ಪತ್ರ ಸ್ವೀಕರಿಸಿದ್ದರು ಅದೇರೀತಿ ಬೆಳಗಾಂ ಅಧಿವೇಶನ ಸಂದರ್ಭದಲ್ಲಿ ಸುವರ್ಣ ಸೌಧದ ಮುಂದೆ ಪ್ರತಿಭಟನೆ ಮಾಡಲಾಗಿತ್ತು ಆ ಸಂದರ್ಭದಲ್ಲಿ ರಾಜ್ಯದ ಪ್ರಭಾವಿ ಸಚಿವ ಕೆ.ಹೆಚ್.ಮುನಿಯಪ್ಪ ನಮ್ಮಮನವಿ ಸ್ವೀಕರಿಸಿದ್ದರು ನಿಮ್ಮ ಸಂಘ ನೀಡಿರುವ ಮನವಿಗೆ ಸರ್ಕಾರ ಸ್ಪಂದಿಸಿದೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಪತ್ರ ಬಂದಿದೆ ನೀವು ಪತ್ರಕರ್ತರ ಪರವಾಗಿ ಒಂದೇ ಒಂದು ಹೋರಾಟ ಮಾಡಿ ಸರ್ಕಾರದಿಂದ ಬಂದಿರುವ ಒಂದೇ ಒಂದು ಪತ್ರವನ್ನು ತೋರಿಸಿ ಎಂದು ಸವಾಲು ಹಾಕಿದರು. ಸಂಘದ ಕಾರ್ಡ್ ಮುಂದಿಟ್ಟು ಪತ್ರಕರ್ತರ ಮೂಗಿಗೆ ತುಪ್ಪ ಸವರಿ ದುಡಿಸಿಕೊಳ್ಳುತ್ತಿದ್ದಾರೆ ಕೆಡ್ಲ್ಯೂಜೆ ರಾಜ್ಯಾದ್ಯಕ್ಷ ಶಿವಾನಂದ ತಗಡೂರು ರಾಜ್ಯದ ಪ್ರಮುಖ ಪತ್ರಿಕೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಅವರು ಕಾರ್ಯನಿರ್ವಹಿಸುವ ವಿಜಯವಾಣಿ ದಿನ ಪತ್ರಿಕೆಯಲ್ಲಿ ಜಿಲ್ಲಾ,ತಾಲ್ಲೂಕು, ಹಾಗೂ ಹೋಬಳಿ ಮಟ್ಟದ ನಿಮ್ಮ ಪತ್ರಿಕೆ ವರದಿಗಾರರಿಗೆ ಪೇ ಸ್ಲಿಪ್ ಹಾಗೂ ಜೀವವಿಮೆ ಕೊಡಿಸಲು ಇದುವರೆಗೂ ಸಾದ್ಯವಾಗಿಲ್ಲ ಇನ್ನೂ ರಾಜ್ಯದ ಪತ್ರಕರ್ತರ ಹಿತ ಕಾಯಲು ಸಾಧ್ಯವೇ? ಎಂದರು
ಪತ್ರಕರ್ತರ ಭವನಗಳು ಎಲ್ಲಾ ಸಂಘದ ಪತ್ರಕರ್ತರಿಗೂ ಬಳಕೆಗೆ ಒತ್ತಾಯ
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಪ್ರಭಾಕರ್ ರಾಜ್ಯದ ಎಲ್ಲಾ ಪತ್ರಕರ್ತರ ಪರವಾಗಿರಬೇಕಾಗಿತ್ತು ಕೇವಲ ಒಂದು ಜಿಲ್ಲೆಗೆ ಸೀಮಿತರಾಗಿದ್ದಾರೆ ಇದು ಸರಿಯಾದುದಲ್ಲ ರಾಜ್ಯದ ವಾರ್ತಾ ಇಲಾಖೆಯಲ್ಲಿ 300 ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ ಇದರಿಂದ ಸಮಸ್ಯೆ ಬಗೆಹರಿಸಲು ಸಾದ್ಯವೇ ಅದ್ದರಿಂದ ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಬೇಕು ಕೆಲವು ಜಿಲ್ಲೆಗಳಲ್ಲಿ ಪತ್ರಿಕಾ ಭವನಗಳು ಒಂದು ಸಂಘದ ಆಸ್ತಿಯಂತಾಗಿವೆ, ಸರ್ಕಾರ ಕೂಡಲೇ ಪತ್ರಿಕಾ ಭವನಗಳನ್ನು ಆಯಾ ಜಿಲ್ಲಾಧಿಕಾರಿಗಳಿಗೆ ವಹಿಸಿ ಎಲ್ಲಾ ಸಂಘದ ಪತ್ರಕರ್ತರಿಗೂ ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಅಕ್ರಿಡೇಷನ್ ಕಾರ್ಡ್ ಕೇವಲ ಪತ್ರಿಕಾ ಮಾಲಿಕರು ಅವರ ಕುಟುಂಬಕ್ಕಾ
ರಾಜ್ಯದಲ್ಲಿ ಹದಿನಾರು ಸಾವಿರ ಪತ್ರಕರ್ತರಿದ್ದಾರೆ ಸರ್ಕಾರದಿಂದ ಬಂದಿರುವ ಅಕ್ರಿಡೇಷನ್ ಕಾರ್ಡಗಳು ಯಾರ ಪಾಲಾಗಿವೆ ಕೇವಲ ಮಾಲೀಕರು,ಮಾಲೀಕರ ಕುಟುಂಬ ಮಾತ್ರ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರಾ ನಮ್ಮ ಸಂಘ ಕೇವಲ ನಮ್ಮ ಸಂಘದ ಸದಸ್ಯರ ಜೊತೆಗೆ ರಾಜ್ಯದ ಎಲ್ಲಾ ಹದಿನಾರು ಸಾವಿರ ಪತ್ರಕರ್ತರ ಪರವಾಗಿ ಅಕ್ರಿಡೇಷನ್ ಕಾರ್ಡ್,ಪತ್ರಕರ್ತರ ಮಾಸಾಶನ,ಪತ್ರಕರ್ತರ ರಕ್ಷಣಾ ಕಾಯ್ದೆ ಸೇರಿದಂತೆ ಹತ್ತು ಹಲವು ಮೂಲಭೂತ ಸೌಕರ್ಯಗಳನ್ನು ಮುಂದಿಟ್ಟು ರಾಜ್ಯಾದ್ಯಂತ ಸಾವಿರಾರು ಪತ್ರಕರ್ತರ ಜೊತೆ ಬೀದಿಯಲ್ಲಿ ನಿಂತು ಹೋರಾಟ ಮಾಡಲಾಗುತ್ತಿದೆ ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ಈಗಾಗಲೇ ಸರ್ಕಾರ ತಿಳಿಸಿದೆ ಬಸ್ ಪಾಸ್ ನೀಡುವ ವಿಚಾರದಲ್ಲಿ ಯಾವ ಮಾನದಂಡ ಬಳಸುತ್ತಾರೆ ನೋಡಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಿ ಮುಂದಿನ ತಿರ್ಮಾನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾ.ನಿ.ಪ.ದ್ವನಿ ರಾಜ್ಯ ಉಪಾಧ್ಯಕ್ಷ ಎಸ್.ಎಸ್.ಪಾಟೀಲ್,ರಾಜ್ಯ ಮಾದ್ಯಮ ಸಲಹೆಗಾರ ಜಗಳೂರು ಲಕ್ಷ್ಮಣ್ ರಾವ್,ರಾಜ್ಯ ಹಿರಿಯ ಪತ್ರಕರ್ತ ವಾಸುದೇವ್,ರಾಜ್ಯ ಕಾರ್ಯಾಧ್ಯಕ್ಷ ಇರ್ಫಾನ್,ಸೇರಿದಂತೆ ಎಲ್ಲಾ ಜಿಲ್ಲೆಯ ಅದ್ಯಕ್ಷರು,ತಾಲ್ಲೂಕು ಅಧ್ಯಕ್ಷರು,ಸಂಘದ ಪದಾಧಿಕಾರಿಗಳು,ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು. ಹೋರಾಟದ ಮನವಿ ಪತ್ರವನ್ನು ಇಂದು ಮಾನ್ಯ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಗಳಾದ ಅರುಣ ಪೋರ್ಟೋಡೋ ರವರಿಗೆ ಹಿರಿಯ ಪತ್ರಕರ್ತರು ಮಾಧ್ಯಮ ಸಲಹೆಗಾರರಾದ ಜಗಳೂರು ಲಕ್ಷ್ಮಣ ರಾವ್,ರಾಜ್ಯ ಉಪಾಧ್ಯಕ್ಷರಾದ ಎಸ್.ಎಸ್.ಪಾಟೀಲ್, ರಾಜ್ಯ ಕಾರ್ಯದರ್ಶಿಗಳಾದ ಶರಣ ಬಸವ,ದತ್ತು ಪವಾರ್ ರವರು ಸಲ್ಲಿಸಿ ಸ್ವೀಕೃತಿ ಪಡೆದರು.