- Advertisement -
ಬೀದರ – ಜೋಳ ಕಟಾವಿಗೆ ಹೊಲಕ್ಕೆ ತೆರಳಿದ ವೇಳೆ ಮಹಿಳೆಯೊಬ್ಬರ ಮೇಲೆ ಕಾಡು ಹಂದಿ ದಾಳಿ ಮಾಡಿದ್ದು ಅವರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಬೀದರ್ ತಾಲೂಕಿನ ಹೊಕ್ರಾಣ (ಕೆ) ಗ್ರಾಮದಲ್ಲಿ ನಡೆದಿದೆ.
ಮೃತಳ ಮನೆಗೆ ಭೇಟಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಲಿದ್ದು ಸಾಂತ್ವನ ಹೇಳಲಿದ್ದಾರೆ.
ಕವಿತಾ ರವಿಕುಮಾರ ಎಂಬ (45) ಮೃತ ದುರ್ದೈವಿ. ಅಹಮ್ಮದ್ ಅಲಿ ಖಾಜಾ ಸಾಬ್ ಎಂಬುವವರ ಜಮೀನಿಗೆ ನಾಲ್ವರು ಮಹಿಳೆಯರೊಂದಿಗೆ ಕೂಲಿ ಕೆಲಸಕ್ಕೆ ತೆರಳಿದ್ದ ಕಾಡು ಹಂದಿ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -
ವರದಿ: ನಂದಕುಮಾರ ಕರಂಜೆ, ಬೀದರ