ಕಾಶಿ ಪೀಠದ ಗುರು ಮುಪ್ಪಿನ ಸ್ವಾಮಿ 18ನೇ ರಥೋತ್ಸವ

0
208

 

ಹುನಗುಂದ  ತಿಮ್ಮಾಪುರ ಹುನಗುಂದ ತಾಲೂಕಿನ ಸುಕ್ಷೇತ್ರ ಚಿತ್ತರಗಿಯ ಕಾಶಿ ಪೀಠದ  ಶಾಖಾಮಠದ ಗುರು ಮುಪ್ಪಿನ ಸಾಮಿ ಮಠದ 18ನೇ ಮಹಾರಥೋತ್ಸವ 9.03.2024

ಶನಿವಾರ ಸಾಯಂಕಾಲ 5:00 ಗಂಟೆಗೆ ಜರುಗಲಿದೆ ಎಂದು ಯಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಶಿವಕುಮಾರ್ ಗಂಗಾಧರ ಶಾಸ್ತ್ರಿಗಳು ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಚಿತ್ತರಗಿಯ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಗುರು ಮಹಾಂತ ಶ್ರೀಗಳು ಕಸಬಾ ಜಂಬಿಗಿಯ ರುದ್ರಮುನಿ ಶ್ರೀಗಳು ವಹಿಸಲಿದ್ದಾರೆ.

ಅಧ್ಯಕ್ಷತೆಯನ್ನು ಗುಳೇದಗುಡ್ಡ ಮರಡಿಮಠದ ಕಾಡಸಿದ್ದೇಶ್ವರ ರುದ್ರಮುನಿ ಶ್ರೀಗಳು ಕೂಡಲಸಂಗಮ  ಜಾತವೇದ ಮುನಿ ಶ್ರೀಗಳು ಬಿಲ್ ಕೆಲೂರ್ ಸಿದ್ದಲಿಂಗ ಶ್ರೀಗಳು ಮುಳ್ಳೂರು ಚಂದ್ರಶೇಖರ ಶ್ರೀಗಳು ವಹಿಸಲಿದ್ದಾರೆ.

ನೇತೃತ್ವವನ್ನು ಕಲಾದಗಿ ಮಹಾಂತ ದೇವರು ಮುತ್ತತ್ತಿ ವೀರ ರುದ್ರಮುನಿ ಶ್ರೀಗಳು ಕಮತಿಗಿಯ ಶಿವಕುಮಾರ ಶ್ರೀಗಳು ವಹಿಸಲಿದ್ದಾರೆ

ಮುಖ್ಯ ಅತಿಥಿಗಳಾಗಿ ಹುನಗುಂದ ಶಾಸಕ ವಿಜಯಾನಂದ ಎಸ್ ಕಾಶಪ್ಪನವರ, ಸಂಸದ ಪಿ ಸಿ ಗದ್ದಿಗೌಡರ, ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಆಗಮಿಸಲಿದ್ದಾರೆ.

ಅತಿಥಿಗಳಾಗಿ ಹುನುಗುಂದದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಬಿಜಾಪುರ ಮತ್ತು ಬಾಗಲಕೋಟ ವಿಧಾನ ಪರಿಷತ್ ಸದಸ್ಯ ಪಿಎಚ್ ಪೂಜಾರ ಉದ್ಯಮಿದಾರ ಎಸ್ ಆರ್ ನವಲಿ ಹಿರೇಮಠ ಚಿತ್ತರಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾಂತೇಶ ಬಾರಡ್ಡಿ ಉಪಾಧ್ಯಕ್ಷೆ ಅಕ್ಕಮಹಾದೇವಿ ಗಿರೀಶ ಪೂಜಾರಿ ಹಾಗೂ ಸದಸ್ಯರು ಭಾಗವಹಿಸಲಿದ್ದಾರೆ 

ಜಾತ್ರೆಯ ನಿಮಿತ್ತ 8.3.2024ರಂದು ಶುಕ್ರವಾರ ರಾತ್ರಿ ಶಿವ ಭಜನೆ ನಡೆಯುವುದು 9ರಂದು ಶನಿವಾರ ಬೆಳಿಗ್ಗೆ ಕರ್ತ ಗದ್ದೆಗೆ ರುದ್ರಭಿಷೇಕ ಹಾಗೂ ಅಯ್ಯಾಚಾರ ನಡೆಯುವುದು ಮಧ್ಯಾಹ್ನ 12 ಗಂಟೆಗೆ ಮಹಾಗಣರಾಧನೆ ಹಾಗೂ ಸಾಯಂಕಾಲ 5:00ಗೆ ಮಹಾರಥೋತ್ಸವ ಜರುಗುವುದು.

ವಚನ ಸಂಗೀತ ಕಾರ್ಯಕ್ರಮ ಬಾಗಲಕೋಟೆಯ ಶ್ರೀ ಗುರು ಪಂಚಾಕ್ಷರ ಸಂಗೀತ ಶಾಲೆ ಯವರಿಂದ ನಡೆಯಲಿದೆ  ಕಾರಣ ಸುತ್ತಮುತ್ತಲಿನ ಸದ್ಭಕ್ತರು ಬಂದು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಗುರು ಮುಪ್ಪಿನ ಸ್ವಾಮಿ, ಗುರು ಮುಪ್ಪಿನ ಸ್ವಾಮಿ ಮಠ ಸೇವಾ ಸಮಿತಿ ಎಂ ಎನ್ ಬಾವಿಮಠ ಸೇವಾ ಸಮಿತಿ ವಿಜಯ ಮಹಾಂತೇಶ್ವರ ಮಠ ಸೇವಾ ಸಮಿತಿ  ಯಾತ್ರಾ ಸಮಿತಿಯ ಅಧ್ಯಕ್ಷರಾದ ಶಿವಕುಮಾರ ಗಂಗಾಧರ್ ಶಾಸ್ತ್ರಿಗಳು ಹಿರೇಮಠ ಪ್ರಕಟಣೆಯಲ್ಲಿ ಕೊರಿದ್ದಾರೆ.

ಅವರ ಮೊಬೈಲ್ ಸಂಖ್ಯೆ 9448210166  974033 9233, ಸ 6366 616646 ಸಂಪರ್ಕಿಸಲು ಕೋರಲಾಗಿದೆ.